ರಂಗುಗೊಳ್ಳಲಿದೆ ಬಿಳಿಗಿರಿ ರಂಗಯ್ಯನ ಬೆಟ್ಟ 60 ಲಕ್ಷ ರು.ಗಳ-ಲ್ಲಿ
ಯಳಂದೂರು : ಇಲ್ಲಿಗೆ ಸಮೀಪದ ಸುಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿ ರಂಗನಾಥ ಸ್ವಾಮಿ ಬೆ-ಟ್ಟ-ವ-ನ್ನು ಅರ್ಥಾತ್ ಬಿ.ಆರ್. ಹಿಲ್ಸ್‌ನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿ-ವೃ-ದ್ಧಿ ಪಡಿ-ಸಿ, ರಾಜ್ಯ ಹಾಗೂ ಕೇಂದ್ರ ಸರಕಾರದ ನೆರವಿನಿಂದ ಯಾತ್ರಿ ನಿವಾಸವನ್ನು ನಿರ್ಮಿಸುವ ಯೋಜನೆಗೆ ಚಾಲನೆ ದೊರೆತಿದೆ. ಈ ವಿಷಯವನ್ನು ಶಾಸಕ ಜಿ.ಎನ್. ನಂಜುಂಡ ಸ್ವಾಮಿ ತಿಳಿಸಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಲಾ 30 ಲಕ್ಷ ರುಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸಿ ನಿರ್ಮಿಸಿ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಗೆ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದರು. ಅಂತೂ ರಮಣೀಯವಾದ ಈ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ದೊರಕುವ ಕಾಲ ದೂರ ಇಲ್ಲ ಎಂಬ ನಂಬಿಕೆಯಾಂದಿಗೆ ಬಿಳಿಗಿರಿ ರಂಗನ ಬೆಟ್ಟದ ಬಗ್ಗೆ ಒಂದೆರಡು ಮಾತು.
ಬಿಳಿಗಿರಿ ರಂಗನ ಬೆಟ್ಟ : ಮೈಸೂರಿಗೆ 120 ಕಿ.ಮೀಟರ್ ಹಾಗೂ ಬೆಂಗಳೂರಿಗೆ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಸಮುದ್ರ ಮಟ್ಟದಿಂದ 5,091 ಅಡಿ ಎತ್ತರದಲ್ಲಿರುವ ಸುಂದರ ಗಿರಿಧಾಮ. ಸುಮಾರು 16 ಕಿ.ಮೀಟರ್ ಹಬ್ಬಿರುವ ಈ ಗಿರಿಶ್ರೇಣಿ ಸುಂದರ ಹಾಗೂ ನೈಸರ್ಗಿಕ ಕಾನನಗಳಿಂದ ಕೂಡಿದ ರಮ್ಯ ತಾಣ.
540 ಚದರ ಕಿಲೋ ಮೀಟರ್ ಹಬ್ಬಿರುವ ಈ ಕಾಡು ಉದ್ದನೆಯ ಹುಲ್ಲು ಹಾಗೂ ಎತ್ತರದ ಮರಗಿಡಗಳಿಂದ ಕೂಡಿದ್ದು ವನ್ಯ ಜೀವಿಗಳ ಬೀಡೂ ಆಗಿದೆ. ಹುಲಿ, ಆನೆ, ಕರಡಿ, ಚಿರತೆ, ಜಿಂಕೆಯೇ ಮೊದಲಾದ ನೂರಾರು ಬಗೆಯ ಪ್ರಾಣಿಗಳು ಇಲ್ಲಿವೆ. ಇವೆಲ್ಲಕ್ಕೂ ಕಳಶ ಪ್ರಾಯ, ಕಾವೇರಿ ನದಿಯ ತಡದಲ್ಲಿರುವ ಈ ಬೆಟ್ಟದಲ್ಲಿ ನೆಲೆಸಿರುವ ಬಿಳಿಗಿರಿ ರಂಗನ ರಮಣೀಯ ದೇವಾಲಯ. ಗಿರಿ ಶಿಖರದ ಮೇಲಿರುವ ಈ ಪುರಾತನ ದೇಗುಲದಿಂದಾಗಿಯೇ ಈ ಭೂ ಹಾಗೂ ಅರಣ್ಯ ಭಾಗಕ್ಕೆ ಬಿಳಿಗಿರಿ ರಂಗನ ಬೆಟ್ಟ ಎಂಬ ಹೆಸರೂ ಬಂದಿದೆ. ಶಿವನಸಮುದ್ರದ ಗಂಗರಾಜರ ಆಳ್ವಿಕೆಯ ಕಂಚಿಕೋಟೆಯೂ ಇಲ್ಲಿದೆ. ಇಲ್ಲಿಗೆ ಸಮೀಪದ ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಹಿಮವದ್ಗೋಪಾಲ ಸ್ವಾಮಿ ಬೆಟ್ಟವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ರಥ : ಎರಡು ವರ್ಷಗಳಿಗೊಮ್ಮೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ಅಂದರೆ ವೈಶಾಖ ಮಾಸದಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ. ಸಾವಿರಾರು ಭಕ್ತರು ಈ ಸಮಯದಲ್ಲಿ ಇಲ್ಲಿಗೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಹವಾಮಾನ : ಸಾಮಾನ್ಯವಾಗಿ ವರ್ಷದ 365 ದಿನವೂ ಆಹ್ಲಾದಕರ ಹವಾಮಾನವುಳ್ಳ ಬೆಟ್ಟ ಬೇಸಿಗೆಯ ಬಿಸಿಲಿನಿಂದ ಮುಕ್ತಿ ಪಡೆದು ರಜೆಯಲ್ಲಿ ನಾಲ್ಕು ದಿನ ಆನಂದವಾಗಿ ಕಳೆಯಲು ಸುಂದರ ತಾಣ.
ವಾಹನ ಸೌಕರ್ಯ : ಬೆಂಗಳೂರು ಹಾಗೂ ಮೈಸೂರು, ಯಳಂದೂರು, ಚಾಮರಾಜನಗರಗಳಿಂದ ಇಲ್ಲಿಗೆ ನೇರ ಬಸ್ ಸೌಲಭ್ಯ ಇದೆ. ಮೈಸೂರಿನವರೆಗೆ ಟ್ರೆೃನ್ ಸೌಲಭ್ಯವೂ ಇದೆ. ಹತ್ತಿರದಲ್ಲೇ ಇರುವ ಕೆ. ಗುಡಿ ಕ್ಯಾಂಪ್‌ನಲ್ಲೂ ತಂಗಲು ಅವಕಾಶ ಇದೆ.
ಮುಖ್ಯವಿಷಯ : ಅಂದಹಾಗೆ ಬಿಳಿಗಿರಿ ರಂಗನ ಬೆಟ್ಟ ವಿಶ್ವ ವಿಖ್ಯಾತಿ ಪಡೆದದ್ದು ಸೋಲಿಗರ ಸೇವೆ ಮಾಡಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್. ಸುದರ್ಶನ್‌ರಿಂದ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications