ಮತ್ತೆ ಸೈಕ್ಲೋನ್ ಇಫೆಕ್ಟಾ ?
ಬೆಂಗಳೂರು : ಇವತ್ತು ಬೆಂಗಳೂರಿನ ಕಪ್ಪು ರಸ್ತೆಗಳಿಗೆ, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳಿಗೆ ಬಿಸಿಲೇ ಬೀಳಲಿಲ್ಲ. ಹುಡುಗಿಯರ ಲೆದರ್ ಚಪ್ಪಲ್‌ಗಳೆಲ್ಲಾ ಕಳೆದ ನಾಲ್ಕು ದಿನಗಳ ಪ್ರತೀ ಸಂಜೆ ರೆಚ್ಚೆ ಕಟ್ಟಿ ಸುರಿದ ಮಳೆಗೆ ಕಿತ್ತು ಹೋಗಿವೆ. ದೀಪಾವಳಿ ಆಫರ್ ಬಂದಿದೆ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ , ಮತ್ತೆ ಸ್ವಲ್ಪವೇ ವಟಗುಟ್ಟುತ್ತಾ ಒದ್ದೆ, ಕರಿ ರಸ್ತೆಯ ಮೇಲೆ ಅವರು ಕೆಸರು ಗುಂಡಿಗಳ ತಪ್ಪಿಸಿಕೊಂಡು ಬಳುಕುತ್ತಾ ಹೆಜ್ಜೆ ಹಾಕುತ್ತಾರೆ.
ಬೆಂಗಳೂರು ಹೀಗೆ ಮಳೆಯ ಮೂಡಿನಲ್ಲಿ ಮುಳುಗಿ ಹೋದರೆ ಅದಕ್ಕೆ ಸೈಕ್ಲೋನ್ ಇಫೆಕ್ಟೇ ಕಾರಣವಾಗಿ ಬಿಡುತ್ತದೆ. ಆಂಧ್ರ ಪ್ರದೇಶದ ಸೈಕ್ಲೋನ್ ಬೆಂಗಳೂರಿನ ಐಸ್ ಕ್ರೀಂ ಅಂಗಡಿಗಳಿಗೆ ಏಟು ಕೊಡುವುದರ ಹಿಂದೆ ಏನು ಸೋಜಿಗವಿರಬಹುದು ? ದೇಶದ ಯಾವ ಮೂಲೆಯಲ್ಲಿ ಸೈಕ್ಲೋನ್ ಬಂದರೂ ಅದು ಬೆಂಗಳೂರಿನಲ್ಲಿ ಈ ಪಿರಿಪಿರಿ ಮಳೆಯ ಇಫೆಕ್ಟ್ ಕೊಡುತ್ತದೆ. ಶನಿವಾರ ಸರಕಾರಿ ಶಾಲೆಯ ಬೆಂಚಿನಲ್ಲಿ ಕುಳಿತ ಪುಟಾಣಿಗಳೆಲ್ಲಾ ಗುಡುಗಿನ ಸದ್ದಿಗೆ ಬೆಚ್ಚುತ್ತಾ ಮಿಂಚು ಬಂದಾಗಲೇ ಕೈಯಲ್ಲಿ ಕಿವಿ ಮುಚ್ಚಿ ಕುಳಿತಿದ್ದಾರೆ.
ದೀಪಾವಳಿಗೆಂದು ಅಂಗಡಿಗಳಿಗೆ ಹೋಲ್‌ಸೇಲ್ ಪಟಾಕಿ ತಂದಿಟ್ಟವರು ತಮ್ಮ ಪಟಾಕಿ ಪ್ಯಾಕೆಟ್ಟುಗಳನ್ನು ಬೆಚ್ಚಗಿನ ಜಾಗದಲ್ಲಿ ಜೋಪಾನವಾಗಿಡುತ್ತಿದ್ದಾರೆ. ಈ ಸೈಕ್ಲೋನ್ ರಾಗದ ಮಳೆ ಎಷ್ಟು ದಿನ ಇರುತ್ತದೆಯೋ ಯಾರಿಗೆ ಗೊತ್ತು ? ದೀಪಾವಳಿ ಆಫರ್ ನೀಡುತ್ತಿರುವ ಜವಳಿ ಅಂಗಡಿಯವರು ಹೊಸ ಮಾದರಿಯ ಸೀರೆ, ಚೂಡಿದಾರ್‌ಗಳನ್ನು ತಮ್ಮ ಮಳಿಗೆಯ ವೆರಾಂಡದಲ್ಲಿ ತೂಗು ಹಾಕುವಂತಿಲ್ಲ. ಸೈಕ್ಲೋನ್ ಮಳೆಯದೊಂದು ಕಿರಿಕಿರಿ.
ರಾಜ್ಯದಲ್ಲಿ ಮಳೆಯ ಮುಖಗಳು ಅಲ್ಲಲ್ಲಿ ಹಣಿಕಿ ಹಾಕುತ್ತಲೇ ಇವೆ. ಬಾಗೇವಾಡಿ, ಹನುಮಸಾಗರದಲ್ಲಿ 5ರಿಂದ 7 ಸೆಂಟಿ ಮೀಟರ್ ಮಳೆಯಾಗಿದೆ. ಗರಿಷ್ಠ ಉಷ್ಣಾಂಶದ ಪಟ್ಟವನ್ನು ಗುಲ್ಬರ್ಗ ಪಡೆದಿದೆ. ಅದೇ ಕಳೆದ ಬೇಸಿಗೆಯಲ್ಲಿ ಸಾಲಾಗಿ ಈ ಪಟ್ಟವನ್ನು ಹೊತ್ತ ಗುಲ್ಬರ್ಗಕ್ಕೇ ಅದೇ ಹಳೆಯ ನೆನಪು.-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications