ಹೈದರಾಬಾದ್‌ಗೆ ಫಾಲೋಆನ್:ರಾಜ್ಯ ತಂಡಕ್ಕೆ ಇನಿಂಗ್ಸ್ ಮುನ್ನಡೆ
ಬೆಂಗಳೂರು : ಮೊದಲ ಇನಿಂಗ್ಸ್‌ನಲ್ಲಿ 254 ರನ್‌ಗಳ ಹಿನ್ನಡೆಯಾಂದಿಗೆ ಫಾಲೋಆನ್ ಪಡೆದಿರುವ ಹೈದರಾಬಾದ್ ತಂಡ ಮೂರನೇ ದಿನದಾಟದ ಕೊನೆಗೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿತ್ತು .
ಎರಡನೇ ದಿನದ ಕೊನೆಗೆ ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿದ್ದ ಹೈದರಾಬಾದ್ ತಂಡ, ಮೂರನೇ ದಿನದ ಆಟದಲ್ಲಿ ನಂದಕಿಶೋರ್ ಅವರನ್ನು ಬೇಗನೆ ಕಳೆದುಕೊಂಡಿತು. 18 ರನ್ ಗಳಿಸಿದ್ದ ಅವರು ಶ್ರೀನಾಥ್‌ಗೆ ಎಲ್‌ಬಿ ಆದರು. ಆ ಸಂದರ್ಭದಲ್ಲಿ ಡೇನಿಯಲ್ ಮನೋಹರ್ ಅವರನ್ನು ಸೇರಿಕೊಂಡ ನಾಯಕ ವಿ.ವಿ.ಎಸ್. ಲಕ್ಷ್ಮಣ್ ಎರಡನೇ ವಿಕೆಟ್ ಜೊತೆಯಾಟಕ್ಕೆ 103 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ನಂತರ ಬಂದ ವಿನಯ್ ಕುಮಾರ್ ಕೂಡ ಉತ್ತಮ ಆಟವಾಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಕಚ್ಚಿ ನಿಂತು ಆಡದ ಕಾರಣ ಹೈದರಾಬಾದ್‌ನ ಮೊದಲ ಇನಿಂಗ್ಸ್ , 291 ರನ್‌ಗಳು- ಫಾಲೋಆನ್‌ನೊಂದಿಗೆ ಕೊನೆಗೊಂಡಿತು.
ಜೋಷಿ ಬೌಲಿಂಗ್‌ನಲ್ಲಿ ತಿಲಕ್‌ನಾಯ್ಡು ಅವರಿಂದ ಸ್ಟಂಪ್ ಆಗುವ ಮುನ್ನ , 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನೊಳಗೊಂಡಿದ್ದ 60 ರನ್(92)ಗಳನ್ನು ಲಕ್ಷ್ಮಣ್ ಸಿಡಿಸಿದ್ದರು. ಮನೋಹರ್ 73 ರನ್ ಗಳಿಸಿದರೆ, ವಿನಯ್‌ಕುಮಾರ್ 68 ರನ್ ಗಳಿಸಿ ಗಮನ ಸೆಳೆದರು.
ಹೈದರಾಬಾದ್‌ನ ನಾಲ್ವರು ಆಟಗಾರರನ್ನು ಔಟ್ ಮಾಡಿದ ಶ್ರೀನಾಥ್ ರಾಜ್ಯ ತಂಡದ ಯಶಸ್ವಿ ಬೌಲರ್ ಎನಿಸಿದರೂ, ಅವರ ಬೌಲಿಂಗ್‌ನಲ್ಲಿ ಎದುರಾಳಿಗಳು ಸಾಕಷ್ಟು ರನ್ ಗಳಿಸಿದರು. 11 ನೋಬಾಲ್ ಎಸೆದ ಶ್ರೀನಾಥ್ ತಮ್ಮ ಮೊನಚು ಕಂಡುಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದುದು ಸ್ಪಷ್ಟವಾಗಿತ್ತು . ಉಳಿದಂತೆ ಪ್ರಸಾದ್ ಹಾಗೂ ಜೋಷಿ ತಲಾ 2 ಮತ್ತು ಗಣೇಶ್ ಹಾಗೂ ಆನಂದ್ ಯಲವಗಿ ತಲಾ 1 ವಿಕೆಟ್ ಗಳಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications