ನಗುವುದನ್ನು ನಿಲ್ಲಿಸುವಂತೆ ಕೋರಿದ್ದ ರಿಟ್ ಅರ್ಜಿ ವಜಾ
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ
ಮುನಿಗಳು ಮುಕ್ತಿ ಪಡೆಯುವುದು ನರಳಾಡುವುದರಿಂದಲ್ಲ, ನಗುತ್ತಾ ನಗುತ್ತಾ ಇದ್ದರೆ ಸ್ವರ್ಗವೇನೂ ಸಿಕ್ಕದೇ ಹೊಗುವುದಿಲ್ಲ ಎಂಬ ಸಂಸ್ಕೃತ ಸುಭಾಷಿತವೂ ಒಂದಿದೆ. ಸಕಲ ರೋಗಗಳಿಗೆ ನಗುವೇ ಪರಮೌಷಧ ಎನ್ನುವವರೂ ಇದ್ದಾರೆ.
ಆದರೆ ಇತರರು ನಗುವುದು ಅನ್ಯರಿಗೆ ಅಸಹ್ಯವಾಗಿ ಉಪಟಳವನ್ನೂ ನೀಡಬಲ್ಲದು ಎಂಬುದಕ್ಕೆ ಇಲ್ಲೊಂದು ನಿದರ್ಶನ ಇದೆ.
ಬೆಂಗಳೂರಿನಲ್ಲೀಗ ನಗುವವರ ಕ್ಲಬ್ ಕಾರ್ಯಾಚರಣೆ ಎಲ್ಲೆಡೆ ಕಾಣಿಸಿಕೊಂಡಿದೆ. ಬೆಂಗಳೂರಿನ ಹಲವು ಉದ್ಯಾನಗಳಲ್ಲಿ ಬೆಳಗ್ಗೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಗಹಗಹಿಸಿ ನಗುತ್ತಾರೆ. ಕೇಕೆ ಹಾಕುತ್ತಾರೆ. ಜಯನಗರದಲ್ಲೂ ಇಂತಹ ಒಂದು ಲಾಫರ್ಸ್ ಕ್ಲಬ್ ಇದೆ. ಇದರ ಸದಸ್ಯರು ನಾಲ್ಕನೇ ಟಿ ಬ್ಲಾಕಿನ 26ನೇ ಕ್ರಾಸ್ ಬಳಿ ಇರುವ ಉದ್ಯಾನದಲ್ಲಿ ಎಂ.ಎಲ್. ಬಸವರಾಜು ಎನ್ನುವವರ ನೇತೃತ್ವದಲ್ಲಿ ಪ್ರತಿನಿತ್ಯವೂ ಬೆಳಗ್ಗೆ ಒಂದರ್ಧ ಗಂಟೆ ನಗುತ್ತಾರೆ.
ಕೇಳುವವರಿಗೆ ತಲೆನೋವು : ಈ ನಗು ಜಯನಗರ ಟಿ ಬ್ಲಾಕಿನ ನಿವಾಸಿ ರಾಜೇಶ್ವರಯ್ಯ ಹಾಗೂ ಮತ್ತಿತರ ಮೂವರಿಗೆ ತಲೆ ನೋವು ತಂದಿತು. ಈ ಸಾಮೂಹಿಕ ನಗುವಿನಿಂದ ತಮ್ಮ ನೆಮ್ಮದಿಗೆ ಭಂಗ ಬಂದಿದೆ ಎಂದು ಅವರು ಪೊಲೀಸರ ಮೊರೆ ಹೋದರು, ನಗರ ಪಾಲಿಕೆಯ ಕಚೇರಿಗೂ ಎಡತಾಕಿದರು. ಈಗ ನ್ಯಾಯಾಲಯದ ಮೆಟ್ಟಿಲೂ ಹತ್ತಿ , ಪೆಚ್ಚು ಮೋರೆ ಹಾಕಿ ಕೆಳಗಿಳಿದಿದ್ದಾರೆ.
ವಾಯುವಿಹಾರಕ್ಕೆ ಪಾರ್ಕ್‌ಗೆ ಬರುವವರ ನೆಮ್ಮದಿ ಹಾಳಾಗದಂತೆ ಈ ನಗುವವರ ವಿಕಟಾಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ನಿರ್ದೇಶನ ನೀಡಿ ಎಂದು ರಾಜೇಶ್ವರಯ್ಯ ನ್ಯಾಯಾಧೀಶರನ್ನು ಕೋರಿದರು. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಮತ್ತು ಎ.ವಿ. ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ನಗುವವರ ಸಂಘದ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಲಾಗದು. ನಗುವವರ ಸಂಘದಿಂದ ನಾಗರಿಕರಿಗೆ ಅಸಹನೀಯ ತೊಂದರೆ ಆಗಿದ್ದರೆ, ಅರ್ಜಿದಾರರಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿ ಅರ್ಜಿ ವಜಾ ಮಾಡಿದ್ದಾರೆ. ಅಂತೂ ಸದ್ಯಕ್ಕೆ ನಗುವಿಗೆ ಗೆಲುವಾಗಿದೆ.
(ಇನ್‌ಪೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications