ರಾಜ್ ಅಪಹರಣವಾಗಿ 100ನೇ ದಿನ,ಮತ್ತೆ ಬಾಯ್ತೆರೆದ ಸಚಿವರುಗಳು
ಬೆಂಗಳೂರು : ಡಾ. ರಾಜ್‌ಕುಮಾರ್ ಅಪಹರಣವಾಗಿ ಇಂದಿಗೆ 100 ದಿನ. 100ನೇ ದಿನವಾದ ಸೋಮವಾರ ಮತ್ತೆ ರಾಜ್ಯದ ಸಚಿವರುಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಬಿ. ಚಂದ್ರೇಗೌಡ ಅವರು ರಾಜ್‌ಕುಮಾರ್ ಬಿಡುಗಡೆಗೆ ಸಂಧಾನ ಮುಂದುವರಿಯುತ್ತದೆ ಎಂದು ಔಪಚಾರಿಕವಾಗಿ ತಿಳಿಸಿದ್ದಾರೆ. ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಸರಕಾರ ರಾಜ್‌ಕುಮಾರ್ ಅವರನ್ನು ನಿರ್ಲಕ್ಷಿಸಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಜುಲೈ 30ರ ಭಾನುವಾರ ಭೀಮನ ಅಮಾವಾಸ್ಯೆಯ ರಾತ್ರಿ ವೀರಪ್ಪನ್ ಹಾಗೂ ಆತನ ಸಹಚರರು ರಾಜ್‌ಕುಮಾರ್, ನಾಗಪ್ಪ, ನಾಗೇಶ್ ಹಾಗೂ ಗೋವಿಂದರಾಜ್ ಅವರನ್ನು ಗಾಜನೂರಿನ ತೋಟದ ಮನೆಯಿಂದ ಅಪಹರಿಸಿದರು. ನಾಗಪ್ಪ ಹಾಗೂ ಗೋವಿಂದರಾಜ್ ವೀರಪ್ಪನ್ ವಶದಿಂದ ತಪ್ಪಿಸಿಕೊಂಡು - ಬಿಡುಗಡೆಯಾಗಿ ನಾಡಿಗೆ ಬಂದರಾದರೂ, ರಾಜ್ ಕಾಡಿನಲ್ಲೇ ಶತದಿನ ಇರುವಂತಾಯಿತು.
ಕಳೆದ ಕೆಲವು ದಿನಗಳಿಂದ ರಾಜ್ ಅಪಹರಣದ ಬಿಸಿಯಿಂದ ಮುಕ್ತವಾದ ರಾಜ್ಯ ಸರಕಾರ ಬೆಂಗಳೂರು ಐ.ಟಿ. ಡಾಟ್ ಕಾಂ ಯಶಸ್ಸಿನತ್ತ ಗಮನ ಹರಿಸಿತ್ತು. ಇತ್ತ ಇಂದೋ ನಾಳೆಯೋ ಕಾಡಿಗೆ ಮತ್ತೊಂದು ಸಂಧಾನಕ್ಕಾಗಿ ತೆರಳಲು ಸನ್ನದ್ಧರಾಗಿರುವ ನಕ್ಕೀರನ್ ಗೋಪಾಲ್ ಹಾಗೂ ನೆಡುಮಾರನ್ ನೇತೃತ್ವದ ತಂಡ ಕಾಯ್ದಿಟ್ಟ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದೆ.
ಸಂಸದರ, ಶಾಸಕರ ಅಪಹರಣಕ್ಕೆ ವೀರಪ್ಪನ್ ಹೊಸ ಯೋಜನೆ
ಈರೋಡ್ ವರದಿ : ತನ್ನ ಬೇಡಿಕೆಗಳ ಈಡೇರಿಕೆಗಾಗಿ ಕನ್ನಡದ ಮೇರುನಟ ರಾಜ್‌ಕುಮಾರ್‌ರನ್ನು ಅಪಹರಿಸಿದ ವೀರಪ್ಪನ್ ತನ್ನ ಹೆಚ್ಚಿನ ಬೇಡಿಕೆಗಳ ಈಡೇರಿಕೆಗೆ ತಮಿಳುನಾಡಿನ ಅದರಲ್ಲೂ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿರುವ ಕೆಲವು ಶಾಸಕರು ಹಾಗೂ ಸಂಸತ್ ಸದಸ್ಯರನ್ನು ಅಪಹರಿಸುವ ಹೊಸ ಯೋಜನೆ ರೂಪಿಸಿದ್ದಾನೆ. ಈ ಹೊಸ ಅಪಹರಣದ ಯೋಜನೆಯ ಸುಳಿವು ತಮಿಳುನಾಡು ಪೊಲೀಸರಿಗೂ ಸಿಕ್ಕಿದೆ. ಹೀಗಾಗಿ ಗೋಪಿಚಟ್ಟಿ ಪಾಳ್ಯಂನ ಸಂಸತ್‌ಸದಸ್ಯ ಕಾಳಿಯಪ್ಪನ್ ಹಾಗೂ ಭವಾನಿಸಾಗರದ ಶಾಸಕ ಆಂಡಮುತ್ತು ಅವರಿಗೆ ಪೊಲೀಸರು ಸೂಕ್ತ ರಕ್ಷಣೆ ನೀಡಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ವೀರಪ್ಪನ್ ತಮ್ಮನ್ನು ಅಪಹರಿಸಲು ಯೋಜನೆ ರೂಪಿಸಿದ್ದಾನೆ ಎಂಬ ವಿಷಯ ತಿಳಿದೂ ಭವಾಸಿ ಸಾಗರದ ಶಾಸಕರು ವಿಚಲಿತರಾಗಿಲ್ಲ. ವೀರಪ್ಪನ್‌ಗೆ ಹೆದರಿ ಭವಾನಿ ಸಾಗರದಿಂದ ಓಡಿ ಹೋಗಲೂ ಅವರು ಸಿದ್ಧರಿಲ್ಲ. ಅವರ ಮನವೊಲಿಸುವ ಪೊಲೀಸರ ಯತ್ನ ವಿಫಲವಾಗಿದೆ. ಕೊನೆಗೆ ಪೊಲೀಸರು ನಾವು ನಿಮಗೆ ರಕ್ಷಣೆ ನೀಡಿದ್ದೇವೆ. ಹೀಗಿದ್ದೂ ನಿಮ್ಮ ಅಪಹರಣವಾದರೆ ನಾವು ಜವಾಬ್ದಾರರಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭವಾನಿಸಾಗರ ಪ್ರದೇಶ ಸತ್ಯಮಂಗಲ ಅರಣ್ಯ ಪ್ರದೇಶದ ಅಂಚಿನಲ್ಲಿಯೇ ಇದೆ. ಪೊಲೀಸರು ಈಗ ಆಂದಿಯೂರು, ಭವಾನಿಸಾಗರ, ಚೆಟ್ಟಿಪಾಳ್ಯ, ತೆಂಗು ಮರಹಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications