ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟೆಕ್‌ ಸಿಟಿಗೊಂದು ಉಚಿತ ಹೈಟೆಕ್‌ ಆಸ್ಪತ್ರೆ

By Staff
|
Google Oneindia Kannada News

ಬೆಂಗಳೂರು : ಉಚಿತ ಚಿಕಿತ್ಸೆ ನೀಡುವ ಅತ್ಯಾಧುನಿಕ ಆಸ್ಪತ್ರೆ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಬಗ್ಗೆ ಕೇಳಿದ್ದೀರಾ ? ಅಂಥದ್ದೊಂದು ಆಸ್ಪತ್ರೆ ಸಿಲಿಕಾನ್‌ ವ್ಯಾಲಿಯ ವೈಟ್‌ಫೀಲ್ಡ್‌ಗೆ ಬರುತ್ತಿದೆ.

ವಿಶ್ಯವಿಖ್ಯಾತ ಹಿಂದೂ ಧಾರ್ಮಿಕ ನಾಯಕ ಸತ್ಯಸಾಯಿಬಾಬಾ ಅವರ ಶ್ರೀ ಸತ್ಯ ಸಾಯಿ ಸೆಂಟ್ರಲ್‌ ಟ್ರಸ್ಟ್‌ ಈ ಆಸ್ಪತ್ರೆಯನ್ನು 200ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಪುಟ್ಟಪರ್ತಿಯಲ್ಲಿ ಇಂಥದೊಂದು ಆಸ್ಪತ್ರೆಯನ್ನು ಟ್ರಸ್ಟ್‌ , 1991ರಿಂದ ನಡೆಸುತ್ತಿದ್ದು, ಕಿಡ್ನಿ ಮತ್ತು ಕಣ್ಣುಗಳೂ ಸೇರಿದಂತೆ ಹೃದಯ ಮತ್ತು ನಾಳಗಳ ಶಸ್ತ್ರಚಿಕಿತ್ಸೆಗೆ ಆಧುನಿಕ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇಂಥ ಉಚಿತ ಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಯಲ್ಲೂ ದೊರೆಯಲಿದೆ.

52.26 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮಕ್ಕಳು ಮತ್ತು ಯುವಕರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಎಲ್ಲ ವಿಧದ ಚಿಕೆತ್ಸೆಯೂ ಉಚಿತವಾಗಿದ್ದು, ನೌಕರವರ್ಗವೂ ಕೂಡಾ ಸ್ವಯಂ ಸೇವಕರಿಂದ ಕೂಡಿರುತ್ತದೆ. 330 ಹಾಸಿಗೆಗಳುಳ್ಳ ಈ ಕಟ್ಟಡದಲ್ಲಿ 12 ಶಸ್ತ್ರಚಿಕಿತ್ಸಾ ಕೊಠಡಿಗಳಿರುತ್ತವೆ. ಪ್ರತಿದಿನ ಸುಮಾರು 1000 ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶವಿದೆ. ಆಸ್ಪತ್ರೆ ನಡೆಸುವ ಖರ್ಚಿಗೆ ನಿಧಿ ಸ್ಥಾಪಿಸಲಾಗಿದೆ ಎಂದು ಟ್ರಸ್ಟ್‌ನ ವಕ್ತಾರರು ತಿಳಿಸಿದ್ದಾರೆ.

ಪರಿಸರ ಮಿತ್ರ : ಪರಿಸರ ರಕ್ಷಣೆಯನ್ನು ಆಧ್ಯತೆಯಾಗಿಟ್ಟುಕೊಂಡು ಆಸ್ಪತ್ರೆ ಪ್ರಾರಂಭವಾಗಲಿದೆ. ಆಸ್ಪತ್ರೆಯಲ್ಲಿ ಎಲ್ಲ ವಿಧದ ರೋಗಿಗಳ ಬಗ್ಗೆ ಮಾಹಿತಿ ವ್ಯವಸ್ಥೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ಹೃದಯ ಮತ್ತು ನರಗಳಿಗೆ ಸಂಬಂಧಿಸಿದ ಎರಡು ವಿಶೇಷ ಘಟಕಗಳು ಇರಲಿವೆ. ಆಸ್ಪತ್ರೆಗೆ ಹೊಂದಿಕೊಂಡಂತೆ 3 ವರ್ಷ ತರಬೇತಿ ಇರುವ ನರ್ಸಿಂಗ್‌ ಕೋರ್ಸ್‌ ಪ್ರಾರಂಭಿಸಲು ಯೋಜಿಸಲಾಗಿದೆ.

ದಕ್ಷಿಣ ಭಾರತದ ಕೇಂದ್ರದಂತಿರುವ ಬೆಂಗಳೂರಿನಲ್ಲಿ ವಿಮಾನ, ರೈಲು ಮತ್ತು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರುವುದರಿಂದ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಕಟ್ಟಡ 354 ಸಾವಿರ ಚದುರ ಅಡಿಗಳ ಜಾಗದಲ್ಲಿ ಒಟ್ಟು ನಾಲ್ಕು ಅಂತಸ್ತುಗಳನ್ನು ಒಳಗೊಂಡಿರುತ್ತದೆ. ಅಗತ್ಯ ಸಿಬ್ಬಂಧಿಗಳಿಗಾಗಿ ಪಕ್ಕದಲ್ಲಿಯೇ ವಸತಿ ಸಂಕೀರ್ಣ ನಿರ್ಮಾಣವಾಗಲಿದೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X