ಕಾಪಿರೈಟ್ ಉಲ್ಲಂಘನೆ ವಿರುದ್ಧ ಕಲ್ಕತ್ತಾ ಕೋರ್ಟ್ ತೀರ್ಪು
* ವಿನೀತಾ ಮಿಶ್ರ
ನವದೆಹಲಿ : ಅಂತಾರಾಷ್ಟ್ರೀಯ ಕಂಪೆನಿಯ ಲಾಂಛನಗಳು ಮತ್ತು ಕಾಪಿರೈಟ್ಗಳನ್ನು ಅಕ್ರಮವಾಗಿ ಉಹಯೋಗಿಸಿಕೊಳ್ಳುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ ಕಾನೂನು ಕ್ರಮಗಳನ್ನಷ್ಟೇ ಅಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದೆಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.
ಈ ತೀರ್ಪಿನಂತೆ ಅಂತಾರಾಷ್ಟ್ರೀಯ ಕಂಪನಿಗಳು ಮತ್ತು ವಿದೇಶಿ ಹೂಡಿಕೆದಾರರ ಲಾಂಛನ ಮತ್ತು ಇತರೆ ಹಕ್ಕುಗಳನ್ನು ಬೇರೆಯವರು ಉಪಯೋಗಿಸುವುದ ಕಾನೂನು ಬಾಹಿರ. ಈ ತೀರ್ಪಿನಿಂದ ವಿದೇಶಿ ಹೂಡಿಕೆದಾರರು ಮತ್ತು ಕಂಪನಿಗಳಿಗೆ ಇದ್ದ ಆತಂಕಗಳು ದೂರವಾದಂತಾಗಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.
ಕಲ್ಕತ್ತಾದ ಪಹಾರ್ಪೂರ್ ಕೂಲಿಂಗ್ ಟವರ್ (ಪಿಸಿಟಿ) ಕಂಪನಿಯ ತಮ್ಮ ಕಂಪನಿಯ ಲಾಂಛನ (ಲೋಗೊ) ಉಪಯೋಗಿಸಿಕೊಳ್ಳುತ್ತಿದ್ದು, ಅದನ್ನು ನಿರ್ಬಂಧಿಸಬೇಕೆಂದು ಅಮೆರಿಕ ಮೂಲದ ಮಾರ್ಲೆ ಕೂಲಿಂಗ್ ಟವರ್ ಕಂಪನಿ (ಎಂಸಿಟಿ) ಕೋರ್ಟ್ ಮೆಟ್ಟಿಲು ಹತ್ತಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ಕಲ್ಕತ್ತಾದ ಕಾಪಿರೈಟ್ ಬೋರ್ಡ್, ಕಾಪಿರೈಟ್ ಉಲ್ಲಂಘನೆ ಆಧಾರದ ಮೇಲೆ ಕಲ್ಕತ್ತಾದ ಪಹಾರ್ಪೂರ್ ಕೂಲಿಂಗ್ ಟವರ್ (ಪಿಸಿಟಿ) ಕಂಪನಿಯ ವಿರುದ್ಧ ಕೇವಲ ಕಾನೂನು ಕ್ರಮ ಅಷ್ಟೇ ಅಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದೆಂದು ತೀರ್ಪು ನೀಡಿದೆ.
ಇಂಡಸ್ಟ್ರಿಯಲ್ ಕೂಲಿಂಗ್ ಟವರ್ಗಳ ಉತ್ಪಾದನೆಯಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಎಂಸಿಟಿ, 1999ರ ಏಪ್ರಿಲ್ನಲ್ಲಿ ಮೊಕದ್ದಮೆ ಹೂಡಿತ್ತು. ತೀರ್ಪು ಸೆಪ್ಟಂಬರ್ 29, 2000ದಂದು ಹೊರಬಿದ್ದಿದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications