Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ತಮಿಳು ನಾಟಕ ಪ್ರದರ್ಶನ ರದ್ದು

ಮೈಸೂರು : ಅಖಿಲ ಭಾರತ ನಾಟಕೋತ್ಸವದ ಅಂಗವಾಗಿ ಇಲ್ಲಿನ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ಪವಲಕುಡಿ ತಮಿಳು ನಾಟಕ ಪ್ರದರ್ಶನ ರಾಜ್‌ಕುಮಾರ್‌ ಅಭಿಮಾನಿಗಳ ಪ್ರತಿಭಟನೆಯಿಂದಾಗಿ ಏಕಾಏಕಿ ರದ್ದಾಯಿತು.

ಕಲಾಮಂದಿರದಲ್ಲಿ ಸೇರಿದ್ದ ರಾಜ್‌ ಅಭಿಮಾನಿಗಳು ನಾಟಕ ಶುರುವಾಗುತ್ತಿದ್ದಂತೆ ವೇದಿಕೆಗೆ ನುಗ್ಗಿ ಕರ್ನಾಟಕ ಹಾಗೂ ತಮಿಳು ನಾಡು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿ, ನಾಟಕ ಪ್ರದರ್ಶನವನ್ನು ರದ್ದು ಪಡಿಸಲು ಒತ್ತಾಯಿಸಿದರು. ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯಗಳ ಜಂಟಿ ಸಹಯೋಗದಲ್ಲಿ ಶನಿವಾರ ರಾತ್ರಿ ಈ ನಾಟಕದ ಪ್ರದರ್ಶನ ಏರ್ಪಾಡಾಗಿತ್ತು .

ರಾಜ್‌ಕುಮಾರ್‌ ಕಾಡಿನಲ್ಲಿರುವಾಗ ತಮಿಳು ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸ್ಥಳೀಯ ಸಂಘಟಕರ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದರು. ಇದರಿಂದಾಗಿ ನಾಟಕ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಪ್ರದರ್ಶನ ರದ್ದಾಯಿತು. ಉಳಿದ ಭಾಷೆಗಳ ನಾಟಕ ಪ್ರದರ್ಶನ ಯಥಾ ಪ್ರಕಾರ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+