Get Updates
Get notified of breaking news, exclusive insights, and must-see stories!

ಐತಿಹಾಸಿಕ ಬಾಂಗ್ಲಾ ಟೆಸ್ಟ್‌ : ಗೆಲ್ಲಲು ಭಾರತಕ್ಕೆ 63 ರನ್‌ ಸಾಕು

ಢಾಕಾ : ಬಂಗಬಂಧು ಕ್ರೀಡಾಂಗಣದಲ್ಲಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆಲುವಿನ ಮೆಟ್ಟಿಲ ಮೇಲೆ ನಿಂತಿದೆ. ಭಾರತ ಗೆಲ್ಲಲು ಮಾಡಬೇಕಿರುವುದು ಕೇವಲ 63 ರನ್‌.

ಪಂದ್ಯದ ನಾಲ್ಕನೇ ದಿನವಾದ ಸೋಮವಾರ ತನ್ನ 7 ವಿಕೆಟ್‌ಗೆ 366 ರನ್‌ಗಳ ಆಟ ಮುಂದುವರೆಸಿದ ಭಾರತ ಇನ್ನೂ 73 ರನ್‌ ಸೇರಿಸಿ ಲಂಚ್‌ ವಿರಾಮಕ್ಕೆ 7 ನಿಮಿಷಗಳಿರುವಂತೆ ಆಲೌಟ್‌ ಆಯಿತು. ಕೇವಲ 8 ರನ್‌ಗಳಿಂದ ಚೊಚ್ಚಲ ಶತಕ ವಂಚಿತರಾದ ಕರ್ನಾಟಕದ ಆಲ್‌ರೌಂಡರ್‌ ಸುನಿಲ್‌ ಜೋಷಿ 92 ರನ್‌ ಗಳಿಸಿದರು. ಇವರೊಂದಿಗೆ ಉತ್ತಮ ಸಾಥ್‌ ನೀಡಿದ ಅಜಿತ್‌ ಅಗರ್ಕರ್‌ 34 ರನ್‌ ಗಳಿಸಿದರು. ಬಾಂಗ್ಲಾ ಪರ ಎನ್‌.ರೆಹಮಾನ್‌ 6 ವಿಕೆಟ್‌ ಕಿತ್ತರು.

ಕೇವಲ 29 ರನ್‌ಗಳ ಹಿನ್ನೆಡೆಯಿಂದ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಭಾರತದ ದಾಳಿಗೆ ತುಪತುಪನೆ ಉದುರಿದರು. ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ ಬಾರಿಸಿದ್ದ ಬಶಿರ್‌ (30) ಮತ್ತು ಮಸೂದ್‌ (21) ಹೊರತು ಪಡಿಸಿ ಮಿಕ್ಕವರಾರೂ ನಿಂತು ಆಡಲಿಲ್ಲ. ಜಾಹಿರ್‌ ಖಾನ್‌ ಬೌಲಿಂಗ್‌ನಲ್ಲಿ ರಿಟೈರ್ಡ್‌ ಹರ್ಟ್‌ ಆಗಿದ್ದ ಆರಂಭಿಕ ಆಟಗಾರ ಹುಸೇನ್‌ ಮತ್ತೆ ಕ್ರೀಸಿಗೆ ಬಂದರಾದರೂ ಗಳಿಸಿದ್ದು 6 ರನ್‌ ಮಾತ್ರ. ಕೇವಲ 91 ರನ್‌ಗಳಿಗೆ ಬಾಂಗ್ಲಾದ ಎಲ್ಲಾ ವಿಕೆಟ್‌ಗಳೂ ಉದುರಿದವು.

ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತು, 92 ರನ್‌ಗಳಿಸಿರುವ ಜೋಶಿ ತಮ್ಮ ಮೊನಚನ್ನು ಮುಂದುವರೆಸಿ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಯತ್ತ ನೊಡುತ್ತಿದ್ದಾರೆ. ಬಹಳ ದಿನಗಳಿಂದ ಮೈದಾನದಿಂದ ಹೊರಗಿದ್ದ ನಂತರ ಮತ್ತೆ ಅಖಾಡಕ್ಕೆ ಇಳಿದಿರುವ ಮೈಸೂರು ಎಕ್ಸ್‌ಪ್ರೆಸ್‌ ಶ್ರೀನಾಥ್‌ ವಿಕೆಟ್‌ ಬರ ಕಳೆದಿದ್ದು, 3 ವಿಕೆಟ್‌ ಸಿಕ್ಕವು. ಅಗರ್ಕರ್‌ 2 ವಿಕೆಟ್‌ ಕಿತ್ತರೆ, ಖಾನ್‌ ಮತ್ತು ಮುರಳಿ ಕಾರ್ತಿಕ್‌ಗೆ ತಲಾ 1 ವಿಕೆಟ್‌ ಸಿಕ್ಕಿತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+