Get Updates
Get notified of breaking news, exclusive insights, and must-see stories!

ಅರಸುಗಳಿಗಿದು ವೀರ, ಕರ್ನಾಟಕ ಪರಿಣಿತರ ಅಲಂಕಾರ !!

ಬೆಂಗಳೂರು : ಇದು 25 ವರ್ಷಗಳ ಹಿಂದಿನ ಮಾತು. ಅಂದೂ ವಿಧಾನಸೌಧದ ಮುಖ್ಯದ್ವಾರದಲ್ಲಿ ಕನ್ನಡ ರಾಜ್ಯೋತ್ಸವ ಜನತಾ ಉತ್ಸವ ರೂಪದಿ ನಡೆಯುತ್ತಿತ್ತು. 60 ವರ್ಷ ಪೂರೈಸಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಬೆಳ್ಳಿಯ ಗುರಾಣಿ ನೀಡಿ ಪುಷ್ಪ ಮಾಲಿಕೆಯನ್ನು ಅರ್ಪಿಸಿ ಅಭಿನಂದಿಸಲಾಗಿತ್ತು.

ಆ ಸಂದರ್ಭದಲ್ಲಿ ದೇವರಾಜ ಅರಸು ಅವರು, ತಾವು ಮುಖ್ಯಮಂತ್ರಿ ಆಗಿರುವವರೆಗೆ ಬೆಳಗಾವಿಯನ್ನು ಬೇರ್ಪಡಿಸುವುದು ಯಾರಿಗೂ ಸಾಧ್ಯವಿಲ್ಲ . ಅದಕ್ಕೆ ತಾವು ಆಸ್ಪದ ನೀಡುವುದೂ ಇಲ್ಲ. ಬೆಳಗಾವಿಯನ್ನು ವರ್ಗಾಯಿಸಲು ಇಲ್ಲವೇ ವಿಭಜಿಸಲು ಖಂಡಿತಾ ಸಾಧ್ಯವಿಲ್ಲ ಎಂದು ಗಂಟಾಘೋಷವಾಗಿ ನುಡಿದಿದ್ದರು.

ಮುಂದಿನ ರಾಜ್ಯೋತ್ಸವದ ವೇಳೆಗೆ ಕನ್ನಡವನ್ನು ರಾಜ್ಯಮಟ್ಟದಲ್ಲಿ ಅಧಿಕೃತ ಆಡಳಿತ ಭಾಷೆಯನ್ನಾಗಿಸುವ ಭರವಸೆಯನ್ನೂ ನೀಡಿದ್ದರು. ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುವುದಾಗಿಯೂ ತಿಳಿಸಿದ್ದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡುವ ದಿಟ್ಟ ನಿರ್ಧಾರ ಕೈಗೊಂಡ ದೇವರಾಜ ಅರಸು ಅವರನ್ನು ಕನ್ನಡಿಗರು ಅಂದು ವೈಭವದಿಂದ ಸತ್ಕರಿಸಿ ಧನ್ಯವಾದ ಅರ್ಪಿಸಿದ್ದರು.

ದೇವರಾಜ ಅರಸು ಅವರು, ಕನ್ನಡ ಉಳಿಯ ಬೇಕು, ಕನ್ನಡ ಬೆಳೆಯಬೇಕು. ಕನ್ನಡಿಗರ ನಾಡಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು ಎಂದು 25 ವರ್ಷಗಳ ಹಿಂದೆಯೇ ಕನಸು ಕಟ್ಟಿದ್ದರು. ಟೊಂಕ ಕಟ್ಟಿ ದುಡಿದರು. ಅವರ ಅಂದಿನ ಆ ದಿಟ್ಟ ನಿರ್ಧಾರದಿಂದ ಇಂದೂ ಬೆಳಗಾವಿ ವಿಭಜನೆಯಾಗದೆ ಕರ್ನಾಟಕದಲ್ಲೇ ಉಳಿದಿದೆ. ಅವರ ಕನ್ನಡಪರ ನಿಲುವಿನ ಫಲವಾಗಿಯೇ ಆನಂತರದ ನಿರಭಿಮಾನಿ ಸರಕಾರಗಳಲ್ಲೂ ಕನ್ನಡ ಭಾಷೆ, ಆಡಳಿತದಲ್ಲಿ ಅಷ್ಟೋ ಇಷ್ಟೋ ಜೀವಂತವಾಗಿದೆ. ಇಲ್ಲವಾಗಿದ್ದರೆ, ಇಷ್ಟು ಹೊತ್ತಿಗೆ ಕನ್ನಡ ಅನ್ಯಭಾಷಿಕ ಐಎಎಸ್‌ ಅಧಿಕಾರಿಗಳ ತುಳಿತಕ್ಕೆ ಸಿಕ್ಕ ನಾಮಾವಶೇಷವಾಗಿ ಹೋಗುತ್ತಿತ್ತು.

ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಲು ದೇವರಾಜ ಅರಸು ಅವರು ಅಂದೇ ಪ್ರಯತ್ನಿಸಿದ್ದರು. ಆದರೆ ಇಂದು - ಈ ಹೊತ್ತು ಬೆಳಗಾವಿಯಲ್ಲಿರುವ ಐಪಿಎಸ್‌ ಅಧಿಕಾರಿ ಹಾಗೂ ಐಎಎಸ್‌ ಅಧಿಕಾರಿಗಳು ಕನ್ನಡ ಬಾರದ ಬಿಹಾರಿಗಳು ಎನ್ನುವುದನ್ನು ನೀವು ಗಮನಿಸಬೇಕು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+