Get Updates
Get notified of breaking news, exclusive insights, and must-see stories!

ಪಟೇಲ್‌ ಉಡಾಫೆಯೇ ರಾಜ್‌ ಅಪಹರಣಕ್ಕೆ ಕಾರಣ- ಕರುಣಾನಿಧಿ ಬಾಂಬ್‌

ಚೆನ್ನೈ : ನೆಡುಮಾರನ್‌ ನೇತೃತ್ವದ ಸಂಧಾನಕಾರರ ತಂಡ ಕಾಡಿನಲ್ಲಿರುವಾಗಲೇ, ರಾಜ್‌ ಅಪಹರಣಕ್ಕೆ ಕರ್ನಾಟಕ ಸರ್ಕಾರವೇ ಕಾರಣ ಎನ್ನುವ ಟೀಕಾ ಬಾಂಬನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸಿಡಿಸಿದ್ದಾರೆ.

ಟಾಡಾ ಅನ್ವಯ ಬಂಧಿಸಲಾಗಿರುವ ಕೆಲವು ನಿರ್ದೋಷಿ ತಮಿಳರನ್ನು ಬಿಡುಗಡೆ ಮಾಡುವಂತೆ ಪದೇ ಪದೇ ಕರ್ನಾಟಕ ಸರ್ಕಾರವನ್ನು ಕೇಳಿಕೊಂಡರೂ ಅದನ್ನು ಈಡೇರಿಸಲಿಲ್ಲವಾದ್ದರಿಂದಲೇ ರಾಜ್‌ಕುಮಾರ್‌ ಅಪಹರಣವಾಗಿದೆ ಎಂದು ಕರುಣಾನಿಧಿ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ನಡೆದ ಮುಂದೂಲ್ಪಟ್ಟಿದ್ದ ರಾಜ್‌ ಅಪಹರಣ ಪ್ರಕರಣದ ಚರ್ಚೆಯ ವೇಳೆಯಲ್ಲಿ ಅವರು ಈ ವಿಷಯ ತಿಳಿಸಿದರು. 1997ರಲ್ಲಿ ಜೆ.ಎಚ್‌.ಪಟೇಲರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ಜೈಲಿನಲ್ಲಿರುವ ನಿರ್ದೋಷಿ ತಮಿಳರನ್ನು ಬಿಡುವಂತೆ ಕೋರಿದ್ದೆ. ಅವರು ಕೂಡ ಅದಕ್ಕೆ ಒಪ್ಪಿದ್ದರು. ಆದರೆ ಹೇಳಿದಂತೆ ನಡೆಯಲಿಲ್ಲ. ಈ ವಿಷಯವನ್ನು ಪದೇ ಪದೇ ಅವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ ಎಂದರು.

ಈವತ್ತು ವೀರಪ್ಪನ್‌ ಟಾಡಾ ಬಂದಿಗಳ ಬಿಡುಗಡೆಗೆ ಪಟ್ಟು ಹಿಡಿದು ಕೂತಿದ್ದಾನೆ. ಈ ಹಿಂದೆಯೇ ನನ್ನ ಮಾತನ್ನು ಕರ್ನಾಟಕ ಸರ್ಕಾರ ಕೇಳಿದ್ದರೆ ಹೀಗಾಗುತ್ತಿರಲಿಲ್ಲ. ರಾಜ್‌ ಅಪಹರಣಕ್ಕೆ ಕರ್ನಾಟಕವೇ ಕಾರಣ. ಸರ್ಕಾರ ಸಂಧಾನಕ್ಕೆ ಕಳುಹಿಸಿರುವ ತಮಿಳು ರಾಷ್ಟ್ರೀಯ ಚಳವಳಿ (ಟಿಎನ್‌ಎಂ) ನಾಯಕ ಪಿ.ನೆಡುಮಾರನ್‌ ಅದಕ್ಕೆ ಅರ್ಹ ವ್ಯಕ್ತಿ. ಅವರ ಪಕ್ಷವನ್ನೂ ನಿಷೇಧಿಸಿಲ್ಲವಾದ್ದರಿಂದ ದೂತರನ್ನಾಗಿ ಅವರನ್ನು ಕುಹಿಸಿರುವುದರಲ್ಲಿ ತಪ್ಪೇನೂ ಇಲ್ಲವೆಂದು ತಿಳಿಸಿದರು.

ಬೆಂಗಳೂರು ವರದಿ : ಉಡುಪಿಯಲ್ಲಿ ಕನಕ ಜಯಂತಿ ಉತ್ಸವ ಉದ್ಘಾಟಿಸಿ ಬೆಂಗಳೂರಿಗೆ ಹಿಂತಿರುಗಿದ ಕೇಂದ್ರ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್‌ ತ್ವರಿತ ಬಿಡುಗಡೆಗಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಜೊತೆ ಚರ್ಚಿಸುವುದಾಗಿ ಭರವಸೆ ಕೊಟ್ಟರು.

ಬೆಂಗಳೂರಲ್ಲಿ ಕೇಳಿದ್ದು : ಕರುಣಾನಿಧಿಯವರ ಈ ಹೇಳಿಕೆ ಕಿವಿ ಮೇಲೆ ಬೀಳುತ್ತಲೇ ರಾಜ್‌ ಅಪಹರಣದ ಮೊದಲೊಂದು ತಿಂಗಳು ಕೇಳಿಬರುತ್ತಿದ್ದ ‘ಈ ಕೆಲಸ ಮಾಡಿಸಿರೋದು ಕರುಣಾನಿಧೀನೆ’ ಎಂಬಂತಹ ಕನ್ನಡಿಗರ ಮಾತುಗಳು ಮತ್ತೆ ಗಾಳಿಯಲ್ಲಿ ತೇಲುತ್ತಿವೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+