ಮತ್ತೆ ಭುಗಿಲೆದ್ದ ಪ್ರತ್ಯೇಕ ಕೊಡವ ರಾಜ್ಯ ಸ್ಥಾಪನೆಯ ಕೂಗು
ಬೆಂಗಳೂರು : ಚತ್ತೀಸ್‌ಘಡ 26 ನೇ ರಾಜ್ಯವಾಗಿ ಉದಯವಾಗಿದೆ. ಜಾರ್ಖಂಡ್ ಹಾಗೂ ಉತ್ತರಖಂಡ್ ರಚನೆಗೆ ವೇದಿಕೆ ಸಜ್ಜಾಗಿದೆ. ಈ ಹೊಸ ರಾಜ್ಯಗಳ ಉಗಮದ ಬೆನ್ನಲ್ಲೇ ಕಾವೇರಿ ಉಗಮಸ್ಥಾನವಾದ ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಪರಿವರ್ತಿಸುವ ಕೂಗು ಮತ್ತೆ ಭುಗಿಲೆದ್ದಿದೆ.
ಕೂರ್ಗಿಗಳು ಎಂದು ಬ್ರಿಟಿಷ್ ಸಾರ್ಮಾಜ್ಯ ಕಾಲದಲ್ಲಿ ಹೆಸರಾಗಿದ್ದ ವೀರ ಕೊಡವರು ಕೂರ್ಗ್ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ನೇತೃತ್ವದಲ್ಲಿ ತಮ್ಮ ಪ್ರತ್ಯೇಕ ರಾಜ್ಯ ಬೇಡಿಕೆಯ ಈಡೇರಿಕೆಗಾಗಿ ನವೆಂಬರ್ 21ರಂದು ನವದೆಹಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಹೈಕೋರ್ಟ್ ಪೀಠ ಸ್ಥಾಪನೆಯ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಎದ್ದಿದ್ದ ಪ್ರತ್ಯೇಕತೆಯ ಕೂಗು ಶಾಂತವಾಗುತ್ತಿರುವಂತೆಯೇ ಬಹಳ ವರ್ಷಗಳಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿರುವ ಕೊಡವರು ಈಗ ಮತ್ತೊಮ್ಮೆ ಕೊಡಗು ರಾಜ್ಯದ ಸ್ಥಾಪನೆಗಾಗಿ ಹೋರಾಟ ಮುಂದುವರಿಸಿದ್ದಾರೆ. ತಮ್ಮ ಕೂಗು ದೆಹಲಿಯ ದೊರೆಗಳಿಗೆ ತಲುಪುವಂತೆ ಮಾಡುವ ಸಾಹಸಕ್ಕೂ ಕೈ ಹಾಕಿದ್ದಾರೆ.
ಈ ಹಿಂದೆಯೇ ಕೇಂದ್ರ ಸರಕಾರ ಕೊಡಗು ರಾಜ್ಯ ಸ್ಥಾಪನೆ ಸಂಬಂಧ ತಾತ್ವಿಕ ಒಪ್ಪಿಗೆ ನೀಡಿತ್ತಾದರೂ ಈ ವರೆಗೆ ಯಾವುದೇ ಪ್ರಗತಿ ಆಗಿಲ್ಲ ಎಂದು ಸಿಎನ್‌ಸಿಯ ಪ್ರಧಾನ ಕಾರ್ಯದರ್ಶಿ ಎನ್.ಯು. ನಾಚಪ್ಪ ಅವರು ಐಎಎನ್‌ಎಸ್ ಪ್ರತಿನಿಧಿಗೆ ತಿಳಿಸಿದ್ದಾರೆ.
ಹಾಲಿ ಇರುವ ಫೆಡರಲ್ ವ್ಯವಸ್ಥೆಯ ಅಡಿಯಲ್ಲಿ ಚಿಕ್ಕ ಚಿಕ್ಕ ರಾಜ್ಯಗಳ ಸ್ಥಾಪನೆಯ ಇಂಗಿತವನ್ನು ಕೇಂದ್ರ ಸರಕಾರ ನೀಡಿದೆ. ಆದರೆ, ಕೇಂದ್ರ ಸರಕಾರದ ಈ ಘೋಷಣೆಯ ನಂತರವೂ ನಾವು ಈವರೆಗೆ ಯಾವುದೇ ಅನುಕೂಲಕರ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಅವರು ವಿವರಿಸಿದರು.
ದೆಹಲಿ ದೊರೆಗಳ ಗಮನವನ್ನು ಈ ವಿಚಾರದತ್ತ ಸೆಳೆಯುವ ಸಲುವಾಗಿ ತಮ್ಮ ಸಂಸ್ಥೆಯ ಸದಸ್ಯರು ದೆಹಲಿ ಚಲೋ ನಡೆಯುತ್ತಿರುವುದಾಗಿ ಅವರು ಹೇಳಿದರು. ಕೊಡಗು ರಾಜ್ಯ ಮುಕ್ತಿ ಮೋರ್ಚಾ ಎಂದು ಕರೆಯಲಾಗುತ್ತಿದ್ದ ಈ ವೇದಿಕೆ ಪ್ರತ್ಯೇಕ ರಾಜ್ಯ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದೆ ಎಂದು ಹೇಳಿದರು.
ರಾಷ್ಟ್ರದ ಕಾಫಿಯ ಕಣಜವಾದ ಕೊಡಗು ಏಕೀಕರಣಕ್ಕೆ ಮೊದಲು ಸಿ ವಿಭಾಗದ ರಾಜ್ಯ ಎಂದು ಕರೆಸಿಕೊಂಡಿತ್ತು. ಕೊಡವರ ಈ ನಾಡು ವೀರ ಯೋಧರನ್ನು ನಾಡಿಗೆ ನೀಡಿದೆ. ಜ. ತಿಮ್ಮಯ್ಯ, ಜ. ಕಾರ್ಯಪ್ಪ ಅವರಂತಹ ವೀರ ಯೋಧರ ತವರೂರಿದು. ನೈಸರ್ಗಿಕ ಅರಣ್ಯದ ಬೀಡೂ ಆದ ಕೊಡಗಿಗೆ ಪ್ರತ್ಯೇಕ ರಾಜ್ಯವಾಗುವ ಎಲ್ಲ ಅರ್ಹತೆಗಳೂ ಇವೆ ಎಂಬುದು ಅವರ ವಾದ. (ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications