ದಶಮಾನೋತ್ಸವ ಕಂಡ ರಾಯಚೂರಿನ ಇನ್‌ಫ್ಯಾಂಟ್ ಶಾಲೆ
ರಾಯಚೂರು : ಇಲ್ಲಿನ ಇನ್‌ಫ್ಯಾಂಟ್ ಜೀಸಸ್ ಶಾಲೆಗೆ ಈಗ ದಶಮಾನೋತ್ಸವದ ಸಂಭ್ರಮ. 1991-92ರ ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಯಾದ ಶಾಲೆ ಇವತ್ತು ಮೂರು ಎಕರೆ ಜಾಗದಲ್ಲಿ ಸಕಲ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಅರವತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ 40 ಕೊಠಡಿಗಳ ಸುಸಜ್ಜಿತ ಕಟ್ಟಡವಾಗಿ ರೂಪುತಳೆದಿದೆ. ಶಾಲೆಗೆ ಸುಂದರವಾದ ಹಾಗೂ ಭವ್ಯವಾದ ಕ್ರೀಡಾಂಗಣವೂ ಇದೆ. ಸಂಸ್ಥೆಯ ಬೆಳವಣಿಗೆಯ ಹಿಂದಿನ ಪ್ರೇರಣೆ ಬಳ್ಳಾರಿಯ ಕ್ಯಾಥೋಲಿಕ್ ಧರ್ಮಾಧಿಕಾರಿ ಫಾದರ್ ಅಂತೋಣಿ ಪುತ್ತೆಂಕುಲಮ್. ರಾಯಚೂರು ಜನತೆಯ ಶೈಕ್ಷಣಿಕ ಅಗತ್ಯ ಪೂರೈಸುವ ಸದುದ್ದೇಶದಿಂದ ಕ್ಯಾಥೋಲಿಕ್ ಧರ್ಮಗುರುಗಳಾದ ಫಾದರ್ ಸೆಬಾಸ್ಟಿಯನ್ ಕುಲತ್ತಿನಾಳರ ನೇತೃತ್ವದಲ್ಲಿ ವಿದ್ಯಾನಗರದಲ್ಲಿ 1993ರಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಯಿತು. ಎಲ್. ಕೆ. ಜಿ ಯಿಂದ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಇಂದು ದೊಡ್ಡದಾಗಿ ಬೆಳೆದು ನಿಂತಿದೆ.
ನೂರಕ್ಕೆ ನೂರು ಫಲಿತಾಂಶ : ನಂತರ ಬಂದ ಫಾದರ್ ವಿಜಯಕುಮಾರ್, ಫಾದರ್ ಭಗವಂತರಾಜ ಶಾಲೆಯ ಅಭಿವೃದ್ಧಿ ಕೆಲಸವನ್ನು ಮುಂದುವರಿಸಿದರು. ಶಾಲೆ ಉದ್ದೇಶಗಳನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಆಧುನಿಕ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಹೊಂದಿದೆ. 1999-2000ದ ಸಾಲಿನ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ವಿದ್ಯಾರ್ಥಿಗಳು ಪಾಸಾದ ಹೆಗ್ಗಳಿಕೆ ಪಡೆದಿದೆ. ಪ್ರತಿ ತರಗತಿಗೆ ಸುಸಜ್ಜಿತ ಗ್ರಂಥಾಲಯ, ವೈಜ್ಞಾನಿಕ ಪ್ರಯೋಗಾಲಯ, ವಿಶಾಲವಾದ ಆಟದ ಮೈದಾನ ಹೊಂದಿರುವ ಶಾಲೆಯಲ್ಲಿ ಈಗ ಎಲ್.ಕೆ.ಜಿ ಯಿಂದ ಎಂಟನೇ ವರ್ಗದವರೆಗೂ ಶಾಲೆಗಳು ನಡೆಯುತ್ತವೆ. ಇಲ್ಲಿ ಕಂಪ್ಯೂಟರ್ ಶಿಕ್ಷಣವೂ ಲಭ್ಯ.
ಕೊಡುಗೈ ದಾನಿಗಳ ಸಹಾಯ : ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಾರ್ವಜನಿಕರು, ದಾನಿಗಳು ಮತ್ತು ಶೈಕ್ಷಣಿಕ ಆಸಕ್ತರಿಂದ ಸಹಾಯಧನ ಸಂಗ್ರಹಿಸಲಾಗಿದೆ. ಪಾಠದಲ್ಲಷ್ಟೇ ಅಲ್ಲದೆ ಶಾಲೆಯ ಮಕ್ಕಳು ಆಟೋಟಗಳಲ್ಲೂ ಸದಾ ಮುಂದು. ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ರಾಹುಲ್ ಎಂಬ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದಾನೆ. ಇಷ್ಟಲ್ಲದೆ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ, ಹಾಡುಗಾರಿಕೆ, ಚಿತ್ರಕಲೆ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಸದಾ ನಡೆಸಲಾಗುತ್ತದೆ. ಶಾಲೆ ತನ್ನದೇ ಆದ ಸ್ಕೌಟ್ ಮತ್ತು ಗೈಡ್ಸ್ ತಂಡ ಹೊಂದಿದೆ. ತಪ್ಪದೆ ಆಚರಿಸುವ ವನಮಹೋತ್ಸವದಿಂದ ಶಾಲೆಯ ವಾತಾವರಣ ಹಸಿರಾಗಿದೆ. ವಿದ್ಯಾರ್ಥಿಗಳೇ ಸಂಗ್ರಹಿಸಿದ 6 ಸಾವಿರ ರುಪಾಯಿ ಕಾರ್ಗಿಲ್ ನಿಧಿ ತಲುಪಿದೆ. ಇದು ಶಾಲೆಯ ವಿದ್ಯಾರ್ಥಿಗಳ ಮನೋಧರ್ಮಕ್ಕೆ ಹಿಡಿದ ಕನ್ನಡಿ.
ಜಿಲ್ಲೆಯ ಜನರ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನ್ಮತಳೆದ ಶಾಲೆ ದಶಮಾನೋತ್ಸವ ಕಂಡಿದೆ. ಶಾಲೆ ಇನ್ನೂ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ದಶಮಾನೋತ್ಸವದ ಸಂದರ್ಭದಲ್ಲಿ ಹಾರೈಸೋಣ.
(ರಾಯಚೂರು ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications