ಇನ್ನೊಮ್ಮೆ ಮರು ಎಣಿಕೆ, ರಿಪಬ್ಲಿಕನ್ನರು ಕೋರ್ಟಿಗೆ,ಫಲಿತಾಂಶ ಎಂದು?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಗಳನ್ನು 3ನೇ ಬಾರಿ ಮರುಎಣಿಕೆ ಮಾಡುವುದನ್ನು ರಿಪಬ್ಲಿಕನ್ ಪಕ್ಷದ ವಕೀಲರು ಪ್ರಶ್ನಿಸಿದ್ದು, ಅಮೆರಿಕ ಫೆಡರಲ್ ಕೋರ್ಟಿನಲ್ಲಿ ಸೋಮವಾರ ಈ ಕುರಿತು ವಿಚಾರಣೆ ನಡೆಯಲಿದೆ. ಈ ಎಲ್ಲಾ ಮಹತ್ತರ ಐತಿಹಾಸಿಕ ಬೆವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಅಮೆರಿಕ ಅಧ್ಯಕ್ಷರಾರು ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯ ಬೇಕಾಗಿದೆ.
ಫ್ಲೋರಿಡಾ ಕ್ಷೇತ್ರದಲ್ಲಿ ಮರು ಎಣಿಕೆಯಿಂದ ಸೋಲಿನ ಅಂತರವನ್ನು ಅತಿ ಕಡಿಮೆ ಮಾಡಿಕೊಂಡ ಡೆಮಾಕ್ರಟಿಕ್ ಪಕ್ಷದ ಲ್ ಗೋರ್, ಅಲ್ಲಿನ 4 ಕೌಂಟಿಗಳಲ್ಲಿ ಪುನಃ ಮರು ಎಣಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಲ್ಮ್ ಬೀಚ್ ಕೌಂಟಿಯಲ್ಲಿ ಮತದಾರರು ಮತಗಳನ್ನು ಸರಿಯಾಗಿ ಪಂಚ್ ಮಾಡಿಲ್ಲ. ಇದರಿಂದ ನಮ್ಮ ಪಕ್ಷದ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಡೆಮಾಕ್ರಟರು ದೂರಿದ್ದಾರೆ. ಈ ಕಾರಣ 4 ಲಕ್ಷದ 25 ಸಾವಿರ ಮತದಾರರನ್ನು ಹೊಂದಿರುವ ಈ ಕೌಂಟಿಯಲ್ಲೂ ಮರು ಎಣಿಕೆ ನಡೆಯುತ್ತಿದೆ. ಮರು ಎಣಿಕೆ ಮಾನವೀಕೃತವಾಗಿ ನಡೆಯುತ್ತಿದ್ದು, ಯಂತ್ರಗಳ ಸಹಾಯ ಪಡೆದಿಲ್ಲ.
ಪಾಲ್ಮ್ ಬೀಚ್ ಕೌಂಟಿಯಲ್ಲಿ ಮಾಡಲಾದ ಶೇ.1 ಮತಗಳ ಸ್ಯಾಂಪಲ್ ಮರುಎಣಿಕೆಯಲ್ಲಿ ಗೋರ್ ಅವರಿಗೆ 19 ಹೆಚ್ಚುವರಿ ಮತಗಳು ಸಂದಿವೆ. ಈ ಅಂಕಿಅಂಶದ ಪ್ರಕಾರ ಈ ಕ್ಷೇತ್ರದಲ್ಲಿ ಗೋರ್ ಒಟ್ಟು 2000 ಹೆಚ್ಚುವರಿ ಮತ ಪಡೆಯುವ ಸಾಧ್ಯತೆಯಿದೆ. ಈ ಕೌಂಟಿಯಲ್ಲಿ ಮರು ಎಣಿಕೆ ನಡೆಸುವಂತೆ 8 ನಾಗರಿಕರು ಕೋರ್ಟಿಗೆ ಅಹವಾಲು ಸಲ್ಲಿಸಿದ್ದಾರೆ.
ಫ್ಲೋರಿಡಾ ಮತ್ತು ಪಾಲ್ಮ್ ಬೀಚ್ ಕೌಂಟಿಗಳಲ್ಲಿ ಗೋರ್ ಪಕ್ಷದವರ ಒತ್ತಾಯದ ಮೇರೆಗೆ ಮರು ಎಣಿಕೆ ನಡೆಯುತ್ತಿದ್ದರೆ, ಲೋವಾ ಮತ್ತು ವಿಸ್ಕೋಸಿನ್ ಕ್ಷೇತ್ರಗಳಲ್ಲಿ ಅತಿ ಕಡಿಮೆ ಅಂತರದಲ್ಲಿ ಸೋತಿರುವ ಬುಷ್ ಈ ಕ್ಷೇತ್ರಗಳಲ್ಲೂ ಮರು ಎಣಿಕೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಗೆಗೆ ಜನ, ವಕೀಲರು ಇನ್ನೂ ಕೆಲ ವಾರಗಳ ಕಾಲ ಕೋರ್ಟಿಗೆ ಎಡತಾಕುತ್ತಲೇ ಇರುವ ಸೂಚನೆಗಳು ಕಂಡು ಬರುತ್ತಿದ್ದು, ಫಲಿತಾಂಶ ಪ್ರಕಟಣೆ ಸಾಕಷ್ಟು ವಿಳಂಬವಾಗುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications