ಅಮೆರಿಕ ಅಧ್ಯಕ್ಷೀಯ ಚುನಾವಣೆ : ಬುಷ್- 246, ಗೊರ್- 242
ವಾಷಿಂಗ್ಟನ್ ಡಿಸಿ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಜಾರ್ಜ್ ಡಬ್ಲ್ಯು ಬುಷ್ 246 ಎಲೆಕ್ಟರಲ್ ಕಾಲೇಜ್ ಮತಗಳನ್ನು ಗೆದ್ದಿದ್ದರೆ, ಗೊರ್ 242 ಮತಗಳನ್ನು ಗೆದ್ದಿದ್ದು ಟಂಗಾಟುಂಗಿ ಸ್ಪರ್ಧೆ ನಡೆದಿದೆ.
ಅರ್ಕಾನ್ಸಾಸ್, ಅಲಸ್ಕ, ಅರಿಜೋನ, ಗೊರ್ ತಾಯ್ನಾಡಾದ ಟೆನೆಸ್ಸೆ, ಕೊಲಾರ್ಡೋ, ನೆವಾಡ, ಇದಾಹೋ, ಉತಾ, ಒಹಿಯೋ, ಮೋಂಟ್ಯಾನ, ನ್ಯೂ ಹ್ಯಾಂಷೈರ್, ನೆಬ್ರಾಸ್ಕ, ಯೋಮಿಂಗ್, ಲೂಸಿಯಾನ, ಉತ್ತರ ಮತ್ತು ದಕ್ಷಿಣ ಡಕೋಟ, ಅಲಾಬಮ, ಮಿಸಿಸಿಪ್ಪಿ, ಕನ್ಸಾಸ್, ಟೆಕ್ಸಾಸ್, ಉತ್ತರ ಕೆರೋಲಿನಾ, ಮಿಸ್ಸೌರಿ, ಒಕ್ಲಾಹೋಮ, ವರ್ಜಿನಿಯಾ ಮತ್ತು ಪಶ್ಚಿಮ ವರ್ಜೀನಿಯಾ ರಾಜ್ಯಗಳಲ್ಲಿ ಬುಷ್ ಜಯ ಸಾಧಿಸಿದ್ದಾರೆ.
ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ಹವಾಯಿ, ನ್ಯೂ ಮೆಕ್ಸಿಕೋ, ಮಿನ್ನೆಸೋಟ, ಮೇರಿಲ್ಯಾಂಡ್, ಕನೆಕ್ಟಿಕಟ್, ದೆಲಾವೇರ್ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ (ವಾಷಿಂಗ್ಟನ್ ಡಿಸಿ) ಹಾಗೂ ವೆರ್ಮಾಂಟ್‌ಗಳಲ್ಲಿ ಡೆಮಕ್ರಾಟಿಕ್ ಪಕ್ಷದ ಅಲ್ ಗೊರ್ ಗೆಲುವು ಸಾಧಿಸಿದ್ದು, ಅಮೆರಿಕ ಅಧ್ಯಕ್ಷ ಪದವಿ ಹುದ್ದೆಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಹಿಲೆರಿ ಕ್ಲಿಂಟನ್ ಸೆನೆಟ್ ಸ್ಥಾನ ಗೆದ್ದಿದ್ದಾರೆ. ಒಟ್ಟಾರೆ ಅಲ್ ಗೊರ್ 242 ಎಲೆಕ್ಟರಲ್ ಕಾಲೇಜ್ ಮತಗಳನ್ನು ಗಳಿಸಿದ್ದರೆ, ಬುಷ್ 246 ಮತಗಳನ್ನು ಗೆದ್ದಿದ್ದಾರೆ. ಗೊರ್ ಒಟ್ಟು 17 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಬುಷ್ 29 ರಾಜ್ಯಗಳಲ್ಲಿ ಜಯ ಗಳಿಸಿದ್ದಾರೆ. ಫ್ಲೋರಿಡಾ ಕ್ಷೇತ್ರದ ಫಲಿತಾಂಶ ಇನ್ನೂ ಹೊರಬ್ದಿದಿಲ್ಲ. 25 ಎಲೆಕ್ಟರಲ್ ಕಾಲೇಜ್ ಮತಗಳಿರುವ ಈ ಕ್ಷೇತ್ರದ ಫಲಿತಾಂಶ ನಿರ್ಣಾಯಕವಾಗಲಿದೆ.
ಗವರ್ನರ್ ಬುಷ್ ಆಸ್ಟಿನ್ ಮತ್ತು ಟೆಕ್ಸಾಸ್‌ನಲ್ಲಿ ತಮ್ಮ ಮತ ಚಲಾಯಿಸಿದರೆ, ಅಲ್ ಗೊರ್ ಎಲ್ಮ್‌ವುಡ್ ಮತ್ತು ಟೆನೆಸ್ಸೆಗಳಲ್ಲಿ ತಮ್ಮ ಮತ ಚಲಾಯಿಸಿದರು. ಸದನಗಳ ಎಲ್ಲಾ 435 ಸ್ಥಾನ ಹಾಗೂ ಸೆನೆಟ್‌ನ 100 ಸ್ಥಾನಗಳ್ಲಲಿ 34 ಸ್ಥಾನಗಳ ಎಣಿಕೆ ಮುಗಿದಿದ್ದು, ರಿಪಬ್ಲಿಕನ್ ಪಕ್ಷ ಕೂದಲೆಳೆಯಷ್ಟು ಅಂತರದಲ್ಲಿ ಮುನ್ನಡೆ ಸಾಧಿಸುವ ಭಯವನ್ನು ಡೆಮಾಕ್ರಟಿಕ್ ಪಕ್ಷ ಎದುರಿಸುತ್ತಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications