ಮಳೆರಾಯನಿಗೂ ಉಂಟೆ ಹೆಂಡತಿ, ಮಕ್ಕಳು !
ಭಾನುವಾರದ ಬಿಡುವಿನ ಹೊತ್ತಿನಲ್ಲಿ ತೂರಿ ಬಂದ ಪ್ರಶ್ನೆಗೆ, ನಮ್ಮ ನಿಲಯದ ಹಿರಿಯ ಕಲಾವಿದರು ಊ್ಞಂ! ಅಂತಾ ಸ್ಪಷ್ಟವಾಗಿ ಹೇಳಿದರು. ಮಳೆರಾಯನನ್ನೇನು ಗುಂಡರು ಗೋವಿ ಅಂತಾ ತಿಳಿದಿರೇನು- ಪ್ರಶ್ನೆ ಕೇಳಿದವರ ಬಗ್ಗೆಯೇ ಅವರಿಗೆ ಸಿಟ್ಟು .
ಕಳೆದೆರಡು ದಿನಗಳಲ್ಲಿ ರಾಜ್ಯದ ಅಂಗಳದಿಂದ ಕಾಣೆಯಾಗಿರುವ ಮಳೆರಾಯನ ಗಮನಿಸಿದರೆ ನಮ್ಮ ಹಿರಿ ಕಲಾವಿದರು ಹೇಳಿದಂತೆ ಅವನಿಗೆ ಮನೆಯಿರಲೇಬೇಕು. ಪಾಪ! ಕುಟುಂಬದೊಂದಿಗೆ ತುಸು ವಿರಮಿಸಿಕೊಳ್ಳಲು ಅವನು ನಡೆದಿರಬೇಕು. ಆತ ತಾನೇ ಎಷ್ಟೆಂದು ಗೊಣಗು ಅರಗಿಸಿಕೊಳ್ಳಲು ಸಾಧ್ಯ. ಮಹಾರಾಣಿಯಾದರೂ, ಆತನ ಹೆಂಡತಿಯೂ ಹೆಣ್ಣೇ. ಹೊತ್ತಿಗೆ ಸರಿಯಾಗಿ ಮನೆಗೆ ಬಾರದೆ ಅಲೆಯುವ ಗಂಡನ ಬಗ್ಗೆ ಅವಳಿಗೂ ಅಸಮಾಧಾನವೆ. ಒಟ್ಟಿನಲ್ಲಿ ದಂಪತಿಗಳು ಮತ್ತೆ ಕೂಡಿದ್ದಾರೆ. ಸಂತೋಷವಾಗಿರಲಿ. ಅವರ ಬಾಳಂಗಳದಲ್ಲಿ ಪ್ರೀತಿಯ ವೃಷ್ಟಿ ಸಮೃದ್ಧವಾಗಲಿ. ಮಳೆಯಕ್ಕನ ವಾರಸುದಾರನ ಸಂತಾನದಾಸೆ ಫಲಿಸಲಿ.
ಆಹಾ ! ಏನಾ ಚುಮು ಚುಮು ಬಿಸಿಲು...
ಇವರು ಮೆಚ್ಚುವ ಕಾಲ ಇಲ್ಲಿಲ್ಲ ಜೋಕೆ ಎಂದು ಕವಿ ಈಶ್ವರ ಸಣಕಲ್ಲ ಹೇಳಿದ್ದು ನಿಜ ಅನ್ನಿಸುತ್ತದೆ. ಮಳೆ ಅಂತಾ ಮೂಗೆಳೆಯುತ್ತಿದ್ದ ಮಂದಿಯೀಗ ನೆತ್ತಿ ಚುರುಗುಡುತ್ತಿದೆ ಅಂತಾ ಮುಖ ಕೆಂಪಗೆ ಮಾಡಿಕೊಳ್ಳುತ್ತಿದ್ದಾರೆ. ಹನಿಗೆ ತಲೆ ಸಿಕ್ಕಾಗುತ್ತದೆ ಎಂದು ತಲೆಗೆ ಮುಸುಕೆಳೆವ ಕೆಲವು ಇಪ್ಪತ್ತು - ಎಪ್ಪತ್ತರವರು ಈಗಲೂ ಮುಸುಕು ತೆಗೆದಿಲ್ಲ . ಅವರ ನೆವವೀಗ ಬಿಸಿಲು. ಅಲ್ಲಿಗೆ ಸೆರಗೆ ಸೆರಗೆ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿಯವರಿಗೆ, ತಲೆಮೇಲೆ ಮಲಗಿದ್ದೆ ಎಂದು ಸೆರಗು ಹೊಸ ಉತ್ತರ ಹೇಳಬಹುದು.
ಬಿಸಿಲು ಝಳ ಝಳ ಅನ್ನುತ್ತಿರುವಂತೆ ಅತ್ತ ಬೀದಿಬದಿ ವ್ಯಾಪಾರಸ್ಥರು ಕಾಸು ಕಾಣುತ್ತಿದ್ದಾರೆ. ಮಳೆಯಿಂದ ಗಂಟೆಗೆ ನಲವತ್ತೆೈದು ನಿಮಿಷ ಗಂಟು ಕಟ್ಟುತ್ತಿದ್ದ ಮಂದಿ ಈಗ ನಿರಾಳವಾಗಿದ್ದಾರೆ. ಜನರೂ ರಸ್ತೆಗಿಳಿದಿರುವುದರಿಂದ ವ್ಯಾಪಾರ ಚುರುಕಾಗಿದೆ. ಕಿಲುಬು ತೊಳೆದುಕೊಂಡ ಕಬ್ಬಿನ ಹಾಲು ಅರೆಯುವ ಯಂತ್ರಗಳು ಮತ್ತೆ ಎಣ್ಣೆಯಲ್ಲಿ ಮಿಂದು ರಸ ಹಿಂಡುತ್ತಿವೆ.
ನವಂಬರ್ 5, ಭಾನುವಾರದ ಬಿಸಿ ಬಿಸಿ ಹವಾ
ರಾಜ್ಯಾದ್ಯಂತ ಒಣ ಹವೆಯ ಯಶಸ್ವಿ ಪ್ರದರ್ಶನ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಯಥಾಪ್ರಕಾರ ಒಣಹವೆ ಮುಂದುವರಿದಿದ್ದರೆ, ಕರಾವಳಿ ಹಾಗೂ ಉತ್ತರ ಒಳನಾಡಿನ ಉಷ್ಣಾಂಶದಲ್ಲಿ ಕಿಂಚಿತ್ತು ಬದಲಾವಣೆ ಕಾಣಿಸಿಕೊಂಡಿದೆ. ದಿನದ ಕನಿಷ್ಠ ಉಷ್ಣತೆ ಬೆಳಗಾವಿಯಲ್ಲಿತ್ತು , 18.4 ಡಿ.ಸೆಂ.
ಹವಾಮಾನ ಇಲಾಖೆ ನಾಳೆ ನಾಳಿದ್ದು ಕೂಡ ಬಿಸಿಲು- ಮಳೆಯಲ್ಲಿ ಅಂಥಾ ಬದಲಾವಣೆ ಇರುವುದಿಲ್ಲ ಅಂದಿದೆ. ಅಂದಮೇಲೆ ರಾಜ್ಯಾದ್ಯಂತ ಒಣ ಹವೆ ಮುಂದುವರಿಕೆ ಎಂದರ್ಥ. ಬೆಂಗಳೂರಿನಲ್ಲಿ ಮಾತ್ರ ಭಾಗಶಃ ಮೋಡ ಆಡುವ ಆಕಾಶವಿದ್ದು, ಕನಿಷ್ಠ ಉಷ್ಣಾಂಶ 19 ಡಿ.ಸೆ.ಆಸುಪಾಸಿನಲ್ಲಿರುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications