Get Updates
Get notified of breaking news, exclusive insights, and must-see stories!

ಹಿರಿಯರ ಅಥ್ಲೆಟಿಕ್ಸ್‌: 2 ನೇ ದಿನದ ಕೊನೆಗೆ ಭಾರತದ ಬುಟ್ಟಿಯಲ್ಲಿ 45 ಚಿನ್ನ

ಬೆಂಗಳೂರು : ಹಿರಿಯರ ಹನ್ನೊಂದನೇ ಏಷ್ಯನ್‌ ಅಥ್ಲೆಟಿಕ್‌ ಕೂಟದ ಎರಡನೇ ದಿನ ಮಂಗಳವಾರದಂದು ಆತಿಥೇಯ ಭಾರತ ಇಪ್ಪತ್ತೇಳು ಚಿನ್ನದ ಪದಕಗಳನ್ನು ಗೆದ್ದು ಪ್ರಥಮ ಸ್ಥಾನದಲ್ಲಿದೆ.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 300 ಮೀಟರ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು ಮೂರು ಬಂಗಾರ ಗೆದ್ದಿತು. 60 ವರ್ಷ ಕ್ಕೆ ಮೇಲ್ಪಟ್ಟವರ ಪೋಲ್‌ ವಾಲ್ಟ್‌ನಲ್ಲಿ 1.20 ಮೀಟರ್‌ ಎತ್ತರ ಜಿಗಿದು ಚಿನ್ನ ಗೆದ್ದ ವಸಂತಾ ಸಾಮ್ಯುಯೆಲ್‌, ಟ್ರಿಪಲ್‌ ಜಂಪ್‌ನಲ್ಲೂ 6.34 ಮೀಟರ್‌ ದೂರ ಕ್ರಮಿಸಿ ಪ್ರಥಮ ಸ್ಥಾನ ಪಡೆದು ಅಥ್ಲೆಟಿಕ್‌ ಕೂಟದಲ್ಲಿ ಡಬಲ್‌ ಚಿನ್ನದ ಸಾಧನೆ ಮಾಡಿದ ಪ್ರಥಮ ಅಥ್ಲಿಟ್‌ ಎನಿಸಿಕೊಂಡರು.

ಮಂಗಳವಾರ ನಡೆದ ಒಟ್ಟು 45 ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್‌ಗಳು 27 ಚಿನ್ನ, 25 ಬೆಳ್ಳಿ ಮತ್ತು 15 ಕಂಚಿನ ಪದಕಗಳನ್ನು ಗೆದ್ದರು. ಚಾಂಪಿಯನ್‌ ಷಿಪ್‌ ಕೂಟದಲ್ಲಿ ಭಾರತ ಒಟ್ಟು 45 ಬಂಗಾರದ ಪದಕಗಳನ್ನು ಗೆದ್ದಿದೆ.

( ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+