ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಉಳ್ಳಾ-ರ್ತಿ-ಯ-ಲ್ಲಿ ನಡೆ-ದ- ಬೆಳ-ಕು ನೀಡು-ವ ಕಾರ್ಯ-ಕ್ರ-ಮ

By Staff
|
Google Oneindia Kannada News

ದೊಡ ್ಡಉಳ್ಳಾರ್ತಿ (ಚಳ್ಳಕೆರೆ ತಾಲೂಕು): ಹಳ್ಳಿಯಲ್ಲಿ ಕಣ್ಣಿಗೇನಾದರೂ ತೊಂದರೆಯಾದರೆ, -ನೆ-ತ್ತಿ-ಗೆ ಹರ-ಳ-ಣ್ಣೆ ಒತ್ತಿ ತಂಪು-ಮಾ-ಡಿ-ಕೊ-ಳ್ಳು-ವ-ವ-ರ ಅಥ-ವಾ ಗೂಡಂ-ಗ-ಡಿಯಿಂ-ದ -ಎಂ-ಟಾ-ಣೆ ಟ್ಯೂಬು ತಂದು ಕಣ್ಣಿ-ಗೆ --ಔ-ಷ-ಧ ಮಾಡಿ-ಕೊ-ಳ್ಳು-ವ-ವ-ರ ಸಂಖ್ಯೆ-ಯೇ ಹೆಚ್ಚು. ಅಲ್ಲಿ-ಗೂ ವಾಸಿ-ಯಾ-ಗ-ದಿ-ದ್ದ-ರೆ ಹತ್ತಿರದಲ್ಲಿರುವ ಡಾಕ್ಟರ ಶಾಪಿಗೆ ಹೋಗಿ ನಾಲ್ಕು ಮಾತ್ರೆ ಬರೆಸಿಕೊಂಡು ಬರುವುದು ವಾಡಿಕೆ. ಕಣ್ಣಿನ ತಜ್ಞರು ಪ್ರತ್ಯೇಕವಾಗಿರುತ್ತಾರೆ ಅಂತ ಅವರಿಗೆ ತಿಳಿಯುವುದು ಊರಿನ ಡಾಕ್ಟರು ಪೇಟೆಯ ದೊಡ್ಡಾಸ್ಪತ್ರೆಗೆ ಹೋಗಿ ಎಂದು ಹೇಳಿದಾಗ ಮಾತ್ರ. ಅಂತಹ ಜನ-ರಿ-ರು-ವ ಒಂದು ಹಳ್ಳಿ ದೊಡ್ಡ ಉಳ್ಳಾರ್ತಿ. ಮೊನ್ನೆ (ಅ.10) ಮಂಗಳವಾರ ಅಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರಕ್ಕೆ ಊರಿನ ಅಜ್ಜಂದಿರ ಸಮೇತ ಕಣ್ಣಿನ ತೊಂದರೆಯಿರುವವರೆಲ್ಲಾ ಬಂದು ಡಾಕ್ಟರಿಂದ ಕಣ್ಣು ಪರೀಕ್ಷೆ ಮಾಡಿಸಿಕೊಂಡರು. ಶಿಬಿರಕ್ಕೆ ತೆರಳುವಾಗ ದಾರಿ ಮಸುಕು ಮಸುಕಾಗಿ ಕಾಣಿಸುತ್ತಿದ್ದ ಅವರು ಈಗ ಊರ ದಾರಿಯನ್ನು ಯಾರ ಸಹಾಯವೂ ಇಲ್ಲದೆ ಕ್ರಮಿಸಬಲ್ಲರು.

ಚಳ್ಳಕೆರೆಯ ಕಲಾ ಕುಸುಮ(ರಿ) ಮತ್ತು ಚಿತ್ರದುರ್ಗ ಜಿಲ್ಲೆಯ ಅಂಧತ್ವ ನಿವಾರಣಾ ಸಮಿತಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕಗಳು ಒಟ್ಟಾಗಿ ದೊಡ್ಡ ಉಳ್ಳಾರ್ತಿಯಲ್ಲಿ ಕಣ್ಣು ಪರೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಣ್ಣಿನ ಪೊರೆಯಿಂದಾಗಿ ದೃಷ್ಠಿ ದೋಷವಿದ್ದ 73 ಮಂದಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಶಿಬಿರದಲ್ಲಿಯೇ ಮಾಡಲಾಯಿತು. ಶಿಬಿರಕ್ಕೆ ಒಟ್ಟು 308 ಮಂದಿ ಬಂದು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು ಹೋದರು. ನಾಲ್ಕು ಮಂದಿ ಡಾಕ್ಟರ್‌ಗಳು 73 ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದರು. ವೈದ್ಯಕೀಯ ಮಹಾವಿದ್ಯಾಲಯದ ಪ್ರೊಫೆಸರ್‌ ಡಾ. ನಾಗರಾಜ್‌, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಡಾ. ಜಿ. ನರಸಪ್ಪ , ಜಿಲ್ಲಾ ಆಸ್ಪತ್ರೆಯ ನೇತ್ರ ತಜ್ಞ ಡಾ. ಈಶ್ವರಪ್ಪ ಮತ್ತು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ತಜ್ಞ ಡಾ. ಎ.ವಿ. ಪ್ರಸಾದ್‌ ಶಿಬಿರದಲ್ಲಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿ, ಗ್ರಾಮದಲ್ಲಿ ಸ್ಪಷ್ಟ ಬೆಳಕು ಕಾಣಲಾಗದವರಿಗೆ ಬೆಳಕು ತೋರಿಸಿದ್ದಾರೆ.

ಶಿಬಿರದ ಹಣಕಾಸಿನ ಖರ್ಚನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಡಾ. ಶರಣಪ್ಪ ನೋಡಿಕೊಂಡಿದ್ದಾರೆ. ಕಲಾಸಂಘದ ನೇತೃತ್ವದಲ್ಲಿ ನಡೆದ ಈ ನೇತ್ರ ಚಿಕಿತ್ಸಾ ಶಿಬಿರವನ್ನು ಗ್ರಾಮಸ್ಥರು ಗ್ರಾಮ ಪಂಚಾಯತ್‌ ಸದಸ್ಯರು ಪ್ರೋತ್ಸಾಹಿಸಿದ್ದಾರೆ ಎಂದು ಕಲಾಕುಸುಮದ ಕಾರ್ಯಕರ್ತ, ಸಿ. ಗುರುಸಿದ್ಧ ಮೂರ್ತಿ ಹೇಳುತ್ತಾರೆ. ದೇಶದಲ್ಲಿ ಕೇವಲ 20 ಸಾವಿರ ನೇತ್ರ ವೈದ್ಯರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ಒಬ್ಬರು ನೇತ್ರ ವೈದ್ಯರಿದ್ದಾರಂತೆ. ಈ ಅಂಕಿ ಅಂಶವನ್ನು ಆರೋಗ್ಯ ಸಚಿವಾಲಯದ ಮೂಲಗಳು ತಿಳಿ-ಸಿ-ವೆ.

ದೊಡ್ಡ ಉಳ್ಳಾ-ರ್ತಿ-ಯ-ಲ್ಲಿ ನಡೆ-ದ-ದ್ದು ಬೆಳ-ಕು ನೀಡು-ವ ಕಾರ್ಯ-ಕ್ರ-ಮ. ಇಂಥಾ ಕಾರ್ಯಕ್ರ-ಮ-ಗ-ಳು ಹಳ್ಳಿ-ಹ-ಳ್ಳಿ-ಗೂ ವಿಸ್ತ-ರಿ-ಸಿ-ದಾ-ಗ ಕಾಸಿ-ಲ್ಲ-ದೆ ಕಣ್ಣ ದೃಷ್ಟಿ ಕಳ-ಕೊಂ-ಡ-ವ-ರು ದೃಷ್ಟಿ-ವಂ-ತ-ರಾ-ಗ-ಲು ಸಾಧ್ಯ. ನಿಮ್ಮೂ-ರಿ-ನ-ಲ್ಲೂ ಇಂಥಾ ಕಾರ್ಯ-ಕ್ರ-ಮ ನಡೆ-ದ-ರೆ ಬರೆಯಿ-ರಿ.

(ನಮ್ಮ ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X