Get Updates
Get notified of breaking news, exclusive insights, and must-see stories!

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಹೋಮಿಯೋಪತಿ ದವಾಖಾನೆ- ಮಲಕರೆಡ್ಡಿ

ಮಂಗಳೂರು : ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಹೆಚ್ಚಿನ ಹೋಮಿಯೋಪತಿ ದವಾಖಾನೆಗಳನ್ನು ತೆರೆಯಲು ಸರ್ಕಾರ ಸಿದ್ಧವಿದೆ ಹಾಗೂ ಹೆಚ್ಚುವರಿ ಆಸ್ಪತ್ರೆಗಳ ಸ್ಥಾಪನೆಗೆ ಸಚಿವಾಲಯ ನಿಧಿಯನ್ನು ಒದಗಿಸುವುದು ಎಂದು ಆರೋಗ್ಯ ಖಾತೆ ಸಚಿವ ಡಾ. .ಬಿ. ಮಲಕರೆಡ್ಡಿ ಹೇಳಿದ್ದಾರೆ.

ಎರಡು ದಿನಗಳ ಅಖಿಲ ಭಾರತ ಹೋಮಿಯೋಪತಿ - 2000 ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಯಾವುದೇ ಉಪ ಪರಿಣಾಮಗಳಲ್ಲದ ಹೋಮಿಯೋಪತಿ ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದೆ ಎಂದ ಸಚಿವರು, ಈಚಿನ ದಿನಗಳಲ್ಲಿ ಈ ಕ್ಷೇತ್ರವೂ ವಾಣಿಜ್ಯೀಕರಣಗೊಳ್ಳುತ್ತಿದೆ ಎಂದು ವಿಷಾದಿಸಿದರು. ಬಡ ರೋಗಿಗಳ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳುವಂತೆ ಹೋಮಿಯೋಪತಿ ವೈದ್ಯರಿಗೆ ಅವರು ಮನವಿ ಮಾಡಿದರು.

ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 300 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಮಲೇಷಿಯಾದಿಂದಲೂ ಕೆಲವು ಆಹ್ವಾನಿತರು ಆಗಮಿಸಿದ್ದರು. ಮುಲ್ಲರ್ಸ್‌ ಹೋಮಿಯೋಪತಿ ಕಾಲೇಜು ಸಮ್ಮೇಳನವನ್ನು ಏರ್ಪಡಿಸಿತ್ತು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+