ಬೆಳ್ನೊರೆ ಹಾವಳಿ : ತ್ಯಾಜ್ಯ ಸಂಸ್ಕರಣ ಘಟಕಗಳಿಲ್ಲದ 10 ಫ್ಯಾಕ್ಟರಿಗಳಿಗೆ ನೋಟಿಸ್
ಬೆಂಗಳೂರು : ಬೆಳ್ಳಂದೂರು ಕೆರೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಬೆಳ್ನೊರೆ ಹಾವಳಿಗೆ ರಫ್ತು ಉದ್ಯಮದಲ್ಲಿ ನಿರತವಾಗಿರುವ ಗಾರ್ಮೆಂಟ್ ಇಂಡಸ್ಟ್ರೀಸ್‌ಗಳೇ ಮುಖ್ಯ ಕಾರಣ ಎಂದು ತೀರ್ಮಾನಕ್ಕೆ ಬರಲಾಗಿದ್ದು, ಹತ್ತು ಗಾರ್ಮೆಂಟ್ ತಯಾರಿಕಾ ಘಟಕಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸು ಜಾರಿ ಮಾಡಿದೆ.
ಈ ಗಾರ್ಮೆಂಟ್ ಫ್ಯಾಕ್ಟರಿ ಭಾರಿ ಪ್ರಮಾಣದ ರಫ್ತು ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ, ಪರಿಸರದ ಕುರಿತು ಕಾಳಜಿ ವಹಿಸುವ ಗೊಡವೆಗೆ ಹೋಗದೆ, ಸಂಸ್ಕರಣೆ ಮಾಡದ ತ್ಯಾಜ್ಯ ವಸ್ತುಗಳನ್ನು ಮಡಿವಾಳ ಮತ್ತು ಆಗರಾಮ್ ಕೆರೆಗಳಿಗೆ ಹರಿಯ ಬಿಡುತ್ತಿದೆ. ಇದನ್ನು ಗಮನಿಸಿದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಲಿನ್ಯ ಹರಡುತ್ತಿರುವ 10 ಘಟಕಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಆಗಿರುವ ಅನಾಹುತಗಳನ್ನು ಸರಿಪಡಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಫ್ಯಾಕ್ಟರಿಗಳಿಂದ ಹಣ ವಸೂಲು ಮಾಡುವ ಅಧಿಕಾರ ಇಲ್ಲವಾದರೂ ಮತ್ತೊಮ್ಮೆ ಇಂತಹ ಅನಾಹುತಾವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ನೋಟಿಸ್‌ಗಳು ಕೆಲಸ ಮಾಡಬಹುದು.
ರಿಂಗ್ ರೋಡ್ ಬಳಿಯ ಆರು ಗಾರ್ಮೆಂಟ್ ತಯಾರಿಕಾ ಘಟಕಗಳ ತ್ಯಾಜ್ಯಗಳು ಅಗರಾಮ್ ಕೆರೆ ಸೇರಿ ನೀರನ್ನು ಮಸುಕಾಗಿಸಿವೆ. ಸರ್ಜಾಪುರ ರಸ್ತೆಯ ಜಕ್ಕಸಂದ್ರ ಬಳಿಯ ಇನ್ನೊಂದು ಫ್ಯಾಕ್ಟರಿ ಕೂಡ ತ್ಯಾಜ್ಯ ನೀರನ್ನು ಸಂಸ್ಕರಿಸುವ ಘಟಕವನ್ನು ಹೊಂದಿಲ್ಲ. ನೋಟಿಸು ಪಡೆದಿರುವ ಎಲ್ಲ ಫ್ಯಾಕ್ಟರಿಗಳು ತ್ಯಾಜ್ಯ ಸಂಸ್ಕರಣಾ ಘಟಕಗಳಿಲ್ಲದೆಯೇ ಕೆಲಸ ಮಾಡುತ್ತಾ ಪರಿಸರಕ್ಕೆ ಸಾಕಷ್ಟು ಹಾನಿ ಮಾಡುತ್ತಿವೆ. ಕಳೆದ ದಿನಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಹರಿಯುವ ಕಲುಷಿತ ನೀರಿನ ಒತ್ತಡ ಹೆಚ್ಚಿ ಕಾಲುವೆಯಲ್ಲಿ ವಿಷಪೂರಿತ ಬೆಳ್ನೊರೆ ಬೆಟ್ಟದಷ್ಟೆತ್ತರ ಏರಿದ್ದವು. ಬೊಮ್ಮನಹಳ್ಳಿ, ಮಡಿವಾಳ, ಕೋರಮಂಗಲದಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಗಳೇ ಮುಖ್ಯವಾಗಿ ತ್ಯಾಜ್ಯಗಳನ್ನು ಕಾಲುವೆಗೆ ನೇರವಾಗಿ ಹರಿಯ ಬಿಡುವುದೆಂದು ಗುರುತಿಸಲಾಗಿದ್ದು ಪರಿಸರ ಮಂಡಳಿ ಅವುಗಳಿಗೂ ನೋಟಿಸು ಜಾರಿ ಮಾಡಿದೆ.
ಕಳೆದ ವಾರ ಬೆಂಗಳೂರಿನಲ್ಲಿ ಒಂದು ಹಿಮವತ್ಪರ್ವತವೇ ಸೃಷ್ಟಿಯಾದಂತೆ ಕಂಡು ಬಂತು. ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಐಸ್‌ಷೋ ನೋಡಲು ಹೋಗಿ ತಮ್ಮ ಬಯಕೆ ಈಡೇರದೆ ನಿರಾಶರಾಗಿದ್ದ ನೂರಾರು ಜನ ಬೆಳ್ಳಂದೂರು ಕೆರೆಯಲ್ಲಿ ರಾತ್ರೋರಾತ್ರಿ ಉದ್ಭವಿಸಿದ್ದ ಈ ಮಂಜಿನ ಬೆಟ್ಟದಂತಹಾ ನೊರೆ ನೋಡಲು ಮುಗಿಬಿದ್ದಿದ್ದರು.
(ಇನ್ಫೋವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications