ಬೆಂಗಳೂರಿಗೆ ಬಂತು ಸಿಂಗಪುರ ಐಡಿಎ ಕಚೇರಿ
ಬೆಂಗಳೂರು : ಸಾಫ್ಟ್ವೇರ್ ರಫ್ತಿಗೆ ಉತ್ತೇಜನ ನೀಡುವ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಸಿಂಗಪುರ ಸರ್ಕಾರ ನಿರ್ಧರಿಸಿದ್ದು , ಇದು ಏಷ್ಯಾದಲ್ಲಿ ಸಿಂಗಪುರ ಸರ್ಕಾರ ಸ್ಥಾಪಿಸುತ್ತಿರುವ ಮೊದಲ ಕಚೇರಿ ಎನ್ನಿಸಲಿದೆ.
ರಾಜ್ಯದ ಐಟಿ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಈ ವಿಷಯವನ್ನು ಶನಿವಾರ ಬೆಂಗಳೂರು ಐಟಿ.ಕಾಂ- 2000 ದ ಮೀಡಿಯಾ ಸೆಂಟರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಿಂಗಪುರ ಪೆವಿಲಿಯನ್ನ ವಕ್ತಾರರು, ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿರುವ ಈ ಕಚೇರಿ ಸಿಂಗಪುರ ಇನ್ಫೋ ಕಾಂ ಅಭಿವೃದ್ಧಿ ಪ್ರಾಧಿಕಾರದ ಮೂರನೇ ಕಚೇರಿ ಅನ್ನಿಸಲಿದೆ ಎಂದರು. ಪ್ರಾಧಿಕಾರದ ಮತ್ತೊಂದು ಕಚೇರಿ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಐಟಿ ಕ್ಷೇತ್ರದಲ್ಲಿ ಬೆಂಗಳೂರು ಗಳಿಸಿರುವ ಹೆಗ್ಗಳಿಕೆ ಇನ್ಫೋ ಕಾಂ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಸ್ಥಾಪನೆಯಿಂದ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟ ವಿವೇಕ ಕುಲಕರ್ಣಿ, ಸಿಂಗಪುರ ಹಾಗೂ ಕರ್ನಾಟಕ ನಡುವಣ ಐಟಿ ಬಾಂಧವ್ಯಕ್ಕೆ ಈ ಕಚೇರಿ ಸೇತುವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಾರ್ತಾ
ಸಂಚಯ
ಮುಖಪುಟ
/
ಬೆಂಗಳೂರು
ಐಟಿ.ಕಾಂ