ಚುಕ್ಕಿ ಚಂದ್ರಮರ ಚೆಲುವ ನೋಡಿರಿ
ಬೆಂಗಳೂರು : ಹುಣ್ಣಿಮೆಯ ಪೂರ್ಣ ಚಂದ್ರ ಪಾಡ್ಯ, ಬಿದಿಗೆಗೇ ಕೊಂಚ ಕ್ಷೀಣಿಸಿದ್ದಾನಾದರೂ, ಸಂಜೆಯ ತಂಪನೆಯ ಹವೆಯಲ್ಲಿ ವಾಯುವಿಹಾರ ಮಾಡುತ್ತಾ ಶುಭ್ರ ಆಕಾಶದಲ್ಲಿ ಚುಕ್ಕಿ ಚಂದ್ರಮರ ನೋಡುವುದೇ ಒಂದು ಚೆಂದ.
ಚಂದ್ರನ ಚೆಲುವಿಗೆ ಚಂದ್ರನೇ ಸಾಟಿ ಅಲ್ಲವೇ. ಈಗಂತೂ ರಾಜ್ಯದಲ್ಲಿ ಮಳೆಯ ಕಾಟವಿಲ್ಲ. ಮಳೆರಾಯ ಸದ್ದಡಗಿದ ಮೊಡಗಳ ಮರೆಯಲ್ಲಿ ಈಹೊತ್ತು ವಿಶ್ರಾಂತ ಜೀವನ ನಡೆಸುತ್ತಿದ್ದಾನೆ. ಮಳೆ, ಗಾಳಿ, ಗುಡುಗು, ಸಿಡಿಲಿನ ಆರ್ಭಟವಿಲ್ಲದ ನೀಲಿ ಬಾನಿನಲ್ಲಿ ಮೋಡಗಳ ಅಡಚಣೆಯೂ ಇಲ್ಲ. ಚಂದ್ರನ ಚೆಲುವಿನ ಆಸ್ವಾದನೆಗೆ ಇದಕ್ಕಿಂತ ಪ್ರಶಸ್ತ ಕಾಲ ಮತ್ತೊಂದು ಬೇಕೆ.
ರಾಜ್ಯದೆಲ್ಲೆಡೆ ಒಣಹವೆ. ಹಾಗೆಂದ ಮಾತ್ರಕ್ಕೆ ಬಿರು ಬಿಸಿಲೂ ಇಲ್ಲಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವೂ ಕೊಂಚ ತಗ್ಗಿದೆ. ರಾತ್ರಿಯ ಕನಿಷ್ಠ ತಾಪಮಾನವೂ ಇಳಿದಿದೆ. ಕೊರೆವ ಚಳಿಯಿನ್ನೂ ರಾಜ್ಯಕ್ಕೆ ಕಾಲಿಟ್ಟಿಲ್ಲ. ಶಾಲು, ಸ್ವೆಟರ್‌ಗಳು ಪೆಟ್ಟಿಗೆಯಿಂದ ಹೊರಗೆ ಬಂದಿಲ್ಲ. ಉಲ್ಲನ್ ರಗ್‌ಗಳು ಮಾತ್ರ ಮುಂಜಾನೆಯ ಹಿತವಾದ ನಡುಕಕ್ಕೆ ಬೆಚ್ಚನೆಯ ಅನುಭವ ನೀಡಿವೆ.
ಮುನ್ಸೂಚನೆಯೂ ಇಂದಿನ ಹವಾಮಾನದ ಮುಂದುವರಿಕೆಯ ಭವಿಷ್ಯವನ್ನೇ ನುಡಿಯುತ್ತಿವೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 14.9 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನವೇ ರಾಜ್ಯದ ಅತ್ಯಂತ ಕನಿಷ್ಠ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲೂ ಶುಭ್ರ ಆಕಾಶವಿದ್ದು, ರಾತ್ರಿಯ ಕನಿಷ್ಠ ಉಷ್ಣಾಂಶ 17 ಡಿಗ್ರಿ ತಲುಪೀತು ಎನ್ನುತ್ತದೆ ಹವಾಮಾನ ವೀಕ್ಷಣಾಲಯ. ಬಿಡುವಿದ್ದರೆ, ಬೆಂಗಳೂರಿನ ಉದ್ಯಾನಗಳಲ್ಲಿ ಈವ್ನಿಂಗ್ ಹೊತ್ತಿನಲ್ಲಿ ಅಡ್ಡಾಡಿ, ಬಿಸಿ ಬಿಸಿ ಕಡಲೇಕಾಯಿ ತಿನ್ನುತ್ತಾ (ಬಸವನ ಗುಡಿಯ ಕಡಲೇಕಾಯಿ ಪರಿಷೆಯೂ ಹತ್ತಿರವಾಗುತ್ತಿದೆ), ಪಾನೀಪುರಿ ಅಂಗಡಿಯ ಬಳಿ ಸಾರುತ್ತಾ, ಮುಗಿಲಿನೆಡೆ ಮುಖಮಾಡಿ ಚಂದ್ರನ ಚೆಂದವ ಸವಿಯುವ ಅವಕಾಶ ತಪ್ಪಿಸಿಕೊಳ್ಳದಿರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications