ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ: ಪಾರ್ವತಮ್ಮ
ಬೆಂಗಳೂರು : ಕೆಲದಿನಗಳಿಂದ ತಣ್ಣಗಾಗಿದ್ದ ರಾಜ್‌ಕುಮಾರ್ ಬಿಡುಗಡೆ ಪ್ರಕ್ರಿಯೆ ಮತ್ತೆ ಚುರುಕಾಗಿದೆ. 6ನೇ ಬಾರಿಯ ಸಂಧಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ನಾಡಿನಿಂದ ಕಾಡಿಗೆ ರಾಜ್‌ಕುಟುಂಬದವರ ಸಂದೇಶದ ರವಾನೆ ಆಗಿದೆ. ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಪಡೆಯ ಮಾಜಿ ಮುಖ್ಯಸ್ಥ ಶಂಕರ್ ಬಿದರಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇವಿಷ್ಟೂ ನಾಲ್ಕು ಅಮಾವಾಸ್ಯೆ ಕಳೆದ ನಂತರದ ವಿದ್ಯಮಾನ.
ರಾಜ್‌ಕುಮಾರ್ ಅವರೇ ಬಿಡುಗಡೆ ಆಗುತ್ತಾರೆ ಎಂಬ ಭಾರಿ ವದಂತಿಯ ನಡುವೆ ಗೋವಿಂದ್‌ರಾಜ್‌ಬಿಡುಗಡೆ ಆದ ನಂತರ ಕಾಡು - ನಾಡಿನ ನಡುವಿನ ಸಂಪರ್ಕವೇ ಕಳಚಿ ಹೋಗಿತ್ತು. ಆದರೆ, ಬಲಿಪಾಡ್ಯಮಿಯ ಶನಿವಾರ ಮತ್ತೆ ಬೆಂಗಳೂರು ಆಕಾಶವಾಣಿ ಪಾರ್ವತಮ್ಮ ರಾಜ್‌ಕುಮಾರ್, ರಾಜ್ ಸ್ನೇಹಿತರಾದ ರಾಮಸ್ವಾಮಿ ಹಾಗೂ ಇತರರ ಸಂದೇಶವನ್ನು ಕಾಡಿಗೆ ಬಿತ್ತರಿಸಿತು.
ನಾವೆಲ್ಲಾ ಚೆನ್ನಾಗಿದ್ದೇವೆ. ನೀವೂ ಚೆನ್ನಾಗಿಯೇ ಇದ್ದೀರಿ ಎಂದು ಭಾವಿಸುತ್ತೇನೆ. ನಾವು ನಂಬಿರುವ ದೇವರು ನಮ್ಮ ಕೈಬಿಡುವುದಿಲ್ಲ ಎಂದು ಹೇಳಿದ ಪಾರ್ವತಮ್ಮ ರಾಜ್‌ಕುಮಾರ್, ಬಂದಿದ್ದೆಲ್ಲಾ ಬರಲಿ ಗೋವಿಂದನ ದಯೆ ನಮಗಿರಲಿ ಎಂದರು. ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಚೆನ್ನಾಗಿದ್ದಾರೆ ಚಿಂತಿಸಬೇಡಿ ಎಂದು ರಾಜ್‌ಕುಮಾರ್ ಅವರಿಗೆ ಆಕಾಶವಾಣಿಯ ಮೂಲಕ ಸಂದೇಶ ಕಳುಹಿಸಿದರು.
ವೀರಪ್ಪನ್‌ಗೆ ಮತ್ತೊಮ್ಮೆ ತಮಿಳಿನಲ್ಲಿ ಮನವಿ ಮಾಡಿಕೊಂಡ ಅವರು, ಈಗಾಗಲೇ 3 ತಿಂಗಳಾಗಿದೆ. ಇಲ್ಲಿ ಮೊಮ್ಮಕ್ಕಳಿಗೆ ಉತ್ತರ ಹೇಳುವ ಸ್ಥಿತಿಯಲ್ಲಿ ನಾನಿಲ್ಲ, ಬೇಗ ರಾಜ್ ಅವರನ್ನು ಬಿಟ್ಟು ಬಿಡಿ ಎಂದು ಕೋರಿದರು. ರಾಮಸ್ವಾಮಿ ಅವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹಾಗೂ ಔಷಧ ತೆಗೆದುಕೊಳ್ಳುವಂತೆ ರಾಜ್ ಅವರನ್ನು ಪ್ರಾರ್ಥಿಸಿದರು. ನೀವು ಮನೆಗೆ ಬಂದ ನಂತರವೇ ನಮಗೆ ನಾಡ ಹಬ್ಬ, ಬೆಳಕಿನ ಹಬ್ಬ ಎಂದರು.
ಸತ್ಯ ಪ್ರಕಟವಾಗುವುದು ಯಾವಾಗಲೂ ತಡವಾಗೇ ಹೀಗಾಗಿ ನೀವೇನೂ ಚಿಂತಿಸಬೇಡಿ, ದೈವಾನುಗ್ರಹ ತಮಗಿದೆ ಎಂದು ಹೇಳಿದರು.
ಖರ್ಗೆ - ಬಿದರಿ ಚರ್ಚೆ : ಈ ಮಧ್ಯೆ ಐಜಿಪಿ ಶಂಕರ್‌ಬಿದರಿ ಅವರೊಂದಿಗೆ ಮಾತುಕತೆ ನಡೆಸಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ ಬಿಡುಗಡೆಗೆ ಪರ್ಯಾಯ ತಂತ್ರಗಳ ಬಗ್ಗೆ ಚರ್ಚಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ. ಇನ್ನು ಒಂದೆರಡು ದಿನದಲ್ಲೇ (ವೀರಪ್ಪನ್ ಆಣತಿ ದೊರೆತ ನಂತರ) ನೆಡುಮಾರನ್ ಹಾಗೂ ನಕ್ಕೀರನ್ ಗೋಪಾಲ್ ಅವರು, ಕಾಡಿಗೆ ತೆರಳುತ್ತಾರೆ ಎಂದೂ ಮೂಲಗಳು ತಿಳಿಸಿವೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications