ಮಾಧವನ್‌ರಿಂದ ಜಡೇಜ, ಮೊಂಗಿಯಾ, ಇರಾನಿ ವಿಚಾರಣೆ
ಚೆನ್ನೈ : ಸಿಬಿಐನ ಮಾಜಿ ಜಂಟಿ ನಿರ್ದೇಶಕ ಆರ್.ಮಾಧವನ್ ಭಾನುವಾರ ಮ್ಯಾಚ್‌ಫಿಕ್ಸಿಂಗ್ ಆರೋಪಿಗಳಾದ ಅಜಯ್ ಜಡೇಜ, ನಯನ್ ಮೊಂಗಿಯಾ ಹಾಗೂ ಅಲಿ ಇರಾನಿ ಅವರನ್ನು ಪ್ರಶ್ನಿಸಿದ್ದಾರೆ.
ಸಿಬಿಐನ ಮ್ಯಾಚ್‌ಫಿಕ್ಸಿಂಗ್ ವರದಿಯ ಹಿನ್ನೆಲೆಯಲ್ಲಿ ಅಂತಿಮ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಸಿಸಿಐ ಮಾಧವನ್ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿದೆ. ವಿಚಾರಣೆಗೆ ಶನಿವಾರವೇ ಬರುವಂತೆ ಕರೆ ಕೊಟ್ಟಿದ್ದರೂ ಕೈಕೊಟ್ಟಿದ್ದ ಅಜರ್, ಭಾನುವಾರವೂ ಮುಖ ತೋರಲಿಲ್ಲ. ಅಜರ್ ವರ್ತನೆಯಿಂದ ಹತಾಶರಾಗಿರುವಂತೆ ಕಂಡು ಬಂದ ಮಾಧವನ್, ಇನ್ನು ಅವರೇ ಖುದ್ದು ಬಂದರೂ ತಾವು ವಿಚಾರಣೆ ಮಾಡುವುದಿಲ್ಲ ಎಂದು ಖಂಡಾತುಂಡಾಗಿ ಹೇಳಿಬಿಟ್ಟರು.
ಬಿಗಿ ಪೊಲೀಸ್ ಪಹರೆಯ ನಡುವೆ ಸ್ಟಾರ್ ಹೊಟೇಲೊಂದರಲ್ಲಿ ವಿಚಾರಣೆ ನಡೆಯಿತು. ಮಾಧ್ಯಮದವರ ಮುಂದೆ ಬಾಯಿ ಬಿಡಲು ಇಚ್ಛಿಸದ ಆರೋಪ ಹೊತ್ತಿರುವ ಕ್ರಿಕೆಟಿಗರು ಹಾಗೂ ದೈಹಿಕ ತಜ್ಞ ಹೊಟೇಲಿನ ಹಿಂಬಾಗಿಲಿನಿಂದ ವಿಚಾರಣೆಗಾಗಿ ಒಳಹೊಕ್ಕರು. ಮ್ಯಾಚ್‌ಫಿಕ್ಸಿಂಗ್ ಕುರಿತು ನವೆಂಬರ್ 29ರಂದು ತನ್ನ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಚರ್ಚಿಸಲಿದ್ದು, ಅಷ್ಟರೊಳಗೆ ಮಾಧವನ್ ತಮ್ಮ ವರದಿ ಸಲ್ಲಿಸಲಿದ್ದಾರೆ.
ಸಿಬಿಐ ವರದಿ ಹುರುಳಿಲ್ಲದ್ದು. ನಾನು ಒದಗಿಸಿರುವ ಸಾಕ್ಷ್ಯಗಳನ್ನು ಅದು ಸರಿಯಾಗಿ ಉಪಯೋಗಿಸಿಕೊಂಡೇ ಇಲ್ಲ. ಕೆಲವೊಂದು ಟೇಪ್‌ಗಳನ್ನೂ ಬಳಸಿಕೊಂಡಿಲ್ಲ. ಸಿಬಿಐ ಮಾಡಿರುವ ತಪ್ಪನ್ನು ಮಾಧವನ್ ಅವರಾದರೂ ತಿದ್ದಲಿ ಎಂಬುದು ನನ್ನ ಆಶಯ ಎಂದು ಶನಿವಾರ ವಿಚಾರಣೆಗೆ ಒಳಪಟ್ಟ ಪ್ರಭಾಕರ್ ಪ್ರತಿಕ್ರಿಯಿಸಿದ್ದಾರೆ.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications