Get Updates
Get notified of breaking news, exclusive insights, and must-see stories!

ನೆರೆಮನೆಯಲ್ಲಿ ನೆರೆಹಾವಳಿ ಬೆದರಿಕೆ

ಬೆಂಗಳೂರು : ರಾಜ್ಯಾದ್ಯಂತ ಮಳೆಯ ಅಬ್ಬರದ ಜ್ವರ ಇಳಿಯತೊಡಗಿಂತೆಯೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಒರಿಸ್ಸಾಗಳು ಮತ್ತೊಮ್ಮೆ ಚಂಡಮಾರುತದ ಭಯದಿಂದ ತತ್ತರಿಸತೊಡಗಿವೆ.

ಪಶ್ಟಿಮಬಂಗಾಳದಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಮತ್ತೊಮ್ಮೆ ವಿಪತ್ತು ಎದುರಿಸಲು ಸಜ್ಜಾಗತೊಡಗಿರುವ ಎರಡೂ ರಾಜ್ಯಗಳ ತೀರಪ್ರದೇಶದ ಜನ ಭಯಭೀತರಾಗಿದ್ದಾರೆ. ತೀರಪ್ರದೇಶದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಕುರಿತು ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿದ ಸುದ್ದಿ ಬಂದಿದೆ. ಬಂಗಾಳಕೊಲ್ಲಿ ತೀರಪ್ರದೇಶದ ನೈರುತ್ಯಕ್ಕೆ 500 ಕಿ.ಮೀ ವ್ಯಾಪ್ತಿಯಲ್ಲಿ ಕೇಂದ್ರೀಕೃತಗೊಂಡಿರುವ ಚಂಡಮಾರುತದಿಂದ ಭಾರೀ ಮಳೆ ನಿರೀಕ್ಷೆ ಇದೆ.

ಗಂಟೆಗೆ 60ರಿಂದ 65 ಕಿ.ಮೀ ವೇಗದಲ್ಲಿ ಬೀಸಲಿರುವ ಚಂಡಮಾರುತದಿಂದಾಗಿ ತೀರಪ್ರದೇಶದ ಮೀನುಗಾರರು ಕಡಲಿಗಿಳಿಯಬಾರದೆಂದು ಎಚ್ಚರಿಕೆ ನೀಡಲಾಗಿದೆ. ಚಂಡಮಾರುತ ಈಶಾನ್ಯ ದಿಕ್ಕಿನತ್ತ ಚಲಿಸುತ್ತಿದೆ. ಎರಡೂ ರಾಜ್ಯಗಳ ತೀರಪ್ರದೇಶದ ಜನ ತಮ್ಮ ಕಣ್ಣು-ಕಿವಿಗಳನ್ನು ಟೀವಿ, ರೇಡಿಯೋದತ್ತಲೇ ಇಟ್ಟಿದ್ದಾರೆ.

ಇತ್ತ ರಾಜ್ಯದ ಉತ್ತರ ಒಳನಾಡು ಮತ್ತು ತೀರಪ್ರದೇಶದ ಕೆಲವೆಡೆ ಮಳೆಯಾಗಿದೆ. ಒಟ್ಟಾರೆ ಮುಂಗಾರು ದುರ್ಬಲವಾಗಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಉಷ್ಣಾಂಶದಲ್ಲೂ ಗರಿಷ್ಠ ಬದಲಾವಣೆ ಕಂಡುಬಂದಿದೆ. ಮಂಗಳವಾರದ ಮುಂಜಾನೆಯವರೆಗಿನ ಹವಾಮನ್ಸೂಚನೆಯಂತೆ ರಾಜ್ಯದ ಕೆಲವೆಡೆ ಮಳೆಯಾಗುವ ಸಂಭವ ಇದೆ ಎಂದು ಹಾವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

Click here to go to top

ಮುಖಪುಟ / ಹವಾ ಹವಾ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+