Get Updates
Get notified of breaking news, exclusive insights, and must-see stories!

ಗಡಿನಾಡ ಅಭಿವೃದ್ಧಿಗೆ ಗಮನ ಹರಿಸಲುವಾಟಾಳ್‌ ನಾಗರಾಜ್‌ ಕರೆ

ಬೆಳಗಾವಿ : ರಾಜ್ಯ ಸರಕಾರಗಳು ಗಡಿ ಭಾಗಗಳ ಅಭಿವೃದ್ಧಿಗೆ ಗಮನ ಹರಿಸದೆ, ಈ ಭಾಗದ ಜನತೆ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಗಡಿನಾಡ ಅಧ್ಯಯನ ಸಮಿತಿ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಪತ್ರಕರ್ತರ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಗಡಿಭಾಗದ ಪ್ರದೇಶಗಳ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಯಡಿ ಪ್ರತಿವರ್ಷ 500 ಕೋಟಿ ರುಪಾಯಿ ಮೀಸಲಿಟ್ಟು, ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಬೆಳಗಾವಿಯ ಮೇಯರ್‌ ಸಮ್ಮೇಳನದಲ್ಲಿ ಮರಾಠಿಯಲ್ಲಿ ಮಾತಾನಾಡಿದ್ದನ್ನು ಖಂಡಿಸಿದ ಅವರು, ತಾವು ಗಡಿನಾಡ ಅಧ್ಯಯನ ಮಾಡಿ ಸಲ್ಲಿಸುವ ವರದಿ ಕಸದ ಬುಟ್ಟಿ ಸೇರದಿರಲಿ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರಿ ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌ ಅವರು, ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ವಿಚಾರ ಸಂಕಿರಣ : ಇದಕ್ಕೂ ಮೊದಲು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಸಂಸದ ವಿಜಯ ಸಂಕೇಶ್ವರ ಅವರು, ಕನ್ನಡಿಗರು ಪತ್ರಿಕೆಗಳನ್ನು ಕೊಂಡು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ಥಳೀಯ ಮತ್ತು ಮಧ್ಯಮ ಪತ್ರಿಕೆಗಳ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಮಾತನಾಡಿದ ಕನ್ನಡಮ್ಮ ಪತ್ರಿಕೆಯ ಉಮಾದೇವಿ ಟೋಪಣ್ಣನವರ ಸರಕಾರ ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕೆಂದರು. ಮುದ್ರಣ ಮಾಧ್ಯಮದ ಮುಂದಿನ ಸವಾಲುಗಳ ಬಗ್ಗೆ ಮಾತನಾಡಿದ ಪತ್ರಕರ್ತ ಡಾ. ಓಂಕಾರ ಕಾಕಡೆ ಟಿ.ವಿ. ಚಾನಲ್‌ಗಳು ಹಾಗೂ ಡಾಟ್‌ ಕಾಂಗಳಿಂದ ಪತ್ರಿಕೆಗಳಿಗೆ ತೀವ್ರ ಸ್ಪರ್ಧೆ ಮೂಡಿದೆ, ಆದರೂ ಪತ್ರಿಕೆಗಳಿಗೆ ಆತಂಕ ಇಲ್ಲ ಎಂದರು.

ಡಾಟ್‌ಕಾಂ ಪತ್ರಿಕೋದ್ಯಮದ ಬಗ್ಗೆ ವಿಚಾರ ಮಂಡಿಸಿದ ಕನ್ನಡ.ಇಂಡಿಯಾಇನ್‌ಫೋ. ಕಾಂನ ಟಿ.ಎಂ. ಸತೀಶ್‌ ಪತ್ರಿಕೆಗಳಿಗೆ ಇಲ್ಲದ ಎಷ್ಟೋ ಅವಕಾಶಗಳು ಡಾಟ್‌ಕಾಂಗಳಿಗೆ ಇದೆ. ಕ್ಷಣ ಕ್ಷಣದ ಸುದ್ದಿಯನ್ನು ಡಾಟ್‌ಕಾಂಗಳು ಓದುಗರಿಗೆ ಮುಟ್ಟಿಸುತ್ತಿವೆ. ಹೊರನಾಡ ಕನ್ನಡಿಗರಿಗೆ ತಮ್ಮೂರಿನ ಸುದ್ದಿಯನ್ನು ಕೆಲವೇ ಗಂಟೆಗಳಲ್ಲಿ ಮುಟ್ಟಿಸುವಲ್ಲಿ ಇಂಟರ್‌ನೆಟ್‌ ಪತ್ರಿಕೆಗಳು ಯಶಸ್ವಿಯಾಗಿವೆ. ಪತ್ರಿಕೆಗಳು ದೂರದ ದೆಹಲಿ ತಲುಪಲೇ 2 ದಿನ ಬೇಕು ಎಂದರು.

ಇನ್ನು ಕೆಲವೇ ವರ್ಷಗಳಲ್ಲಿ ಕಂಪ್ಯೂಟರ್‌ ಇಂಟರ್‌ನೆಟ್‌ ಸಂಪರ್ಕ ಹಳ್ಳಿ ಹಳ್ಳಿಗಳನ್ನೂ ತಲುಪುತ್ತದೆ. ರೇಡಿಯೋ, ಟಿ.ವಿ.ಗಳಂತೆಯೇ ಕಂಪ್ಯೂಟರ್‌ಗಳೂ ಜನರ ಅಗತ್ಯ ಸಾಮಗ್ರಿಗಳ ಸಾಲಿನಲ್ಲಿ ಸೇರುತ್ತದೆ ಎಂದರು.

ಮಾಹಿತಿ ಹಕ್ಕು 2000 ವಿಧೇಯಕ ಕುರಿತು ಕನ್ನಡ ಪ್ರಭ ದಿನಪತ್ರಿಕೆಯ ತಿಮ್ಮಪ್ಪಭಟ್‌ ಮಾತನಾಡಿ, ಶಾಸಕರಿಗೆ ಹಾಗೂ ಸಂಸದರಿಗೆ ದೊರಕುವ ಎಲ್ಲ ಮಾಹಿತಿಗಳೂ ಜನಸಾಮಾನ್ಯರಿಗೂ ದೊರೆತರೆ, ಆಡಳಿತ ಪಾರದರ್ಶಕವಾಗಿರುತ್ತದೆ ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಬಿ.ವಿ. ಮಲ್ಲಿಕಾರ್ಜುನಯ್ಯ, ಡಾಟ್‌ಕಾಂ ಪತ್ರಿಕೆಗಳು ಮುದ್ರಣ ಮಾಧ್ಯಮಕ್ಕೆ ಆರೋಗ್ಯಕರ ಪೈಪೋಟಿ ನೀಡಬೇಕು. ಕನ್ನಡದಲ್ಲಿ ಬರುತ್ತಿರುವ ಡಾಟ್‌ಕಾಂ ಪತ್ರಿಕೆಗಳ ಕಾರ್ಯವೈಖರಿ ಆಶಾದಾಯಕವಾಗಿದೆ ಎಂದರು. ಡಾಟ್‌ಕಾಂ ಪತ್ರಿಕೆಗಳೂ ಕೂಡ ಪತ್ರಿಕಾಧರ್ಮವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಗುಡಿಹಳ್ಳಿ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+