Get Updates
Get notified of breaking news, exclusive insights, and must-see stories!

ಅಪಹರಣ ಪ್ರಕರಣ : ನಿಲುವಳಿ ಸೂಚನೆಗೆ ಬಿಜೆಪಿ ಯತ್ನ

ಬೆಂಗಳೂರು : ರಾಜ್‌ ಅಪಹರಣ ಪ್ರಕರಣದ ವಿಷಯ ಪ್ರಸ್ತಾಪಿಸಲು ಪ್ರಶ್ನೋತ್ತರ ವೇಳೆಯನ್ನು ಮುಂದೂಡಬೇಕೆಂದು ಬಿಜೆಪಿ ಒತ್ತಾಯಿಸಿದ ಘಟನೆ ಮಂಗಳವಾರ ಸದನದಲ್ಲಿ ನಡೆಯಿತು. ಈ ಸಂಬಂಧ ನಿಲುವಳಿ ಸೂಚನೆಯನ್ನೂ ಮಂಡಿಸಲು ಪಕ್ಷ ಯತ್ನಿಸಿತು. ಬಿಜೆಪಿಯ ಈ ವಿಚಾರಕ್ಕೆ ಇತರ ಪ್ರತಿಪಕ್ಷಗಳು ಸಮ್ಮತಿ ನೀಡದೆ ಕೆಲಕಾಲ ವಾಗ್ವಾದ ನಡೆಯಿತು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಜಗದೀಶ್‌ ಶಟ್ಟರ್‌, ಹೇಳಿಕೆ ನೀಡಿ ರಾಜ್‌ ಅಪಹರಣ ನಂತರದ ಪರಿಸ್ಥಿತಿ ಕುರಿತು ಚರ್ಚಿಸಲು ಸಭಾಧ್ಯಕ್ಷರ ಅನುಮತಿ ಕೇಳಿದರು. ಇದಕ್ಕೆ ತಮ್ಮ ಮಿತ್ರಪಕ್ಷಗಳು ಸಮ್ಮತಿ ನೀಡದೆ ಗೊಂದಲ ಉಂಟಾದಾಗ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರಕರಣದ ಸಂಬಂಧ ವೀರಪ್ಪನ್‌ ಬೇಡಿಕೆಯ ಟಾಡಾ ಬಂಧಿಗಳ ಬಿಡುಗಡೆ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸದನದಲ್ಲಿ ಈ ಹಂತದಲ್ಲಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ ಎಂದರು. ಖರ್ಗೆ ಜೊತೆಗೆ ದನಿಗೂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಡಿ.ಬಿ ಚಂದ್ರೇಗೌಡ, ಸದನದಲ್ಲಿ ನಡೆಯುವ ಚರ್ಚೆಯಿಂದ ಸುಪ್ರೀಂಕೋರ್ಟ್‌ ತೀರ್ಪಿಗೆ ಸಂಬಂಧಿಸಿರುವುದರಿಂದ ಚರ್ಚೆ ಬೇಡ . ಇಷ್ಟಲ್ಲದೆ ಅಪಹರಣ ಪ್ರಕರಣದ ಸಂಬಂಧ ಪ್ರತಿ ನಿರ್ಧಾರ ಕೈಗೊಂಡಾಗಲೂ ಸರಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ರಾಜ್ಯ ಸರಕಾರಗಳ ನಿರ್ಧಾರಗಳ ಬಗ್ಗೆ ಪ್ರಧಾನಿ ವಾಜಪೇಯಿ ಅವರೇ ಸಮ್ಮತಿ ಸೂಚಿಸಿದ್ದಾರೆ ಎಂದು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಸುಪ್ರೀಂಕೋರ್ಟ್‌ ತೀರ್ಪು ಬಂದ ನಂತರ ಈ ಸಂಬಂಧ ಚರ್ಚಿಸಲು ಸರಕಾರದ ಅಭ್ಯಂತರವೇನೂ ಇಲ್ಲ ಎಂದು ಇಬ್ಬರೂ ಸಚಿವರು ಸ್ಪಷ್ಟಪಡಿಸಿದರು.

ಜನತಾದಳ (ಯು) ನಾಯಕ ನಾಯಕ ಪಿ.ಜಿ.ಆರ್‌ ಸಿಂಧ್ಯಾ ಕೂಡಾ ಬೇರೆ ವಿಷಯಗಳನ್ನು ಚರ್ಚಿಸಲು ತಾವು ಬಯಸುವುದಾಗಿ ಹೇಳಿದರು. ಈ ಮುಂಚೆ ಹೇಳಿಕೆ ನೀಡಿದ್ದ ವಿರೋಧ ಪಕ್ಷದ ನಾಯಕ ಜಗದೀಶ್‌ ಶಟ್ಟರ್‌, ಸರ್ವಪಕ್ಷ ಸಭೆಯಲ್ಲಿ ತಮ್ಮ ಪಕ್ಷ ವ್ಯಕ್ತಪಡಿಸಿದ್ದ ಅಭಿಪ್ರಾಯಗಳಿಗೆ ತಾವು ಈಗಲೂ ಬದ್ದವಾಗಿದ್ದೇವೆ ಆದರೆ ಅಪಹರಣದ ನಂತರ ರಾಜ್ಯದಲ್ಲಿ ಆಡಳಿತ ಸ್ಥಗಿತಗೊಂಡಿದೆ ಎಂದು ಆಪಾದಿಸಿದ್ದರು.

ನಂತರ ಉಪಹಾರಕ್ಕೆ ಸಭಾಧ್ಯಕ್ಷ ವೆಂಕಟಪ್ಪ ಅವರು ಸದನ ಮುಂದೂಡಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+