ಚೆನ್ನೈಗೆ ಬರುವಂತೆ ರಾಜ್ ಕುಟುಂಬದವರಿಗೆಕರುಣಾನಿಧಿ ಸೂಚನೆ
ಚೆನ್ನೈ : ರಾಜ್‌ಕುಮಾರ್, ಗೋವಿಂದರಾಜು ಹಾಗೂ ನಾಗೇಶ್ ಅವರು ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಂಭವ ಇದ್ದು, ಕೂಡಲೇ ಚೆನ್ನೈಗೆ ಹೊರಡಲು ಸಿದ್ಧವಾಗಿರುವಂತೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಸೂಚನೆ ನೀಡಿದ್ದಾರೆ.
ಈ ವಿಷಯವನ್ನು ಕರುಣಾನಿಧಿ ಅವರ ಕಚೇರಿ ಮೂಲಗಳು ದೃಢಪಡಿಸಿಲ್ಲವಾದರೂ, ಕರುಣಾನಿಧಿ ಅವರು ವೈಯಕ್ತಿಕವಾಗಿ ಡಾ. ರಾಜ್‌ಕುಮಾರ್ ಕುಟುಂಬದವರಿಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್‌ಕುಮಾರ್ ಬಿಡುಗಡೆಯನ್ನೇ ತಮ್ಮ ಸರಕಾರದ ಸಾಧನೆ ಎಂದು ಬಿಂಬಿಸಲು ತವಕಿಸುತ್ತಿರುವ ಕರುಣಾನಿಧಿ ಅವರ ನೇತೃತ್ವದ ಸರಕಾರ ಸೋಮವಾರ ಯಾವುದೇ ಕ್ಷಣದಲ್ಲಿ ರಾಜ್‌ಕುಮಾರ್ ಬಿಡುಗಡೆ ಮಾಡಿಸುವ ಪ್ರಯತ್ನ ನಡೆಸಿದೆ.
ರಾಜ್‌ಕುಮಾರ್ ಅವರೊಂದಿಗೆ ತಾವು ಟಿ.ವಿ. ಚಾನೆಲ್‌ಗಳ ಕ್ಯಾಮಾರಾ ಮುಂದೆ ಹಾಜರಾದಾಗ, ತಮ್ಮ ಜತೆಯಲ್ಲಿ ಡಾ. ರಾಜ್‌ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುತ್ರರಾದ ಶಿವರಾಜ್, ರಾಘವೇಂದ್ರ ಹಾಗೂ ಪುನೀತ್ ಇರಬೇಕು ಎಂದು ಕರುಣಾನಿಧಿ ಬಯಸಿದ್ದಾರೆ ಎಂದು ಚೆನ್ನೈನ ಮೂಲಗಳು ತಿಳಿಸಿವೆ.
ಡಾ. ರಾಜ್‌ಕುಮಾರ್ ಭಾನುವಾರ ರಾತ್ರಿಯೇ ಬಿಡುಗಡೆ ಆಗುತ್ತಾರೆ. ನೆಡುಮಾರನ್ ತಮ್ಮ ಸಂಧಾನದಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಗಾಳಿಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಬಾನೆತ್ತರದಲ್ಲಿ ಹಾರುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಕಣ್ಣೂ ಈಗ ಚೆನ್ನೈನತ್ತ ವಾಲಿದೆ. ಟಾಡಾ ಬಂದಿಗಳ ಬಿಡುಗಡೆ ಎಂದು ಆಗುತ್ತದೆಂದು ದೆಹಲಿಯತ್ತ ಕೇಂದ್ರೀಕೃತವಾಗಿದ್ದ ಎಲ್ಲ ಪತ್ರಕರ್ತರ ಮೈ - ಮನಗಳ ಈಗ ಚೆನ್ನೈ ಸಚಿವಾಲಯ ಕಟ್ಟಡಗಳಲ್ಲಿ ಸುಳಿದಾಡುತ್ತಿವೆ.
ಈರೋಡ್, ಕೊಯಮತ್ತೂರು ಅರಣ್ಯದ ಬಳಿ ರಾಜ್‌ಕುಮಾರ್ ಬಿಡುಗಡೆ ಯಾಗುತ್ತದೆ ಎಂಬ ವದಂತಿಗಳೂ ಇದ್ದು, ಪತ್ರಕರ್ತರು ಹಾಗೂ ಅಭಿಮಾನಿಗಳು ತಾಳಮಲೈ ಕಾನನ ಪ್ರದೇಶದಲ್ಲೂ ಬೀಡು ಬಿಟ್ಟಿದ್ದಾರೆ.
ಬೆಂಗಳೂರು ವರದಿ : ಕರುಣಾನಿಧಿ ಅವರಿಂದ ಡಾ. ರಾಜ್‌ಕುಮಾರ್ ಕುಟುಂಬದವರಿಗೆ ಸಂದೇಶ ಬಂದಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಡಾ. ರಾಜ್‌ಕುಮಾರ್ ಅವರ ಕುಟುಂಬದವರನ್ನು ಸಂಪರ್ಕಿಸಲು ನಮ್ಮ ಪ್ರತಿನಿಧಿಗಳು ಸಂಪರ್ಕಿಸಿದಾಗ ಶಿವರಾಜ್, ರಾಘವೇಂದ್ರ ಅಥವಾ ಪುನೀತ್ ಅವರ್ಯಾರೂ ದೂರವಾಣಿಯಲ್ಲಿ ಸಿಕ್ಕಿಲ್ಲ. ಆದರೆ, ರಾಜ್‌ಕುಮಾರ್ ಕುಟುಂಬದವರು ಇನ್ನು ಕೆಲವೇ ಗಂಟೆಗಳಲ್ಲಿ ಚೆನ್ನೈಗೆ ತೆರಳಲಿದ್ದಾರೆ ಎಂದು ಡಾ. ರಾಜ್‌ಕುಮಾರ್ ಕುಟುಂಬದ ಆಪ್ತ ವಲಯಗಳು ತಿಳಿಸಿವೆ.
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications