ಇಂದು ರಾತ್ರಿ ಅಥವಾ ನಾಳೆ ರಾಜ್‌ಕುಮಾರ್ ಬಿಡುಗಡೆ : ಕರುಣಾನಿಧಿ
ಚೆನ್ನೈ : ರಾಜ್‌ಕುಮಾರ್ ಅವರ ಬಿಡುಗಡೆ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಆಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಸೋಮವಾರ ಇಲ್ಲಿ ಹೇಳಿದ್ದಾರೆ.
ಈ ಮಧ್ಯೆ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಲು ಒಪ್ಪಿದ್ದಾನೆ. ಆದರೆ, ರಾಜ್‌ರನ್ನು ಬಿಡುಗಡೆ ಗೊಳಿಸಿದ ಕೀರ್ತಿ ಯಾರಿಗೆ ಸಲ್ಲಬೇಕು ಎನ್ನುವ ಬಗ್ಗೆ ಗೋಪಾಲ್ ಹಾಗೂ ನೆಡುಮಾರನ್ ತಂಡದ ನಡುವೆ ಜಗಳವಾಗಿ, ಕೊನೆಗೂ ಅವರು ಒಂದು ಒಪ್ಪಂದಕ್ಕೆ ಬಂದಾಗಿದೆ. ಅದರಂತೆ ಈಗ ರಾಜ್‌ಕುಮಾರ್ ಅವರನ್ನು ನಕ್ಕೀರನ್ ಗೋಪಾಲ್ ಅವರೂ, ಉಳಿದಿಬ್ಬರು ಒತ್ತೆಯಾಳುಗಳನ್ನು ನೆಡುಮಾರನ್ ಅವರೂ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಚೆನ್ನೈಗೆ ಕರೆತರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಸೋಮವಾರವೇ ಗೋವಿಂದ್‌ರಾಜ್ ಜತೆ ನೆಡುಮಾರನ್ ಬರುವ ಸಾಧ್ಯತೆ ಇದೆ. ರಾಜ್‌ಕುಮಾರ್ ಅವರು ಬಿಡುಗಡೆ ಆಗಿದ್ದಾರೆ ಎಂದು ಭಾನುವಾರ ರಾತ್ರಿಯಿಂದಲೇ ಇದ್ದ ವದಂತಿಗಳೆಲ್ಲವೂ ನಿಜವಾದಂತಾಗಿದೆ. ಅಡಗುತಾಣದಲ್ಲಿ ಗೋಪಾಲ್ ಹಾಗೂ ನೆಡುಮಾರನ್ ನಡುವೆ ಎದ್ದ ವಿವಾದ ರಾಜ್‌ಕುಮಾರ್ ನಾಡಿಗೆ ಬರುವುದನ್ನು ವಿಳಂಬಗೊಳಿಸಿದೆ. ಆನಂತರದ ಒಪ್ಪಂದದ ರೀತ್ಯ ರಾಜ್ ಬಿಡುಗಡೆಯ ಘೋಷಣೆಯನ್ನು ನೆಡುಮಾರನ್ ಮಂಗಳವಾರ ಬೆಳಗ್ಗೆ ವಿದ್ಯುಕ್ತವಾಗಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಎರಡೂ ತಂಡಗಳ ನಡುವೆ ಉಂಟಾದ ವೈಯಕ್ತಿಕ ಪ್ರತಿಷ್ಠೆ ಪರಾಕಾಷ್ಠೆಯನ್ನು ಮುಟ್ಟಿ, ರಾಜಣ್ಣ ನಾಡಿಗೆ ಬರಲು ಮಂಗಳವಾರದ ವರೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ರಾಜ್ ಅಪಹರಣದ ನಂತರದ ಎಲ್ಲ ಬೆಳವಣಿಗೆಗಳನ್ನೂ ನಾಡಿಗೆ ತಲುಪಿಸುತ್ತಿದ್ದ ನಕ್ಕೀರನ್ ಪತ್ರಿಕೆಗೂ ಮೊದಲು ರಾಜ್ ಬಿಡುಗಡೆಯ ಸುದ್ದಿಯನ್ನು ಬಹಿರಂಗಪಡಿಸಿದ ನೆಡುಮಾರನ್ ಕಚೇರಿಯ ಪರಂಧಾಮನ್ ನಡೆವಳಿಕೆಯ ಬಗ್ಗೆ ಕಾಮರಾಜ್ ಸಿಟ್ಟಿಗೆದ್ದಿದ್ದು ಈಗ ಗೌಪ್ಯವಾಗಿ ಉಳಿದಿಲ್ಲ.
ರಾಜ್‌ಕುಮಾರ್ ಬಿಡುಗಡೆಯ ಖ್ಯಾತಿ ನೆಡುಮಾರನ್‌ಗೆ ಬಂದರೆ, ತಮಿಳು ವಿಮೋಚನಾ ಪಡೆಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೇರುತ್ತದೆ ಎಂಬ ಬಗ್ಗೆ ನಕ್ಕೀರನ್ ಪತ್ರಿಕೆ ಸಿಡಿಮಿಡಿಗೊಂಡಿದೆ. ಅಲ್ಲದೆ ಇದುವರೆಗೆ ರಾಜ್ ಬಿಡುಗಡೆ ಪ್ರಕ್ರಿಯೆಯಲ್ಲಿ ಮೊದಲಿನಿಂದಲೂ ಪಾತ್ರವಹಿಸಿರುವ ಪತ್ರಿಕೆಯ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತಾಗುತ್ತದೆ ಎಂಬ ಭೀತಿಯಿಂದ ಈ ಶುಭ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿತ್ತು.
ತಮಿಳುನಾಡು ಪೊಲೀಸ್ ಮೂಲಗಳ ಹೇಳಿಕೆ : ಈಗಾಗಲೇ ವೀರಪ್ಪನ್ ಅಡಗುತಾಣದಿಂದ ಡಾ. ರಾಜ್‌ಕುಮಾರ್ ಅವರು ಹೊರಬಂದಿದ್ದು, ಕಾಡಿನ ಮಧ್ಯದಲ್ಲಿ ಗೋಪಾಲ್ ಹಾಗೂ ನೆಡುಮಾರನ್ ಜತೆಯಲ್ಲಿದ್ದಾರೆ. ಸಂಧಾನಕಾರರ ತಂಡ ಒತ್ತೆಯಾಳುಗಳೆಲ್ಲರ ಸಹಿತ, ಕಾಡಿನಿಂದ ಸತ್ಯಮಂಗಲ ಅರಣ್ಯ ಪ್ರದೇಶದತ್ತ ಹೊರಟಿದ್ದು, ಸೋಮವಾರ ಮುಂಜಾನೆ ಸತ್ಯಮಂಗಲ ಅರಣ್ಯ ಪ್ರದೇಶದ ಅಂಚಿನಲ್ಲಿರುವ ನಾಡನ್ನು ತಲುಪುತ್ತಿದ್ದಾರೆ. ಅಲ್ಲಿ ಈಗಾಗಲೇ ರಾಜ್‌ಕುಮಾರ್ ಅವರ ಶುಶ್ರೂಷೆಗಾಗಿ ಸಿದ್ದವಾಗಿರುವ ಆ್ಯಂಬುಲೆನ್ಸ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಬಳಿಕ, ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಚೆನ್ನೈಗೆ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications