ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡಿನೋವು ವಾಸಿಯಾದ ಸಂಭ್ರಮ: ಮಕ್ಕಳೊಂದಿಗೆ ಮಗುವಾದ ಪ್ರಧಾನಿ

By Staff
|
Google Oneindia Kannada News

ನವದೆಹಲಿ : ‘ಮಂಡಿ ನೋವು ವಾಸಿಯಾಯಿತಾ?’ ಪುಟಾಣಿಯ ಮಾತು ಮುಗಿಯುವ ಮುನ್ನವೇ ‘ನಿಮಗೆ ಓಡಾಡಲು ಸಾಧ್ಯವಾಗುತ್ತಾ ?’ ಎಂದು ಮತ್ತೊಬ್ಬ ಪುಟ್ಟಿ ಕೇಳುತ್ತಾಳೆ. ಅವರು ಕುಳಿತಲ್ಲಿಂದ ಎದ್ದು ನಾಲ್ಕಾರು ಹೆಜ್ಜೆ ಹಾಕಿದಾಗ ಪ್ರಶ್ನೆ ಕೇಳಿದ ಎಳೆ ಕಂಗಳಲ್ಲಿ ಸಮಾಧಾನದ ಹೊಳಪು.

ನಂ 7, ರೇಸ್‌ಕೋರ್ಸ್‌ ರಸ್ತೆ , ನವ ದೆಹಲಿ - ಇದು ಪ್ರಧಾನಿ ವಾಜಪೇಯಿ ಅವರ ಅಧಿಕೃತ ನಿವಾಸ. ಅಕ್ಟೋಬರ್‌ 10 ರಂದು ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೊಳಗಾದ ಪ್ರಧಾನಿಯವರ ಕುಶಲವನ್ನು ವಿಚಾರಿಸಲು, ಮಕ್ಕಳ ದಿನದ ಮುನ್ನಾ ದಿನವಾದ ಸೋಮವಾರ ಸರ್ದಾರ್‌ ಪಟೇಲ್‌ ವಿದ್ಯಾಲಯದ ಹುಡುಗ ಹುಡುಗಿಯರು ವಾಜಪೇಯಿ ಅವರ ನಿವಾಸಕ್ಕೆ ಆಗಮಿಸಿದ್ದರು.

ಪ್ರಧಾನಿಗಳಿಗೆಂದೇ ಆರಿಸಿ ತಂದಿದ್ದ ಶುಭಾಶಯ ಪತ್ರಗಳನ್ನು ವಾಜಪೇಯಿ ಅವರಿಗೆ ನೀಡಿ ಮಕ್ಕಳು ಸಂಭ್ರಮಿಸಿದರು. ಕೆಲವು ಮಕ್ಕಳು ಶುಭಾಶಯ ರೂಪದಲ್ಲಿ ಬರೆದ ಪದ್ಯಗಳನ್ನು ಓದಿ ಸ್ವತಃ ಕವಿಗಳೂ ಆದ ಪ್ರಧಾನಿ ಖುಷಿ ಪಟ್ಟರು. ಮಕ್ಕಳ ಶುಭಾಶಯಕ್ಕೆ ಪ್ರತಿಯಾಗಿ, ನೀವುಗಳೆಲ್ಲಾ ಸತ್ಪ್ರಜೆಗಳಾಗಿ, ರಾಷ್ಟ್ರ ಪ್ರೇಮಿಗಳಾಗಿ ಎಂದು ವಾಜಪೇಯಿ ಹಾರೈಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X