Get Updates
Get notified of breaking news, exclusive insights, and must-see stories!

ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟ ಹತ್ತುವವರಿಗೆವಿವಿಧ ಪ್ರಾಥಮಿಕ ಸೌಲಭ್ಯಗಳು

ತಿರುಪತಿ : ಬೆಟ್ಟಕ್ಕೆ ಹತ್ತಿ ಬರುವ ದಾರಿಯುದ್ದಕ್ಕೂ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಪ್ರಥಮ ಚಿಕಿತ್ಸಾ ಕೇಂದ್ರ, ಮಕ್ಕಳಿಗೆ ಮನರಂಜನೆ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲು ತಿರುಮಲ- ತಿರುಪತಿ ದೇವಾಲಯದ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ.

ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಕೃಷ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಯೋಜನೆಯಲ್ಲಿ ಉಪಹಾರ ದರ್ಶಿನಿಯಾಂದನ್ನು ತೆರೆಯುವ ಪ್ರಸ್ತಾಪವೂ ಇದೆ. ಕಾಲಿಗೋಪುರಂ, ಏಳನೇ ಮೈಲು ಹಾಗೂ ನರಸಿಂಹ ಸ್ವಾಮಿ ದೇಗುಲಗಳನ್ನು ಯೋಜನೆ ಅಮಲುಗೊಳಿಸುವ ಸ್ಥಳಗಳೆಂದು ಗುರ್ತಿಸಲಾಗಿದೆ.

ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಲು ಶ್ಲೋಕಗಳ ಬರವಣಿಗೆಯುಳ್ಳ ಹಾದಿ ಫಲಕಗಳನ್ನು ನಿರ್ಮಿಸಲಾಗುವುದು ಹಾಗೂ ಧ್ವನಿವರ್ಧಕಗಳಲ್ಲಿ ಸಂಕೀರ್ತನೆಗಳನ್ನು ಪ್ರಸಾರ ಮಾಡಲಾಗುವುದು ಎಂದು ಟಿಟಿಡಿಯ ವಕ್ತಾರರು ತಿಳಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+