ನಿಮ್ಮ ಅಚ್ಚುಮೆಚ್ಚಿನ ನಾಯಿ ಇತರರಿಗೆ ಕಚ್ಚೀತು ಜೋಕೆ !
ಬೆಂಗಳೂರು : ನೀವು ಬೆಂಗಳೂರಿಗರೇ? ಪೆಟ್ ಅನಿಮಲ್ ಪ್ರಿಯರೇ ? ನಿಮ್ಮ ಮನೆಯಲ್ಲಿ ಸುಂದರವಾದ ನಾಯಿಯಾಂದಿದೆಯೇ? ಈ ಪ್ರಶ್ನೆ ನಾವು ಕೇಳಲು ಒಂದು ಬಲವಾದ ಕಾರಣ ಇದೆ. ನಿಮ್ಮ ಮನೆಯಲ್ಲಿ ನಾಯಿಯಿದ್ದರೆ, ನವೆಂಬರ್ 1ರಿಂದ ನಿಮ್ಮ ಬಡಾವಣೆ ವ್ಯಾಪ್ತಿಯಲ್ಲಿರುವ ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಗೆ ಹೋಗಿ ನಾಯಿ ಸಾಕಲು ನೀವು ಲೈಸೆನ್ಸ್ ಪಡೆಯಲೇ ಬೇಕು.
ಮೊನ್ನೆಯಷ್ಟೇ ಬೆಂಗಳೂರಿನ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕ ವಿಧಿಸಿದ, ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯೋತ್ಸವಕ್ಕೆ ಮತ್ತೊಂದು ಕೊಡುಗೆ ನೀಡಿದೆ. ಅದರಂತೆ ನೀವು ಕಡ್ಡಾಯವಾಗಿ ನಾಯಿ ಸಾಕುವ ಪರವಾನಗಿ ಪಡೆಯಬೇಕು. ನಿಮ್ಮ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಸಮಯಕ್ಕೆ ಸರಿಯಾಗಿ ಹಾಕಿಸಬೇಕು, ಗರ್ಭನಿರೋಧಕ ಶಸ್ತ್ರ ಚಿಕಿತ್ಸೆ ಮಾಡಿಸಲೇ ಬೇಕು.
ಲೈಸೆನ್ಸ್ ಪಡೆಯಲು ಪಶುವೈದ್ಯರಿಂದ ನಾಯಿಗೆ ಚುಚ್ಚುಮದ್ದು ಹಾಕಿಸಿದ ಬಗ್ಗೆ ದೃಢೀಕರಣಪತ್ರ ಕೊಂಡೊಯ್ಯಬೇಕು. ಅಷ್ಟೇ ಅಲ್ಲ 10 ರುಪಾಯಿ ತೆತ್ತು ಪರವಾನಗಿ ಅರ್ಜಿ ನಮೂನೆ ಕೊಳ್ಳಬೇಕು. ವಾರ್ಷಿಕ ಪರವಾನಗಿ ಶುಲ್ಕವಾಗಿ 50 ರುಪಾಯಿ ಪಾವತಿಸಬೇಕು. ಆನಂತರ ಅರ್ಜಿ ತುಂಬಿ, ಪರವಾನಗಿ ಪಡೆಯಬೇಕು.
ಸಾಕಪ್ಪ ಸಾಕು ಈ ನಾಯಿ ಪಾಡು ಎನ್ನುತ್ತೀರಾ? ನೀವು ಏನೇ ಹೇಳಿ ಪ್ರತಿವರ್ಷ ಪರವಾನಗಿ ನವೀಕರಿಸಬೇಕು. ಗೊತ್ತಾಯಿತಲ್ಲ. ಇಲ್ಲ ಇನ್ನೂ ಹೆಚ್ಚಿನ ವಿವರ ಬೇಕು ಎನ್ನಿಸಿದರೆ, ದೂರವಾಣ ಸಂಖ್ಯೆ 2217159, 5583601, 3444286, 2223268 ಈ ದೂರವಾಣಿಯನ್ನು ಸಂಪರ್ಕಿಸಿ.
ಬೀದಿ ನಾಯಿಗಳಿಗೆ ಪರವಾನಗಿ ನೀಡುವವರಾರು ? : ಬೆಂಗಳೂರಿನಲ್ಲಿ ಸುಮಾರು 2 ಲಕ್ಷ ಬೀದಿ ನಾಯಿಗಳಿವೆ ಎಂದು ಹಲವಾರು ಪತ್ರಿಕೆಗಳಲ್ಲಿ ಬಂದಿದೆ. ಕ್ಷಮಿಸಿ, ನಾವಂತೂ ಬೀದಿ ನಾಯಿಗಳನ್ನು ಎಣಿಸಿಲ್ಲ. ಎಷ್ಟು ಬೀದಿ ನಾಯಿಗಳಿವೆ ಎಂದು ನಗರಪಾಲಿಕೆಯೂ ಲೆಕ್ಕ ಇಟ್ಟಿಲ್ಲ. ಆದರೆ, ನಗರದ ಎಲ್ಲ ಬಡಾವಣೆಗಳಲ್ಲೂ ನೂರಾರು ಬೀದಿ ನಾಯಿಗಳು ಇರುವುದಂತೂ ಸತ್ಯ. ರಾತ್ರಿ ಮಲಗಲೂ ಬಿಡದೆ ನಾಯಿಗಳು ಅರಚುವಾಗ, ಎಲ್ಲರೂ ಮೇನಕಾ ಗಾಂಧಿ ಅವರನ್ನು ಶಪಿಸದೇ ಇರರು.
ಮನೆ ನಾಯಿಗಳಿಗೇನೋ ಈಗ ಪರವಾನಗಿ ಪಡೆಯಬೇಕು. ರೇಬಿಸ್ ಚುಚ್ಚು ಮದ್ದೂ ಹಾಕಿಸಬೇಕು. ಬೀದಿ ನಾಯಿಗಳಿಗೆ ಯಾರು ಪರವಾನಗಿ ನೀಡುತ್ತಾರೆ ? ನಗರ ಪಾಲಿಕೆ ಆಯುಕ್ತರಾದ ಜೈರಾಜ್ ಅವರೇ ಹೇಳಬೇಕು. ಅಂದಹಾಗೆ, ಬೀದಿನಾಯಿಗಳು ಅಟ್ಟಿಸಿಕೊಂಡು ಬಂದಾಗ ತಮ್ಮ ದ್ವಿಚಕ್ರ ವಾಹನಗಳಿಂದ ಬಿದ್ದವರೆಷ್ಟು ಮಂದಿ ಎಂದು ಲೆಕ್ಕ ಮಾಡುವ ಅಗತ್ಯವೂ ಈಗಿದೆ.
ಕೊನೆ ಸಿಡಿ : ಬೀದಿನಾಯಿಗಳ ನಿರ್ವಹಣೆಯನ್ನು ಪಾಲಿಕೆ ಎಸ್‌ಪಿಸಿಎ ಎನ್ನುವ ಸಂಸ್ಥೆಗೆ ಬಿಟ್ಟುಕೊಟ್ಟಿದೆಯಂತೆ. ಈ ಸಂಸ್ಥೆಯವರು, ಬೀದಿನಾಯಿಗಳನ್ನು ಹಿಡಿದು, ಅವುಗಳಿಗೆ ಅನಿಮಲ್ ಬರ್ತ್ ಕಂಟ್ರೋಲ್ (ಎ.ಬಿ.ಸಿ) ಚುಚ್ಚುಮದ್ದು ನೀಡಿ, ಅದೇ ಬಡಾವಣೆಯಲ್ಲೇ ಬಿಡುತ್ತಾರಂತೆ. ಅಂದರೆ, ಇನ್ನು ಮುಂದೆ ನಾಯಿಗಳ ಸಂಖ್ಯೆ ಕಡಿಮೆ ಆದರೂ ಆದೀತು. ಆದರೆ, ಈಗ ಹಾಲಿ ಇರುವ ನಾಯಿಗಳು ಕಚ್ಚಿದರೆ ಮಾತ್ರ ಪಾಲಿಕೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications