ಲಕ್ಷ್ಮಣ್ ಶತಕ, ರಣಜಿ ಪಂದ್ಯ ಡ್ರಾ: ಕರ್ನಾಟಕಕ್ಕೆ 5 ಪಾಯಿಂಟ್
ಬೆಂಗಳೂರು : ಹೈದರಾಬಾದ್ ತಂಡದ ವಿರುದ್ಧ ಇನ್ನಿಂಗ್ಸ್ ಗೆಲುವು ಪಡೆಯುವ ಮೂಲಕ ಪೂರ್ಣ 8 ಪಾಯಿಂಟ್ ಗಳಿಸುವ ಕರ್ನಾಟಕದ ಆಸೆಗೆ ನಾಯಕ ವಿ.ವಿ.ಎಸ್. ಲಕ್ಷ್ಮಣ್ ತಣ್ಣೀರೆರೆಚಿದರು. ಸೂಕ್ತ ಸಮಯದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಮೆರೆದ ಅವರು ಅತ್ಯುಪಯುಕ್ತ ಅಜೇಯ ಶತಕ ಗಳಿಸುವ ಮೂಲಕ ಹೈದರಾಬಾದ್ ತಂಡವನ್ನು ಇನ್ನಿಂಗ್ಸ್ ಸೋಲಿನ ದವಡೆಯಿಂದ ಪಾರು ಮಾಡಿದರು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಶನಿವಾರ ಹೈದರಾಬಾದ್ ತಂಡ ಇನ್ನಿಂಗ್ಸ್ ಸೋಲನ್ನು ತಪ್ಪಿಸಿಕೊಂಡಿದ್ದೇ ಅಲ್ಲದೆ ಪಂದ್ಯವನ್ನು ಡ್ರಾ ಮಾಡಿಕೊಂಡು 3 ಪಾಯಿಂಟ್ ಗಳಿಸುವಲ್ಲಿ ಯಶಸ್ವಿಯಾಯಿತು.
ದಿನದಾಟ ಮುಗಿದಾಗ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 233ರನ್ ಗಳಿಸಿತ್ತು. ಇದಕ್ಕೂ ಮುನ್ನ ನಿನ್ನೆ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದ್ದ ಪ್ರವಾಸಿ ತಂಡ ಎಚ್ಚರಿಕೆಯಿಂದಲೇ ಆಟ ಆರಂಭಿಸಿತು. ಡೇನಿಯಲ್ ಮನೋಹರ್ (49) ಹಾಗೂ ನಂದಕಿಶೋರ್ ಮೊದಲ ವಿಕೆಟ್ ಜತೆಯಾಟದಲ್ಲಿ 95 ರನ್ ಸೇರಿಸುವ ಮೂಲಕ ಕರ್ನಾಟಕದ ಗೆಲುವಿನ ಆಸೆಯನ್ನು ಚಿವುಟಿ ಹಾಕಿದರು. ಡೇನಿಯಲ್ ಮನೋಹರ್ ಜೋಷಿಗೆ ವಿಕೆಟ್ ಒಪ್ಪಿಸಿದ ನಂತರ ನಂದಕಿಶೋರ್ ಜತೆ ಗೂಡಿದ ನಾಯಕ ಲಕ್ಷ್ಮಣ್ ಸೊಗಸಾಗಿ ಆಡಿ ತಂಡದ ಸ್ಕೋರನ್ನು ಮುನ್ನಡೆಸಿದರು.
ಜವಾಬ್ದಾರಿಯುತವಾದ ಆಟವಾಡಿದ ಲಕ್ಷ್ಮಣ್ 115 ಚೆಂಡುಗಳನ್ನು ಎದುರಿಸಿ ತಮ್ಮ ಜೀವಿತದ 19ನೇ ಶತಕ ಗಳಿಸಿದರು. ಆಕರ್ಷಕ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸಿದರು. 9 ಕಡ್ಡಾಯ ಓವರ್‌ಗಳು ಮುಗಿದ ನಂತರ ಇಬ್ಬರೂ ನಾಯಕರ ಒಪ್ಪಿಗೆಯ ಮೇರೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದ್ದ ಕರ್ನಾಟಕ ಈ ಪಂದ್ಯದಿಂದ 5 ಪಾಯಿಂಟ್ ಗಳಿಸಿತು.
ವಿಜಯ್ ಭಾರಧ್ವಾಜ್ ನಾಯಕ : ತಮಿಳುನಾಡು ತಂಡದ ವಿರುದ್ಧ ಚೆನ್ನೈನಲ್ಲಿ ನವೆಂಬರ್ 8ರಿಂದ 11ರವರೆಗೆ ನಡೆಯುವ ದಕ್ಷಿಣ ವಲಯ ರಣಜಿ ಲೀಗ್ ಪಂದ್ಯದ ನಾಯಕತ್ವವನ್ನು ಕರ್ನಾಟಕದ ಆಲ್‌ರೌಂಡರ್ ವಿಜಯ್ ಆರ್. ಭಾರದ್ವಾಜ್ ವಹಿಸಲಿದ್ದಾರೆ.
ತಂಡ ಇಂತಿದೆ : ಭಾರದ್ವಾಜ್ (ನಾಯಕ), ಬಿ. ಅಖಿಲ್, ಆನಂದ್ ಯಾವಳಗಿ, ಜೆ. ಅರುಣ್ ಕುಮಾರ್, ರೊನಾಲ್ಡ್ ಬ್ಯಾರಿಂಗ್ಟನ್, ಧರ್ಮಿಚಾಂದ್, ಡಿ. ಗಣೇಶ್, ಎ.ಆರ್. ಮಹೇಶ್, ಮನ್ಸೂರ್ ಅಲಿ ಖಾನ್, ಮಿಥುನ್ ಬಿರಾಲಾ, ರಾಜಶೇಖರ್ ಶಾನ್‌ಬಾಳ್, ಸಂತೋಷ್ ಒಡೆಯ್‌ರಾಜ್, ಸುಜಿತ್ ಸೋಮಸುಂದರ್, ಸುನಿಲ್ ಕುಮಾರ್, ತಿಲಕ್ ನಾಯ್ಡು (ವಿಕೆಟ್ ಕೀಪರ್) ಕೋಚ್ - ಎಸ್.ಎಂ.ಎಚ್. ಕಿರ್ಮಾನಿ, ಮ್ಯಾನೇಜರ್ ಜೆ. ಅಭಿರಾಂ.
ಸಂಕ್ಷಿಪ್ತ ಸ್ಕೋರು : ಕರ್ನಾಟಕ ಮೊದಲ ಇನ್ನಿಂಗ್ಸ್ 160.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 545 ಡಿಕ್ಲೇರ್.
ಹೈದರಾಬಾದ್ ಮೊದಲ ಇನ್ನಿಂಗ್ಸ್ 291 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 233.
ಡೇನಿಯಲ್ 49, ಲಕ್ಷ್ಮಣ್ ನಾಟೌಟ್ 100, ವೆಂಕಪ್ರತಾಪ್ 26. ಜೋಷಿ 81ಕ್ಕೆ 1, ಯಾವಳಗಿ 72ಕ್ಕೆ 1.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications