Get Updates
Get notified of breaking news, exclusive insights, and must-see stories!

ದಕ್ಷಿಣ ಆಫ್ರಿಕದಲ್ಲಿ ಗಾಂಧಿ : ಸಮಗ್ರ ಮಾಹಿತಿ ಇಲ್ಲಿ ಲಭ್ಯ

*ಫಕೀರ್‌ ಹುಸೇನ್‌

ಜೋಹಾನ್ಸ್‌ಬರ್ಗ್‌ : ಈ ಕೃತಿಯ ಹೆಸರು ಗಾಂಧೀಸ್‌ ಜೋಹಾನ್ಸ್‌ಬರ್ಗ್‌- ಬರ್ತ್‌ಪ್ಲೇಸ್‌ ಆಫ್‌ ಸತ್ಯಾಗ್ರಹ. ಬರೆದವರು ಎರಿಕ್‌ ಇಟ್ಜ್‌ಕಿನ್‌.

ದಕ್ಷಿಣ ಆಫ್ರಿಕದಲ್ಲಿ ಮಹಾತ್ಮಗಾಂಧಿ ವಾಸಿಸಿದ ಕೆಲಸ ಮಾಡಿದ ಸ್ಥಳಗಳ ಐತಿಹಾಸಿಕ ಮಹತ್ವವನ್ನು ದಾಖಲಿಸಬೇಕೆಂದು ಹಂಬಲಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ಆಗ ಭಾರತದ ಸಲಹೆಗಾರರಾಗಿದ್ದ ಎಸ್‌. ಆರ್‌. ತಾಯಲ್‌. ಅವರು 1996ರಲ್ಲಿ ಪ್ರಾರಂಭಿಸಿದ ಯೋಜನೆಯ ಫಲದಿಂದ ಈ ಪುಸ್ತಕದ ಹೊರಬಂದಿದೆ.

ಪುಸ್ತಕಕ್ಕಾಗಿ ವಿವರ ಸಂಗ್ರಹಿಸಲು ಅಪಾರ ಶ್ರಮವಹಿಸಿರುವ ಇಟ್ಜ್‌ಕಿನ್‌, ದಕ್ಷಿಣ ಆಫ್ರಿಕಾದಲ್ಲಿರುವ ಅನೇಕ ಭಾರತೀಯರನ್ನು ಸಂದರ್ಶಿಸಿದ್ದಾರೆ ಮತ್ತು ಇತಿಹಾಸದ ಪುಟಗಳನ್ನು ತಿರುವಿ ವಿವರ ಸಂಗ್ರಹಿಸಿದ್ದಾರೆ.

ಕಳೆದ ಶತಮಾನದ ಕೊನೆಯಲ್ಲಿ ಜೋಹಾನ್ಸ್‌ಬರ್ಗ್‌ ವಲಯದ ನ್ಯೂಟೌನ್‌ನಲ್ಲಿ ಮೊದಲಿಗೆ ಅನೇಕ ಭಾರತೀಯರು ಬಂದು ನೆಲೆಸಿದರು. ಅಂದಿನಿಂದಲೂ ಈ ಭಾಗದಲ್ಲಿ ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್ಸ್‌ ಆಫ್‌ ನ್ಯೂಡೆಲ್ಲಿ ಅವರ ಪ್ರಾಯೋಜಕತ್ವದಲ್ಲಿ ವಸ್ತುಪ್ರದರ್ಶನ ನಡೆಯುತ್ತಾ ಬಂದಿದೆ. ಈ ಪ್ರದರ್ಶನವನ್ನು ಆಧರಿಸಿ ಪುಸ್ತಕ ರಚಿಸಲಾಗಿದೆ. ಜೋಹಾನ್ಸ್‌ಬರ್ಗ್‌ನ ಮ್ಯೂಸಿಯಂನಲ್ಲಿ ಪುಸ್ತಕ ಸಿಗುತ್ತದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+