Get Updates
Get notified of breaking news, exclusive insights, and must-see stories!

ಒಲಂಪಿಕ್ಸ್‌ನಲ್ಲಿ ಭಾರತೀಯರು ಪದಕ ಗೆಲ್ಲುವುದಿಲ್ಲ ಏಕೆ ಗೊತ್ತೆ?

ಹಿಸಾರ್‌ : ಭಾರತದ ಆಟಗಾರರು ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದಿಲ್ಲ ಏಕೆ ಗೊತ್ತೆ ? ಈ ನಿಟ್ಟಿನಲ್ಲಿ ತರಬೇತಿ- ಮಾರ್ಗದರ್ಶನದ ಕೊರತೆ, ಮೂರ್ಖ ಆಯ್ಕೆದಾರರು, ಮ್ಯಾಚ್‌ ಫಿಕ್ಸಿಂಗ್‌ ಮುಂತಾದ ಕಾರಣಗಳನ್ನು ಪಟ್ಟಿ ಮಾಡಬಹುದು. ಅಂಥಾ ಕಾರಣಗಳಲ್ಲಿ ಒಂದು ಇಲ್ಲಿದೆ.

ಮೊದಲ ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಕ್ಸ್‌ ಮುಷ್ಠಿ ಕಾಳಗ ಪಟು ಉದಯ್‌ ಚಂದ್‌ ಪಹಲ್‌ವಾನ್‌ ಭಾರತದ ಕ್ರೀಡಾ ಒಕ್ಕೂಟಗಳ ಕಾರ್ಯವೈಖರಿ ಬಗೆಗೆ ಗುರುವಾರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಆಯ್ಕೆಯ ಹೆಸರಿನಲ್ಲಿ ಮಹಿಳಾ ಕುಸ್ತಿ ಪಟುಗಳ ಸುಲಿಗೆ ಮಾಡಲಾಗುತ್ತಿದೆ. ಪೋಲೆಂಡ್‌ನಲ್ಲಿ ನಡೆದ ವಿಶ್ವ ಮಹಿಳಾ ಕುಸ್ತಿ ಕೂಟದಲ್ಲಿ ಭಾಗವಹಿಸಿದ್ದ ಮಂಜು,ಒಕ್ಕೂಟಕ್ಕೆ 13 ಸಾವಿರ ನೀಡಿರುವುದಾಗಿ ಹೇಳಿದ್ದಾರೆ. ಕಿಟ್‌ಗಾಗಿ ಈ ಹಣ ಎಂದು ಒಕ್ಕೂಟ ಬಾಯಿ ಮಾತಲ್ಲಿ ಹೇಳುತ್ತಿದೆ. ಆದರೆ ಕಿಟ್‌ಗೆ ತಗಲುವ ವೆಚ್ಚವನ್ನು ಒಕ್ಕೂಟವೇ ಭರಿಸಿದೆ ಎಂದು ದಾಖಲೆಗಳಲ್ಲಿ ನಮೂದಾಗಿದೆ. ಇದು ಕೇವಲ ಮಂಜು ಅವರ ಕತೆಯಲ್ಲ. ಮುಂದುವರೆಯಲು ಬಯಸುವ ಅನೇಕ ಪ್ರತಿಭಾವಂತ ಮಹಿಳೆಯರೂ ಹಣ ಕಕ್ಕಿದ್ದಾರೆ. ಮಂಜು ಬಾಯಿ ಬಿಡುವ ಸಾಹಸ ಮಾಡಿದ್ದಾರೆ ಅಷ್ಟೆ ಎಂದು 12 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಉದಯ್‌ಚಂದ್‌ ಹೇಳುತ್ತಾರೆ.

ಆಟಗಾರರ ಆಯ್ಕೆಯಲ್ಲೂ ಫಿಕ್ಸಿಂಗ್‌ ಇರುತ್ತೆ ಸ್ವಾಮಿ !

ಉದಯ್‌ಚಂದ್‌ ಹಳೆಯ ನಿದರ್ಶನಗಳೊಂದಿಗೆ ತಮ್ಮ ಮಗನಿಗಾಗಿರುವ ಅನ್ಯಾಯ ತೋಡಿಕೊಂಡಿರುವುದು ಹೀಗೆ....

ನಾನು ಇಷ್ಟು ವರ್ಷಗಳ ಕಾಲ ಸುಮ್ಮನಿದ್ದೆ. ಇದು ಇಂದು ನಿನ್ನೆಯದಲ್ಲ. ನಾನು ಆಡುತ್ತಿದ್ದಾಗಲೇ ಕೆನೆಡಿಯನ್‌ ಡಾಲರ್‌ ನೀಡಿದ ಒಕ್ಕೂಟ ಅಮೆರಿಕನ್‌ ಡಾಲರ್‌ ಕೊಟ್ಟಿರುವುದಾಗಿ ನನ್ನ ಕೈಲಿ ಸಹಿ ಮಾಡಿಸಿಕೊಂಡಿತ್ತು. ಆದರೆ ಆಗ ನಾನು ಬಾಯಿ ಬಿಟ್ಟಿದ್ದರೆ ತಂಡದಿಂದ ಹೊರಗುಳಿಯಬೇಕಿತ್ತು. ಎಲ್ಲಾ ಲಾಬಿಯಾಗಿಬಿಟ್ಟಿದೆ. ಮಂಜು ಅಳಲು ಕೇಳಿ ಮನಸ್ಸು ಸುಮ್ಮನಿರಲು ಒಪ್ಪಲಿಲ್ಲ.

ಕೆನಡಾಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ನನ್ನ ಮಗ ಕರಂ ಬೀರ್‌ ಕೇವಲ 2 ಅಂಕಗಳಿಂದ ಅರ್ಹತೆ ಗಳಿಸಲಿಲ್ಲವೆಂದು ಅಧಿಕಾರಿಗಳು ಹೇಳಿದರು. ಒಕ್ಕೂಟ ಆಯ್ಕೆ ಮಾಡಿ ಕಳುಹಿಸಿದ ಕುಸ್ತಿ ಪಟು ಪದಕವನ್ನು ಗೆಲ್ಲುವುದಿರಲಿ, ಭಾರತಕ್ಕೆ ಮರಳಿ ಬರಲೇ ಇಲ್ಲ.

ಅಧಿಕಾರಿಶಾಹಿಗಳ ಹಾಗೂ ಈಗಿನ ಸರಿಯಿಲ್ಲದ ಕ್ರೀಡಾ ನೀತಿಯಿಂದಲೇ ಒಲಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ನೀರಸವಾಗಿದ್ದುದು. ತಮ್ಮ ಪ್ರವಾಸಕ್ಕಾಗಿ ಮನಬಂದಂತೆ ಹಣ ಖರ್ಚು ಮಾಡುವ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ಒಕ್ಕೂಟದ ಸದಸ್ಯರಾಗುವುದನ್ನು ಮತ್ತೆ ನಿಷೇಧಿಸಬೇಕು. ಮಾಡೋ ಖರ್ಚಿಗೆ ಒಕ್ಕೂಟಗಳು ಕಡ್ಡಾಯವಾಗಿ ಲೆಕ್ಕ ಬುಕ್ಕು ಇಡುವಂತೆ ಮಾಡಬೇಕು. ಅಗತ್ಯ ನಿಧಿಯನ್ನು ಮಾತ್ರ ಒಕ್ಕೂಟಗಳಿಗೆ ಒದಗಿಸಬೇಕು.

ಒಲಂಪಿಕ್ಸ್‌ಗೆ ವೇಯ್ಟ್‌ಲಿಫ್ಟಿಂಗ್‌ ತಂಡದ ಆಯ್ಕೆಯಲ್ಲೂ ಕಿರಿಕಿರಿಯಾಗಿತ್ತು ಎಂದು ಕಂಚು ಗೆದ್ದು ತಂದ ಕರ್ಣಂ ಮಲ್ಲೇಶ್ವರಿ ನೊಂದು ನುಡಿದಿರುವುದು, ಕ್ರಿಕೆಟ್‌ ಮ್ಯಾಚ್‌ಫಿಕ್ಸಿಂಗ್‌ ವರದಿ ಸಲ್ಲಿಸಿರುವ ಸಿಬಿಐ ಇತರೆ ಕ್ರೀಡಾ ಒಕ್ಕೂಟಗಳ ವ್ಯವಹಾರ/ಆಡಳಿತದ ಮೇಲೂ ನಿಗಾ ಇಡುವಂತೆ ಸಲಹೆ ಮಾಡಿರುವುದು ಹಾಗೂ ಈಗ ಉದಯ್‌ಚಂದ್‌ ತಮ್ಮ ಅಂತರಂಗದ ಅಳಲನ್ನ ಬಹಿರಂಗ ಪಡಿಸಿರುವುದು ಭಾರತದ ಎಲ್ಲಾ ಕ್ರೀಡಾ ಒಕ್ಕೂಟಗಳ ಕಾರ್ಯ ನಿರ್ವಹಣೆ ಮತ್ತು ಆಯ್ಕೆ ಮಾನದಂಡದ ಬಗೆಗೆ ಸಂಶಯ ಮೂಡಿಸಿದೆ. ಸೂಕ್ತ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಟ್ಟಿರುವ ಕೈಬಿಚ್ಚಲು ಪರಿಸ್ಥಿತಿ ಇನ್ನೂ ಹದಗೆಡಬೇಕೆ?

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+