ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಟ್‌ಗೆ ಲೆಜೆಂಡ್ಸ್‌ ಕಪ್‌, ಕೃಷ್ಣಗೆ ಪ್ರತಿವರ್ಷ ಟೂರ್ನಿ ನಡೆಸುವಾಸೆ

By Staff
|
Google Oneindia Kannada News

ಬೆಂಗಳೂರು : ಭಾನುವಾರ ಮುಗಿದ ‘ಹಳೆಯ ಹುಲಿ’ಗಳ ಟೆನಿಸ್‌ ಕಾಳಗದ ಫೈನಲ್ಸ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್‌ ಕ್ಯಾಷ್‌ ನೆಚ್ಚಿನ ಆಟಗಾರ ಸ್ವೀಡನ್‌ನ ಬೋನ್‌ ಬೋರ್ಗ್‌ ಅವರನ್ನು ಸೋಲಿಸಿ, ಲೆಜೆಂಡ್ಸ್‌ ಕಪ್‌ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿದರು.

ಪ್ರತಿ ನಿಮಿಷವೂ ಸ್ಪಧಾತ್ಮಕವಾಗಿದ್ದ ಪಂದ್ಯದಲ್ಲಿ ಗೆಲುವಿನ ಪೆಂಡ್ಯುಲಮ್‌ ಕಡೆಗೆ ನಿಂತದ್ದು ಕ್ಯಾಷ್‌ ಬಳಿ. 4-6, 7-5 ಹಾಗೂ 7-10ರಲ್ಲಿ ಕ್ಯಾಷ್‌ ಗೆದ್ದರು. ಡಬಲ್ಸ್‌ ಫೈನಲ್ಸ್‌ನಲ್ಲಿ ಬೋರ್ಗ್‌ ಮತ್ತು ಇರಾನ್‌ನ ಮನ್ಸೂರ್‌ ಬರಾಮಿ ಜೋಡಿ ಭಾರತದ ವಿಜಯ್‌ ಅಮೃತ ರಾಜ್‌ ಮತ್ತು ಫ್ರಾನ್ಸ್‌ನ ಹೆನ್ರಿ ಲೆಕಾಂಟೆ ವಿರುದ್ಧ 3-6, 6-2, 10-4ರಲ್ಲಿ ಜಯ ಸಾಧಿಸಿತು.

ಪ್ರಶಸ್ತಿಗಳನ್ನು ವಿತರಿಸಿದ ಟೆನಿಸ್‌ ಅಭಿಮಾನಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಇನ್ನು ಮುಂದೆ ಪ್ರತಿ ವರ್ಷ ಹಳೆಯ ಖ್ಯಾತ ಟೆನಿಸಿಗರ ಟೂರ್ನಿಯನ್ನು ನಡೆಸಲು ಈಗ ನಡೆದ ಟೂರ್ನಿ ಸ್ಫೂರ್ತಿ ನೀಡಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಹಾಗೂ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಕೂಡ ಟೆನಿಸ್‌ ಪಂದ್ಯಗಳನ್ನು ವೀಕ್ಷಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X