ಮಂಗಳೂರು ಮಜಗಾಂವ್ ಡಾಕ್ ಯಾರ್ಡ್ ಕಂಪೆನಿ ಇನ್ನಿಲ್ಲ
ಮಂಗಳೂರು: ಸಾಗರದಾಳದಿಂದ ತೈಲ ನಿಕ್ಷೇಪ ಪತ್ತೆ ಹಚ್ಚಿ ಬಾವಿ ಕೊರೆಯಲು ಬೇಕಾಗುವ ರಿಗ್ ನಿರ್ಮಾಣ ಮತ್ತು ತೈಲ ಬಾವಿಗಳಿಗೆ ಅಗತ್ಯವಾದ ಪೈಪ್ಗಳಿಗೆ ಕೋಟಿಂಗ್ ಹಾಕುವ ಕೆಲಸ ನಿರ್ವಹಿಸುತ್ತಿದ್ದ, ಮಜಗಂವ್ ಡಾಕ್ ಮಂಗಳೂರು ಯಾರ್ಡ್ ಶುಕ್ರವಾರದಂದು ಶಾಶ್ವತವಾಗಿ ಮುಚ್ಚಿತು.
ಪಣಂಬೂರು ಬಂದರಿನಲ್ಲಿ ಭಾರತ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಈ ಕಂಪೆನಿಯ ಮುಖ್ಯ ಶಾಖೆ ಮುಂಬಯಿಯಲ್ಲಿದೆ. ಕಾರ್ಮಿಕರ ಸಣ್ಣ ಪುಟ್ಟ ಜಗಳ ಮತ್ತು ಅಶಾಂತಿಯ ಕಾರಣದಿಂದ ಕ್ಷೀಣಿಸತೊಡಗಿದ ಕಂಪೆನಿಯ ಪ್ರಗತಿ, ಈಗ ಮುಚ್ಚುವ ಹಂತಕ್ಕೆ ತಲುಪಿದೆ.
ಕಂಪೆನಿ ಮುಚ್ಚುತ್ತಿರುವುದರಿಂದ ಕಾಮಿಂಕರನ್ನು ಮುಂಬಯಿ ಶಾಖೆಯಲ್ಲಿ ಕೆಲಸ ಮಾಡುವಂತೆ ಆಡಳಿತ ವರ್ಗ ಹೇಳಿತ್ತು. ಆದರೆ ಅಲ್ಲಿ ಕೆಲಸ ಮಾಡುವ ನೌಕರರಿಗೆ ನೀಡುತ್ತಿದ್ದ ವೇತನಕ್ಕೆ ಸಮನಾಗಿ ಇಲ್ಲಿಂದ ಹೋಗಿರುವ ನೌಕರರಿಗೂ ವೇತನ ನೀಡಬೇಕು ಎನ್ನುವುದನ್ನು ಕಂಪೆನಿ ಒಪ್ಪಿಲ್ಲ. ಇದರಿಂದಾಗಿ 83 ಮಂದಿ ನೌಕರರು ಗತ್ಯಂತರವಿಲ್ಲದೇ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. ಉಳಿದ ಸುಮಾರು 120 ಮಂದಿ ಕಾರ್ಮಿಕರು ತಮ್ಮ ಕುಟುಂಬಗಳನ್ನು ಸಲಹಲು ಬೇರೆ ದಾರಿ ಕಾಣದೇ ಮುಂಬಯಿ ಶಾಖೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications