Get Updates
Get notified of breaking news, exclusive insights, and must-see stories!

ಇನ್ಸಾಟ್‌-2ಬಿ ಮತ್ತೆ ವೈಫಲ್ಯ, ಇಂಧನ ಮುಗಿದಿರಬಹುದೆಂಬ ಶಂಕೆ

ಬೆಂಗಳೂರು : ಭೂಮಿಯ ಸಂಪರ್ಕವನ್ನೇ ಕಳೆದುಕೊಂಡಿದ್ದ ಉಪಗ್ರಹದ ಮೇಲೆ ಹಾಸನದ ಇಸ್ರೋ ವಿಜ್ಞಾನಿಗಳು ನಿಯಂತ್ರಣ ಸಾಧಿಸಿದ್ದ ಸಂತಸ ಕೇವಲ 12 ಗಂಟೆಗಳಲ್ಲೇ ಇಲ್ಲವಾದಂತಾಗಿದೆ. ಶನಿವಾರ ಸಂಜೆ ನಿಯಂತ್ರಣಕ್ಕೆ ಸಿಕ್ಕಿದ್ದ ಇನ್ಸಾಟ್‌- 2ಬಿ ಉಪಗ್ರಹ, ಭಾನುವಾರ ಬೆಳಿಗ್ಗೆ ಮತ್ತೆ ಭೂ ಸಂಪರ್ಕ ಕಳೆದುಕೊಂಡಿರುವುದಾಗಿ ಇಸ್ರೋ ಮೂಲಗಳು ತಿಳಿಸಿವೆ. ಉಪಗ್ರಹವನ್ನು ಮರಳಿ ಭೂ ಸಂಪರ್ಕಕ್ಕೆ ತರಲು ವಿಜ್ಞಾನಿಗಳು ಅವಿರತ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಭೂ ಸಂಪ-ರ್ಕ ಕಳೆ-ದು-ಕೊಂ-ಡಿ-ದ್ದ ಇ-ನ್ಸಾ-ಟ್‌- 2ಬಿ ಉಪ-ಗ್ರ-ಹ-ವ-ನ್ನು ಮತ್ತೆ ಭೂ ನಿಯಂತ್ರಣ ಕಕ್ಷೆಯ ನಿಯಂತ್ರಣಕ್ಕೆ ತರುವಲ್ಲಿ ಶನಿ-ವಾ-ರ ಸಂಜೆ- ಇಸ್ರೋದ ವಿಜ್ಞಾನಿಗಳು ಯಶಸ್ವಿಯಾಗಿದ್ದ ರಾದರೂ ದುರಸ್ಥಿಗೊಂಡ ಉಪಗ್ರಹ ಮತ್ತೆ ಕೆಲವೇ ಗಂಟೆಗಳಲ್ಲಿ ಭೂ ಸಂಪರ್ಕವನ್ನು ಕಳೆದುಕೊಂಡಿತು. ಮುಂದಿನ 24 ಗಂಟೆಗಳ ಕಾಲ ಹಗಲಿರುಳು ದುರಸ್ಥಿ ಕಾರ್ಯ ಮುಂದುವರಿಯುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಚಲ-ನ ನಿಯಂ-ತ್ರ-ಣ-ಕ್ಕೆ ಅಗ-ತ್ಯ-ವಿ-ರು-ವ ನೌಕೆ-ಯ-ಲ್ಲಿ ನ ಆಕ್ಸಿ-ಡೈ-ಸ-ರ್‌ ಖರ್ಚಾಗಿರುವ ಶಂಕೆ ಇದ್ದು ಉಪಗ್ರಹ ಪುನ-ಶ್ಚೇ-ತ-ನ-ದ ಪ್ರಯ-ತ್ನ-ಗಳು ತಡವಾ-ಗುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾನುಲಿ ಹಾಗೂ ದೂರದರ್ಶನದ ಸೇವೆಗಳಿಗೆ ತೊಂದರೆಯಾಗದಂತೆ ಇನ್ಸಾಟ್‌- 2ಬಿ ಟ್ರಾನ್ಸ್‌ಪಾಂಡರ್‌ಗಳು ನಿರ್ವಹಿಸುತ್ತಿದ್ದ ಸೇವೆಗಳನ್ನು ಇನ್ಸಾಟ್‌ ಸರಣಿಯ ಇತರ ಉಪಗ್ರಹಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂಧನ ಖರ್ಚಾಗಿರುವುದು ನಿಜವೇ ಆದಲ್ಲಿ ಇನ್ಸಾಟ್‌ 2 ಬಿಯನ್ನು ನಿಗದಿತ ನಿಯಂತ್ರಣ ಕಕ್ಷೆಗೆ ತರುವುದು ಕಷ್ಟ ಸಾಧ್ಯ ಎಂದೂ ಮೂಲಗಳು ತಿಳಿಸಿವೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+