ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಬ್ಯಾಂಕ್‌ ನೌಕರರ ಮುಷ್ಕರ : ಬ್ಯಾಂಕಿಂಗ್‌ ಸೇವೆ ಕುಂಠಿತ

By Staff
|
Google Oneindia Kannada News

ನವದೆಹಲಿ: ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಬ್ಯಾಂಕ್‌ ನೌಕರರು ರಾಷ್ಟ್ರೀಕೃತ ಬ್ಯಾಂಕ್‌ ನೀತಿಯ ತಿದ್ದುಪಡಿಯ ವಿರುದ್ಧ ಬುಧವಾರದಂದು ಮುಷ್ಕರ ಹೂಡಿರುವುದರಿಂದ ದೇಶಾದ್ಯಂತ ಬ್ಯಾಂಕ್‌ ವ್ಯವಹಾರಗಳು ಕುಂಠಿತವಾಗಿದ್ದವು.

ಸರಕಾರವು ಬ್ಯಾಂಕ್‌ ವಲಯದಲ್ಲಿ ಶೇ 51ಕ್ಕಿಂತ ಕಡಿಮೆ ಬಂಡವಾಳ ತೊಡಗಿಸಲು ನಿರ್ಧರಿಸುವುದನ್ನು ವಿರೋಧಿಸಿ ಬ್ಯಾಂಕ್‌ ನೌಕರರ ರಾಷ್ಟ್ರೀಯ ಸಂಘಟನೆ ಮುಷ್ಕರಕ್ಕೆ ಕರೆಕೊಟ್ಟಿತ್ತು. ಈ ಸಂದರ್ಭದಲ್ಲಿ ಹಣಕಾಸು ಸಚಿವ ಯಶವಂತ ಸಿನ್ಹಾ , ಸರಕಾರ ತನ್ನ ನಿರ್ಧಾದಲ್ಲಿ ಯಾವುದೇ ಬದಲಾವಣೆ ಮಾಡದು, ಈ ಕುರಿತ ತಿದ್ದು ಪಡಿಯನ್ನು ಸದನದಲ್ಲಿ ಮಂಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದಿದ್ದಾರೆ. ಒಂದು ದಿನದ ಮುಷ್ಕರದಿಂದಾಗಿ ಸುಮಾರು ಒಂದು ಬಿಲಿಯನ್‌ ರೂಪಾಯಿ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಮುಷ್ಕರ :
ಬೆಂಗಳೂರಿನಲ್ಲಿ ಹೆಚ್ಚಿನ ಬ್ಯಾಂಕ್‌ಗಳು ಮುಚ್ಚಿದ್ದವು. ಕೆಲವು ಬ್ಯಾಂಕ್‌ಗಳಲ್ಲಿ ಸ್ವಯಂ ನಿವೃತ್ತಿ ಪಡೆಯಲಿಚ್ಛಿಸಿದ ನೌಕರರು ಕೆಲಸಕ್ಕೆ ಹಾಜರಾಗಿದ್ದರು. ಆದರೆ ಶೇ. 75ರಷ್ಟು ಮಂದಿ ನೌಕರರು ಕೆಲಸಕ್ಕೆ ಹಾಜರಾಗಿರಲಿಲ್ಲ. ಆದ್ದರಿಂದ ಹೆಚ್ಚಿನ ಬ್ಯಾಂಕ್‌ಗಳಲ್ಲಿ ಗ್ರಾಹಕ ಸೇವೆ ಇರಲಿಲ್ಲ. ಕೆಲವು ಬ್ಯಾಂಕ್‌ಗಳಲ್ಲಿ ವಿದೇಶೀ ವಿನಿಮಯ ವಿಭಾಗವೂ ಸಂಪೂರ್ಣವಾಗಿ ಮುಚ್ಚಿದ್ದವು. ಆದರೆ ವಿದೇಶೀ ಮತ್ತು ಖಾಸಗೀ ಬ್ಯಾಂಕ್‌ಗಳ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಆದಾಗ್ಯೂ ಇಂಡಿಯನ್‌ ಬ್ಯಾಂಕ್‌ ಆಫೀಸರ್ಸ್‌ ಕಾಂಗ್ರೆಸ್‌ ಮತ್ತು ಶಿವಸೇನೆಯ ಬ್ಯಾಂಕ್‌ ಕರ್ಮಾಚಾರಿ ಸೇನಾ ಮಹಾ ಸಂಘ ಈ ಮುಷ್ಕರದಲ್ಲಿ ಭಾಗವಹಿಸಲಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X