ನವೆಂಬರ್ 9ರಿಂದ ಬೆಂಗಳೂರಲ್ಲಿ ಹಳೆ ಹುಲಿಗಳ ಟೆನಿಸ್ ಕಾಳಗ
* ರಾಂ ರಾಜ್
ಬೆಂಗಳೂರು : ಹದಿನೈದು ವರ್ಷಗಳ ಹಿಂದೆ ಡೇವಿಸ್ ಕಪ್ ಟೂರ್ನಿಯನ್ನು ನಡೆಸಿದ ನಂತರ ಮತ್ತೀಗ ದೊಡ್ಡ ಟೂರ್ನಿಯಾಂದರ ಸಿದ್ಧತೆ ನಗರದಲ್ಲಿ ಸಮರೋಪಾದಿಯಲ್ಲಿ ನಡೆದಿದೆ. ಡಿಸೆಂಬರ್ 2ನೇ ವಾರ ಶುರುವಾಗುವ ಎಟಿಪಿ ಡಬಲ್ಸ್‌ಗೆ ಮುನ್ನ ನವೆಂಬರ್ 9ರಿಂದ ಹಳೆಯ ಹುಲಿಗಳ ಟೆನಿಸ್ ಕಾಳಗ ರಾಜ್ಯ ಲಾನ್ ಟೆನಿಸ್ ಒಕ್ಕೂಟದ ಕ್ರೀಡಾಂಗಣ (ಕೆ ಎಸ್ ಎಲ್ ಟಿ ಎ) ದಲ್ಲಿ ನಡೆಯಲಿದೆ.
ವಿಶ್ವದ 8 ಹಳೆಯ ಟೆನಿಸ್ ದಿಗ್ಗಜಗಳು ಬುಧವಾರ ನಗರದಲ್ಲಿ ಬಂದಿಳಿಯುವ ಹೊತ್ತಿಗೆ ಪ್ಲೆಕ್ಸಿಪ್ಲಾವ್ ಕೃತಕ ಪದರವನ್ನು ಸಿದ್ಧ ಮಾಡುವ ಕಾರ್ಯ ಕಬ್ಬನ್ ಉದ್ಯಾನದಲ್ಲಿರುವ ಕ್ರೀಡಾಂಗಣದಲ್ಲಿ ಭರದಿಂದ ಸಾಗಿದೆ. ಎಟಿಪಿ ವಿಶ್ವ ಡಬಲ್ಸ್‌ಗೂ ಅಂಕಣವನ್ನು ಅಭಿವೃದ್ಧಿಗೊಳಿಸುವ ಕಾರ್ಯಗಳು ನಡೆದಿವೆಯಾದರೂ ನವೆಂಬರ್ 9ರ ಹೊತ್ತಿಗೇ ಈ ಕಾರ್ಯ ಪೂರ್ಣವಾಗದು.
ಬೋನ್ ಬೊರ್ಗ್, ಗಿಲ್ಲರ್ಮೊ ವಿಲಾಸ್, ಹೆನ್ರಿ ಲೆಕೋಂಟೆ, ಪ್ಯಾಟ್ ಕ್ಯಾಷ್, ರಾಸ್ ಕೇಸ್, ಮನ್ಸೂರ್ ಬಹರಾಮಿ, ವಿಜಯ್ ಅಮೃತ್ ರಾಜ್ ಹಾಗೂ ಆನಂದ್ ಅಮೃತ್‌ರಾಜ್ ಟೂರ್ನಿಯಲ್ಲಿ ಸೆಣೆಸಲಿರುವ ಹಳೆಯ ಹುಲಿಗಳು.
ಸಾಕಷ್ಟು ಕಿರಿಕಿರಿಗೆ ಒಳಗಾಗಿರುವ ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಅಂತಿಮ ಸಿದ್ಧತೆಯಲ್ಲಿ ಮುಳುಗಿದ್ದಾರೆ. ಒಕ್ಕೂಟದ ಇತರೆ ಅಧಿಕಾರಿಗಳು ಆಗಾಗ ಪ್ರತ್ಯಕ್ಷರಾಗಿ ಹಳೆ ದಿಗ್ಗಜಗಳು ಸೆಣೆಸುವ ಕಣದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೊರ್ಗ್ ಸೇರಿದಂತೆ ಈಗಾಗಲೇ ಭಾರತಕ್ಕೆ ಕೆಲವು ಟೆನಿಸ್ ದಿಗ್ಗಜಗಳು ಬಂದಿದ್ದಾರೆ. ಚೆನ್ನೈ ಮಾರ್ಗವಾಗಿ ಬುಧವಾರ ನಗರಕ್ಕೆ ತಲುಪಲಿರುವ ಈ ಕ್ರೀಡಾ ಪಟುಗಳು ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಎಟಿಪಿ ಡಬಲ್ಸ್‌ಗೆ ಮುನ್ನ ಟೆನಿಸ್ ಅಭಿಮಾನಿಗಳನ್ನು ಹುರಿದುಂಬಿಸಲಿದ್ದಾರೆ.
ತಮ್ಮದೇ ಆದ ಫ್ಯಾನ್‌ಗಳನ್ನು ಹುಟ್ಟು ಹಾಕಿದ್ದ ಟೆನಿಸ್ ಲೆಜೆಂಡ್‌ಗಳನ್ನು ಇದಿರುಗೊಳ್ಳಲು ಮಾಲಿನ್ಯ ನಗರಿ ಸಜ್ಜಾಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications