ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಐಟಿ ರಾಜಧಾನಿಗೆ ಅಂತಾರಾಷ್ಟ್ರೀಯ ವಿಮಾನಗಳ ಲಗ್ಗೆ

By Staff
|
Google Oneindia Kannada News

ಬೆಂಗಳೂರು : ಅಕ್ಟೋಬರ್‌ 29ರ ಭಾನುವಾರ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ದಿನ. ಅವತ್ತು ಮೊಟ್ಟಮೊದಲ ಅಂತಾರಾಷ್ಟ್ರೀಯ ವಿಮಾನ ಬೆಂಗಳೂರಿನ ನಿಲ್ಧಾಣದ ಅಂಗಳದಲ್ಲಿ ಕಾಲೂರಲಿದೆ. ಇದರೊಂದಿಗೆ ಬೆಂಗಳೂರು ವಿಶ್ವದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ.

ರಾಯಲ್‌ ನೇಪಾಳ್‌ ಏರ್‌ಲೈನ್ಸ್‌ನ ಬೋಯಿಂಗ್‌ 757 ವಿಮಾನ ಭಾನುವಾರ ಸಾಯಂಕಾಲ 5ಕ್ಕೆ ಬೆಂಗಳೂರಿನಲ್ಲಿ ಇಳಿಯಲಿದೆ. ನವೆಂಬರ್‌ 15ರಿಂದ ಗಲ್ಫ್‌ ವಿಮಾನಗಳೂ ಬೆಂಗಳೂರಿನಿಂದ ಹಾರಾಟ ಪ್ರಾರಂಭಿಸಲಿದ್ದು, ನಂತರ ಮಲೇಷಿಯಾದ ವಿಮಾನಗಳೂ ಹಾರಾಡಲಿವೆ.

ಬೆಂಗಳೂರು, 23ನೇ ಮೇ 2000ದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನ-ಮಾನ ಪಡೆದಿದೆ. ನಿಲ್ದಾಣದ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಿಂದ ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ಗಳ ಏಕಸ್ವಾಮಕ್ಕೆ ಅಂತಿಮ ತೆರೆ ಬೀಳಲಿದೆ.

ಪ್ರಾರಂಭದಲ್ಲಿ ವಾರಕ್ಕೆ ಎರಡು ವಿಮಾನಗಳು ಕಠ್ಮಂಡು ಮತ್ತು ಬೆಂಗಳೂರುಗಳ ನಡುವೆ ಸಂಚರಿಸಲಿವೆ. ಆರ್‌. ಎ. 225 ವಿಮಾನ , ಕಠ್ಮಂಡುವಿನಿಂದ 2. 30ಕ್ಕೆ ಹೊರಟು ಸಂಜೆ 5ಕ್ಕೆ ಬೆಂಗಳೂರು ತಲುಪಲಿದೆ. ಇನ್ನೊಂದು ವಿಮಾನ ಆರ್‌. ಎ. 226 ಬೆಂಗಳೂರಿನಿಂದ 6 ಗಂಟೆಗೆ ಹೊರಡಲಿದೆ ಎಂದು ರಾಯಲ್‌ ನೇಪಾಳ್‌ ಏರ್‌ಲೈನ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಪಿ. ಕೆ. ನ್ಯೂಪಾನೆ ತಿಳಿಸಿದ್ದಾರೆ.

ಇನ್ನಷ್ಟು ವಿಮಾನಗಳು : ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ನೇಪಾಳಕ್ಕೆ ಪ್ರವಾಸ ಹೋಗಲು ಇಚ್ಛಿಸುವವರಿಗೆ ಹೋಗಿ-ಬರುವ ಶುಲ್ಕವನ್ನು 16 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದರೊಂದಿಗೆ ಗಲ್ಫ್‌ ಏರ್‌ಲೈನ್ಸ್‌ ಕೂಡಾ ವಾರಕ್ಕೆ ನಾಲ್ಕು ವಿಮಾನಗಳನ್ನು ಪ್ರಾಂಭಿಸಲಿದೆ. ಈ ವಿಮಾನಗಳು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ಬಂದಿಳಿಯಲಿದ್ದು 7.30ಕ್ಕೆ ಬೆಂಗಳೂರನ್ನು ಬಿಡಲಿವೆ. ಇನ್ನು ಕೆಲವೇ ದಿನಗಳಲ್ಲಿ ಮಲೇಷಿಯನ್‌ ವಿಮಾನಗಳೂ ಕೂಡಾ ಹಾರಾಟ ಪ್ರಾರಂಭಿಸಲಿದ್ದು, ಸಂಸ್ಥೆ ಸೂಕ್ತ ಅನುಮತಿಗಾಗಿ ಕಾಯುತ್ತಿದೆ. ಈ ವಿಮಾನಗಳು ಬೆಂಗಳೂರಿನಿಂದ ಕೌಲಲಾಂಪುರಕ್ಕೆ ವಾಕ್ಕೆರಡು ಬಾರಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಅಮೆರಿಕನ್‌ ಮತ್ತು ಯೂರೋಪ್‌ನ ವಿಮಾನಗಳು ಹಾರಾಡುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಲಾಗಿದೆ.

ಸಿದ್ಧತೆ : ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ವಾಗತಿಸಲು ಸಜ್ಜಾಗಿರುವ ಬೆಂಗಳೂರು ವಿಮಾನ ನಿಲ್ಧಾಣದ ಅಧಿಕಾರಿಗಳು ತಾಂತ್ರಿಕ ಸಿದ್ದತೆ ಸೇರಿದಂತೆ ಇತರ ವ್ಯಸ್ಥೆಗಳನ್ನು ತ್ವರಿತಗೊಳಿಸಿದ್ದಾರೆ. ಕಸ್ಟಮ್ಸ್‌ ಅಧಿಕಾರಿಗಳು ತಮ್ಮ ಮೇಲಿನ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧಗೊಂಡಿದ್ದಾರೆ. ಕಠ್ಮಂಡು ವಿಮಾನ ಅಪಹರಣದ ಹಿನ್ನಲೆಯಲ್ಲಿ ನೇಪಾಳದಿಂದ ಬರುವ ಯಾರಿಗೂ ವೀಸಾ ಅಥವಾ ಪಾಸ್‌ಪೋರ್ಟ್‌ ಕಡ್ಡಾಯ ಮಾಡಿಲ್ಲ ಎಂದು ಇಂಟಲಿಜೆನ್ಸ್‌ನ ಡಿಸಿಪಿ ರಾಮಸುಬ್ಬಾ ತಿಳಿಸಿದ್ದಾರೆ. ಇತರರಿಗೆ ಇದು ಅನ್ವಯಿಸುವುದಿಲ್ಲ.

(ಇನ್ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X