ಹೆದ್ದಾರಿ ದರೋಡೆ: 10 ಮಂದಿ ಡಕಾಯಿತರ ತಂಡದ ಬಂಧನ
ಬೆಂಗಳೂರು : ನಗರದ ಅಪರಾಧ ಶೋಧ ದಳದ ಪೊಲೀಸರು 10 ಮಂದಿಯ ಅಂತರರಾಜ್ಯ ಡಕಾಯಿತರ ತಂಡವನ್ನು ಬಂಧಿಸಿದೆ. ಆರೋಪಿಗಳಿಂದ 40 ಲಕ್ಷ ರುಪಾಯಿ ಮೌಲ್ಯದ ಸಿಗರೇಟು ಪೆಟ್ಟಿಗೆ, ಕಾಫಿ ಮುಂತಾದ ಗ್ರಾಹಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಪೊಲೀಸರ ವ್ಯಾಪಕ ತನಿಖೆಯ ನಂತರ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ. ತಂಡದ ಸದಸ್ಯರು ಟ್ರಕ್ ಮತ್ತು ಲಾರಿಗಳ ಚಾಲಕರು, ಕ್ಲೀನರ್ಗಳ ಮೇಲೆ ಹಲ್ಲೆ ನಡೆಸಿ, ವಸ್ತುಗಳನ್ನು ದೋಚಿ ಆನಂತರ ಮಾರಿಕೊಳ್ಳುತ್ತಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ತಾನೇ ಆಂಧ್ರ ಪ್ರದೇಶದ ಪೆನುಕೊಂಡ ಸಮೀಪ ನಡೆದ ಹೆದ್ದಾರಿ ದರೋಡೆಯಲ್ಲಿ ಐಟಿಸಿ ಕಂಪನಿಯ ಸಿಗರೇಟುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ದರೋಡೆಕೋರರು ದೋಚಿದ್ದರು. ಅಪರಾಧಿಗಳನ್ನು ಬಂಧಿಸುವ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನವನ್ನು ಐಟಿಸಿ ಕಂಪನಿ ಪ್ರಕಟಿಸಿತ್ತು .
ಸಾಮಗ್ರಿಗಳನ್ನು ಸಾಗಿಸಲು ದರೋಡೆಕೋರರು ಬಳಸುತ್ತಿದ್ದ ಎರಡು ಲಾರಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಪಿನ ಸದಸ್ಯರು ಇನ್ನೂ ಹೆಚ್ಚಿರಬಹುದೆಂದು ಶಂಕಿಸಿರುವ ಪೊಲೀಸರು, ತಂಡಕ್ಕೆ ಸೇರಿದ ಇತರ ದರೋಡೆಕೋರರ ಶೋಧದ ಪ್ರಯತ್ನದಲ್ಲಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications