Get Updates
Get notified of breaking news, exclusive insights, and must-see stories!

ಹಂಪೆಯ ನೆಲದಿಂದ ಕನ್ನಡತನದ ವಿಸ್ತರಣೆ - ಎಸ್‌.ಎಂ. ಕೃಷ್ಣ

Kannada Universityಬಳ್ಳಾರಿ: ದಶಕ ಪೂರೈಸಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ 50 ಲಕ್ಷ ರುಪಾಯಿ ಅನುದಾನ ನೀಡುವ ಹಾಗೂ ಮುಂದಿನ ವರ್ಷದಿಂದ ಹಂಪಿ ಉತ್ಸವ ಆಚರಣೆಗೆ 30 ಲಕ್ಷ ರು.ಗಳನ್ನು ಆಯವ್ಯಯದಲ್ಲಿ ಕಾಯ್ದಿರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಶುಕ್ರವಾರ ಪ್ರಕಟಿಸಿದ್ದಾರೆ.

ನಾಡಿನ ಇತಿಹಾಸದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಸ್ಥಾಪನೆ ಏಕೀಕರಣದ ನಂತರದ ಮಹತ್ವದ ಮೈಲುಗಲ್ಲಾಗಿದೆ, ಬೆಳವಣಿಗೆಯಾಂದಿಗೆ ಸವಾಲನ್ನೂ ಎದುರಿಸುತ್ತಿರುವ ಸಂದರ್ಭದಲ್ಲಿ ನಾಡು, ನುಡಿ, ಸಂಸ್ಕೃತಿಗಳನ್ನು ಪೋಷಿಸುವುದು ಹಾಗೂ ಪುನರುಜ್ಜೀವನಗೊಳಿಸುವುದು ಕನ್ನಡ ವಿವಿಯ ಗುರಿಯಾಗಬೇಕು ಎಂದು ಕೃಷ್ಣ ಹೇಳಿದರು. ವಿವಿಯ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಶ್ವವಿದ್ಯಾಲಯದ ಸಂಶೋಧನೆ, ಪ್ರಕಟಣೆ ಮುಂತಾದ ಜ್ಞಾನ ಪ್ರಸಾರದ ಕಾರ್ಯಗಳಿಗೆ ಯಾವುದೇ ತೊಂದರೆ ಉಂಟಾಗದಂತೆ 50 ಲಕ್ಷ ರು.ಗಳ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಪ್ರಕಟಣೆ ಹಂತದಲ್ಲಿರುವ ಕುವೆಂಪು ಸಮಗ್ರ ಕಾವ್ಯ ಹಾಗೂ ಕನ್ನಡದ ಮೂಲಕ ವಿಶ್ವವನ್ನು ಪರಿಚಯಿಸುವ ವಿಶ್ವಕೋಶಗಳ ಪ್ರಕಟಣಾ ಕಾರ್ಯಗಳನ್ನು ಕೈಗೊಂಡಿರುವ ವಿವಿ ಚಟುವಟಿಕೆಗಳನ್ನು ಕೃಷ್ಣ ಅಭಿನಂದಿಸಿದರು. ಈಗಾಗಲೇ ಗಳಗನಾಥರ ಕಾದಂಬರಿ ಸಂಪುಟಗಳನ್ನು ಹೊರ ತಂದಿರುವ ವಿವಿ, 12 ಸಂಪುಟಗಳ ವಿಶ್ವಕೋಶ ಪ್ರಕಟಣೆ ಕಾರ್ಯ ಹಮ್ಮಿಕೊಂಡಿದ್ದು, ಅದರಲ್ಲಿ 3 ಸಂಪುಟಗಳು ಶುಕ್ರವಾರ ಬಿಡುಗಡೆಯಾದವು.

ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದ ಅವರು, ಹಂಪಿಯ ನೆಲದಿಂದ ಕನ್ನಡತನವನ್ನು ವಿಸ್ತರಿಸುವ ಕೆಲಸಗಳು ನಡೆಯುತ್ತಿವೆ ಎಂದರು. ವಿಜಯನಗರ ಇತಿಹಾಸ ಸಂಪುಟ- 5 ಹಾಗೂ ಸಾವಿರ ಕೀರ್ತನೆ ಕೃತಿಗಳನ್ನು ಇದೇ ಸಂದರ್ಭದಲ್ಲಿ ಕೃಷ್ಣ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಹಾಜರಿದ್ದರು.

ಸಮಾಳ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ

Kallina ratha of Hampiಹೊಸಪೇಟೆಯಲ್ಲಿ ಶುಕ್ರವಾರ ಆರಂಭವಾದ ಹಂಪಿ ಉತ್ಸವವನ್ನು ಸಮಾಳ ಬಾರಿಸುವ ಮೂಲಕ ಉದ್ಘಾಟಿಸಿದ ಮುಖ್ಯಮಂತ್ರಿಗಳು, ಮುಂದಿನ ವರ್ಷದಿಂದ ಉತ್ಸವವನ್ನು ವೈಭವದಿಂದ ಆಚರಿಸುವ ಉದ್ದೇಶದಿಂದ ಆಯವ್ಯಯದಲ್ಲಿ 30 ಲಕ್ಷ ರುಪಾಯಿಗಳನ್ನು ತೆಗೆದಿರಿಸಲಾಗುವುದು ಎಂದರು.

ಹಂಪಿಯ ಪರಂಪರೆ ರಕ್ಷಣೆಗಾಗಿ ಯುನೆಸ್ಕೋ ಹಾಗೂ ಬಳ್ಳಾರಿ ಜಿಲ್ಲಾಡಳಿತ ಸೂಚಿಸಿರುವಂತೆ ಹಂಪಿ ಪ್ರಾಧಿಕಾರ ಮತ್ತು ಹಂಪಿ ಪ್ರದೇಶಾಭಿವೃದ್ಧಿ ಸಮಿತಿ ರಚಿಸಲು ಸರ್ಕಾರ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಂ. ವೈ. ಘೋರ್ಪಡೆ ಅವರು, ಹಂಪಿ- ಆನೆಗೊಂದಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+