ವೀರಪ್ಪನ್ ಸಂಪರ್ಕ ಸಾಧಿಸಿದ್ದಾರಂತೆ ಪಿ. ನೆಡುಮಾರನ್
ಚೆನ್ನೈ: ಅಪಹರಣ ಪ್ರಕರಣ 107ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಆರನೇ ಸಂಧಾನಯಾತ್ರೆ ಆರಂಭಿಸಿರುವ ಪ್ರಮುಖ ಸಂಧಾನಕಾರರಾದ ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್ ಅವರು ವೀರಪ್ಪನ್ ಸಂಪರ್ಕ ಸಾಧಿಸಿದ್ದಾರೆ.
ಶನಿವಾರ ಸಂಜೆ ತಮ್ಮ ಅನುಯಾಯಿಯಾಬ್ಬರೊಂದಿಗೆ ಸತ್ಯಮಂಗಲಂ ಕಾಡಿನಲ್ಲಿನಲ್ಲಿ ತಂಗಿದ್ದ ನೆಡುಮಾರನ್ ಬೆಳಗಿನ ಜಾವ ಕಾಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಟಾಟಾ ಸುಮೊ ಒಂದರಲ್ಲಿ ಬಣ್ಣಾರಿ ಅರಣ್ಯಪ್ರದೇಶದ ಮೂಲಕವೇ ತೆರಳಿದ ಅವರು, ಭವಾನಿ ಸಾಗರಕ್ಕೆ ಹೋಗುವ ದಾರಿಯಲ್ಲಿ ಕೊತ್ತಮಂಗಲಮ್ ಬಳಿಯ ತೀರ್ ಕಡವು ಎಂಬಲ್ಲಿಂದ ಮೋಟಾರ್ ಬೈಕ್ ಒಂದರಲ್ಲಿ ಅರಣ್ಯದತ್ತ ತೆರಳಿದರು. ಅಲ್ಲಿ ವೀರಪ್ಪನ್ ಸಹಚರರ ಸಂಪರ್ಕ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಭಾನುವಾರ ಮಧ್ಯಾಹ್ನದಿಂದಲೇ ಸಂಧಾನ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ನೆಡುಮಾರನ್ ಅವರ ಜೊತೆ ಮಾನವ ಹಕ್ಕುಗಳ ಕಾರ್ಯಕರ್ತರಾದ ಪ್ರೊ. ಕಲ್ಯಾಣಿ ಮತ್ತು ಪಿ. ಸುಕುಮಾರನ್ ಸಹ ಹೋಗಿದ್ದಾರೆ. ಎರಡು ರಾಜ್ಯಗಳ ಅಧಿಕೃತ ಸಂಧಾನಕಾರರಾದ ಗೋಪಾಲ್ ಹೊರಡುವುದು ವಿಳಂಬವಾಗಿದ್ದು, ವೀರಪ್ಪನ್ನಿಂದ ಸಂದೇಶ ಬಂದ ನಂತರ ಇತರ ಸಂಧಾನಕಾರರನ್ನು ಕೂಡಿಕೊಳ್ಳುವರೆಂದು ನಕ್ಕಿರನ್ ಸಹಸಂಪಾದಕ ಕಾಮರಾಜ್ ಹೇಳಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications