ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಇನ್ನೆರಡು ಹೊಸ ಕೋರ್ಸುಗಳು

By Staff
|
Google Oneindia Kannada News

ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯವು ‘ಇ-ಕಾಮರ್ಸ್‌ ’ ಹಾಗೂ ‘ಆಹಾರ ಪೌಷ್ಠಿಕತೆ ಮತ್ತು ಸಮತೂಕದ ಆಹಾರ’ ಕುರಿತು ಎರಡು ಹೊಸ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಸ್‌. ಗೋಪಾಲ್‌ ಹೇಳಿದ್ದಾರೆ.

ಅವರು ಮಂಗಳಗಂಗೋತ್ರಿಯಲ್ಲಿ ಬುಧವಾರ ನಡೆದ ಕೌನ್ಸಿಲಿಂಗ್‌ ಸಭೆಯಲ್ಲಿ ಮಾತನಾಡುತ್ತಿದ್ದರು. ಇ-ಕಾಮರ್ಸ್‌ ಓದುವವರಿಗೆ ಬಿ.ಇ.ಕಾಂ ಮತ್ತು ಆಹಾರ ಮತ್ತು ಪೌಷ್ಟಿಕತೆ ಮತ್ತು ಸಮತೂಕದ ಆಹಾರ ಕುರಿತು ಅಧ್ಯಯನ ಮಾಡುವವರಿಗೆ ಬಿ.ಎಫ್‌.ಎನ್‌.ಡಿ.(ಬ್ಯಾಚಲರ್‌ ಆಫ್‌ ಫುಡ್‌ ನ್ಯೂಟ್ರಿಷನ್‌ ಮತ್ತು ಡಯಟಿಟಿಕ್ಸ್‌) ಪದವಿಗಳನ್ನು ನೀಡಲಾಗುವುದು. ಈ ಎರಡು ಪದವಿಗಳನ್ನು ಆರಂಭಿಸಲು ಆಸಕ್ತ ಕಾಲೇಜುಗಳು ವಿವಿಯ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬಹುದು.

ಸಭೆಯಲ್ಲಿ ನಡೆದ ತೀರ್ಮಾನಗಳು -

  • ವಿವಿಯಲ್ಲಿ ಇಸ್ಲಾಂ ಅಧ್ಯಯನ ಕೇಂದ್ರ ತೆರೆಯುವ ಕುರಿತು ಪುನರ್‌ ಪರಿಶೀಲನೆ
  • ಉಡುಪಿ ಮತ್ತು ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಹೆಚ್ಚುವರಿ ತರಗತಿಗಳನ್ನು ಆರಂಭಿಸಲು ಒಪ್ಪಿಗೆ
  • ಮಾಹಿತಿ ವಿಜ್ಞಾನದಲ್ಲಿ ಐದು ವರ್ಷಗಳ ಎಂಎಸ್ಸಿ ಕೋರ್ಸು ಆರಂಭಕ್ಕೆ ನಿರ್ಧಾರ
  • ಪಿಯುಸಿಗೆ ಸಮವಾದ ಜೆಓಸಿ ಪಾಸಾದ ವಿದ್ಯಾರ್ಥಿಗಳು ನೇರವಾಗಿ ಬಿಎಗೆ ಸೇರಲು ಅವಕಾಶ
  • ಪರೀಕ್ಷಾ ಕೆಲಸಗಳ ಬಗ್ಗೆ ಅಧ್ಯಾಪಕರಿಗೆ ನೀಡುತ್ತಿದ್ದ ಸಂಭಾವನೆ ಮುಂದುವರಿಕೆ
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X