ಮ-ಡಿ-ಕೇ-ರಿ- ತಲಕಾವೇರಿ ತಲುಪುವ ಬಗೆ
ಬೆಂಗಳೂರಿನಿಂದ ಮಡಿಕೇರಿಗೆ 6 ಗಂಟೆಗಳ ಪ್ರಯಾಣ. ಕೆಎಸ್ಸಾರ್ಟಿಸಿಯಲ್ಲಿ ಹೋ-ಗುವುದಾದರೆ ಬೇಕಾದಷ್ಟು ಲಕ್ಷುರಿ ಹಾಗೂ ಸೆಮಿ ಲಕ್ಷುರಿ ಬಸ್‌ಗಳಿವೆ. ಖಾಸಗಿ ಬಸ್‌ಗಳೂ ಇವೆ. ಬೆಂಗಳೂರಿನ ಪೂರ್ಣಿಮಾ ಟ್ರಾವೆಲ್ಸ್‌ನ್ನು ಸಂಪರ್ಕಿಸಿದರೆ ನಿಮಗೆ ವಸತಿ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಪ್ರತಿ ರಾತ್ರಿ ಪೂರ್ಣಿಮಾ ಟ್ರಾವೆಲ್ಸ್‌ನವರ ಲಕ್ಷುರಿ ಬಸ್ ಬೆಂಗಳೂರಿನಿಂದ ಮಡಿಕೇರಿಗೆ ಹೊರಡುತ್ತದೆ. ನೀವು ಮೈಸೂರು ಟೂರ್ ಹಾಕಿಕೊಂಡಿದ್ದರೂ ತಲಕಾವೇರಿ ಕಾರ್ಯಕ್ರಮ ಹಾಕಿಕೊಳ್ಳಬಹುದು. ಮೈಸೂರಿನಿಂದ ಮಡಿಕೇರಿಗೆ ಕೇವಲ ಮೂರುವರೆ ಗಂಟೆ ಪ್ರಯಾಣ. ಒಂದೇ ದಿನದಲ್ಲಿ ತಲಕಾವೇರಿ ನೋಡಿ ಮೈಸೂರಿಗೆ ಹಿಂತಿರುಗಬಹುದು. ಮಡಿಕೇರಿಯಿಂದ ತಲಕಾವೇರಿ ಬಹಳ ದೂರವಿಲ್ಲ , ಕೇವ-ಲ 42 ಕಿಲೋ ಮೀಟರ್ ದೂರ. ಬೆಟ್ಟಗಳನ್ನು ಹತ್ತಿ ಇಳಿದು, ತಲಕಾವೇರಿ ತಲುಪುವುದಕ್ಕೆ ಅಲ್ಲಿನ ಖಾಸಗಿ ಬಸ್ಸುಗಳಿಗೆ ಗಂಟೆಯವಧಿ ಬೇಕಾಗುತ್ತದೆ.
ವಸತಿ ವ್ಯವಸ್ಥೆ : ತಲಕಾವೇರಿಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವುದಕ್ಕೆ ಅಂತ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಸತಿಗೃಹ ನಿರ್ಮಿಸಿತ್ತು. ಆದರೆ ಅದು ಪ್ರವಾಸಿಗರ ಸ್ನಾನ-ಶಯನಕ್ಕೆ ಯೋಗ್ಯವಾಗಿಲ್ಲ. ತಲಕಾವೇರಿಯಲ್ಲಿ ವಸತಿ ಗೃಹ ನಿರ್ಮಿಸಬೇಕೆಂದು ಕಾನೂನು ಮತ್ತು ಸುವ್ಯವಸ್ಥೆಯ ಮಾಜಿ ಸಚಿವರಾಗಿದ್ದ ಕೊಡಗಿನ ಎಂ. ಸಿ. ನಾಣಯ್ಯ ಒಂದು ಆದೇಶ ಹೊರಡಿಸಿದ್ದರು. ಕೊಡಗು ಜಿಲ್ಲಾಧಿಕಾರಿ ಜಯಂತಿ ವಸತಿಗೃಹ ನಿರ್ಮಾಣ ಕುರಿತಂತೆ ರೂಪು ರೇಷೆಗಳನ್ನು ಸಿದ್ಧ ಪಡಿಸಿ ಸರಕಾರಕ್ಕೆ ಸಲ್ಲಿಸಿ ತಿಂಗಳಾಯಿತಷ್ಟೇ. ಒಟ್ಟಿನಲ್ಲಿ ಹೇಳುವುದಾದರೆ ತಲಕಾವೇರಿಯಲ್ಲಿ ಪ್ರವಾಸಿಗರಿಗೊಂದು ವಸತಿ ಗೃಹ ನಿರ್ಮಾಣಕ್ಕೆ, ಅಥವ ಇರುವ ವಸತಿಗೃಹದ ಜೀರ್ಣೋದ್ಧಾರಕ್ಕೆ ಕಾಗದ ಪತ್ರಗಳ ಮೂಲಕ ಗಬೇಕಾದ ಕೆಲಸ ಭರದಿಂದ ನಡೆಯುತ್ತಿದೆ ಅಷ್ಟೇ. ಇನ್ನೂ ಶಂಕು ಸ್ಥಾಪನೆ ಆಗಿಲ್ಲ. ಅಲ್ಲಿಯವರೆಗೆ ನಿಮಗೆ ಮಡಿಕೇರಿಯ ಬ್ರಹ್ಮಗಿರಿ ಲಾಡ್ಜ್ ನಂತಹ ಸಣ್ಣ ಪುಟ್ಟ ಲಾಡ್ಜ್‌ಗಳಿವೆ. ಸರಿ. ತಲಕಾವೇರಿಗೆ ಹೋಗುವ ಪ್ಲಾನ್ ಇದೆಯೇ... ಅನು-ಭ-ವ-ದ ಬಗ್ಗೆ ನಮಗೆರಡು ಸಾಲು ಬರೆದು ತಿಳಿಸುತ್ತೀರಾ ?
ಮುಖಪುಟ / ನೋಡು ಬಾ ನಮ್ಮೂರ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications