Get Updates
Get notified of breaking news, exclusive insights, and must-see stories!

ಉತ್ತರ ಕನ್ನಡ ಜಿಲ್ಲೆಯ ನದಿಗಳ ನೀರಿನ ಬಳಕೆಗೆ ಚಿಂತಕರ ಯೋಜನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಐದು ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಕ್ರಿಯಾಯೋಜನೆಯಾಂದನ್ನು ಸರಕಾರಕ್ಕೆ ಸಲ್ಲಿಸಲು ಶಿರಸಿಯ ಚಿಂತಕರ ಚಾವಡಿ ನಿರ್ಧರಿಸಿದೆ.

ಕರ್ನಾಟಕ ಸರಕಾರ ರಾಜ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ಯೋಜನೆಗೆ ವಿಶ್ವಬ್ಯಾಂಕ್‌ ನೆರವು ಪಡೆಯಲುದ್ದೇಶಿಸಿರುವ ವರದಿಗಳ ಹಿನ್ನೆಲೆಯಲ್ಲಿ ಶಿರಸಿಯ ಚಿಂತಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಿ.ಎಸ್‌. ಉಪ್ಪೋಣಿಯವರೂ ಸೇರಿದಂತೆ ಜಿಲ್ಲೆಯ ಹಲವು ಚಿಂತಕರು ಜಿಲ್ಲೆಯಲ್ಲಿ ಹರಿಯುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮತ್ತು ವೆಂಕಟಾಪುರ ನದಿಗಳ ನೀರನ್ನು ಕರಾವಳಿ ಕರ್ನಾಟಕದ ತಾಲೂಕುಗಳ ನೀರಾವರಿಗೆ ಬಳಸಿಕೊಳ್ಳುವ ಯೋಜನೆ ಸಿದ್ಧಪಡಿಸಿ, ಮೂರ್ನಾಲ್ಕು ವರ್ಷಗಳ ಹಿಂದೆಯೇ ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿದ್ದರು. ಸರಕಾರದ ಇಲಾಖೆಗೂ ಈ ಯೋಜನೆಯ ಪ್ರತಿ ಕಳುಹಿಸಲಾಗಿತ್ತು.

ಆದರೆ, ಈ ಯೋಜನೆಯು ಆರ್ಥಿಕ ಕಾರಣಗಳ ಮೇಲೆ ಆ ಹಂತದಲ್ಲಿ ಕೈಬಿಡಲಾಗಿತ್ತು. ಆದರೆ, ಈಗ ವಿಶ್ವಬ್ಯಾಂಕ್‌ ನೆರವು ದೊರಕಲಿದೆ ಎಂಬ ಸುದ್ದಿ ಜಿಲ್ಲೆಯ ಚಿಂತಕರಲ್ಲಿ ಹೊಸ ಆಶಾಭಾವನೆಗಳನ್ನು ಹುಟ್ಟುಹಾಕಿದೆ. ಕೃಷ್ಣ ನೇತೃತ್ವದ ರಾಜ್ಯ ಸರಕಾರಕ್ಕೆ ವರ್ಷ ತುಂಬಿದ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ಹಾಗೂ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುವುದರಿಂದ ಈ ಯೋಜನೆಗೂ ಚಾಲನೆ ಬರಬಹುದೆಂಬುದು ಚಿಂತಕರ ಅಭಿಪ್ರಾಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+