Get Updates
Get notified of breaking news, exclusive insights, and must-see stories!

ರಾಜಕುಮಾರ್‌ ಬಿಡುಗಡೆ ಆಗೇಬಿಟ್ಟಿದೆ ಎಂಬ ಸುದ್ದಿ ನಿಜಾನಾ?

ಬೆಂಗಳೂರು: ರಾಜ್‌ ನಾಡಿಗೆ ಬಂದೇಬಿಟ್ಟರು ಎಂಬ ಸುದ್ದಿಗಳ ಪ್ರವಾಹ ಭಾನುವಾರ ಮಧ್ಯಾಹ್ನದಿಂದಲೂ ಉಕ್ಕಿ ಹರಿಯುತ್ತಲೇ ಇದೆ. ಅವರನ್ನು ಸ್ವಾಗತಿಸಲು ಸಿದ್ಧತೆಗಳೂ ಭರದಿಂದ ನಡೆಯುತ್ತಿವೆ ಎಂಬಂತಹ ಸುದ್ದಿಗಳೂ ಅಲೆಮಾರಿಯಂತೆ ಸುತ್ತುತ್ತಿವೆ. ಆದರೆ ವಾಸ್ತವವಾಗಿ ನೆಡುಮಾರನ್‌ ಮತ್ತು ವೀರಪ್ಪನ್‌ ನಡುವೆ ಇನ್ನೂ ಸಂಧಾನ ಮುಂದುವರೆದಿದ್ದು ಸೋಮವಾರ ಸಂಜೆ ಹೊತ್ತಿಗೆ ಖಚಿತ ವರ್ತಮಾನ ಬರಬಹುದೆಂದು ನಕ್ಕಿರನ್‌ ಪತ್ರಿಕೆ ಸಹಸಂಪಾದಕ ಕಾಮರಾಜ್‌ ಸೋಮವಾರ ಮಧ್ಯಾನ್ಹದ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.

ರಾಜ್‌ ಬಿಡುಗಡೆ ಬಗ್ಗೆ ಈವರೆಗಿನ ವರದಿಗಳನ್ನು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಸೇರಿದಂತೆ ಯಾವುದೇ ಸರಕಾರಗಳು ಅಧಿಕೃತವಾಗಿ ಖಚಿತಪಡಿಸಿಲ್ಲ. ಒಟ್ಟಾಗಿ ಹೇಳಬೇಕೆಂದರೆ ಎಲ್ಲವೂ-ಹೇಳಲಾಗಿದೆ, ಎನ್ನಲಾಗಿದೆ, ಮೂಲಗಳು ತಿಳಿಸಿವೆ, ನಿಕಟವರ್ತಿಗಳು ಹೇಳಿದ್ದಾರೆ ಎಂಬಂತಹ ಸುದ್ದಿಗಳೇ ಆಗಿವೆ.

ಈರೋಡ್‌ ಆಸ್ಪತ್ರೆಯಲ್ಲಿ ರಾಜ್‌ : ಇದೀಗ ಹುಟ್ಟಿಕೊಂಡಿರುವ ಸುದ್ದಿಗಳ ಪ್ರಕಾರ ರಾಜ್‌ ಈರೋಡ್‌ನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು. ಇನ್ನೂ ಕೆಲವು ವರ್ತಮಾನಗಳ ಪ್ರಕಾರ ರಾಜ್‌ ಮತ್ತು ಸಂಗಡಿಗರೊಂದಿಗೆ ಸಂಧಾನಕಾರರು ಚೆನ್ನೈ ಕಡೆ ಧಾವಿಸುತ್ತಿದ್ದಾರೆ.

ಸಜ್ಜಾದ ಗಾಜನೂರು : ಬಿಡುಗಡೆಯ ವರ್ತಮಾನಕ್ಕೆ ತುರ್ತಾಗಿ ಸ್ಪಂದಿಸಿರುವ ರಾಜ್‌ ಹುಟ್ಟೂರಾದ ಗಾಜನೂರು ಕನ್ನಡ ನಾಡಿನ ಹೆಮ್ಮೆಯ ಕುವರನ ಸ್ವಾಗತಕ್ಕೆ ಸಿದ್ಧಗೊಂಡಿದೆ. ರಾಜ್‌ ಮನೆಮುಂದೆ ಜನಜಂಗುಳಿ ಮಡುಗಟ್ಟಿ ನಿಂತಿದೆ. ಬೆಂಗಳೂರಿನಲ್ಲೂ ಕೂಡಾ ರಾಜ್‌ ಕುಟುಂಬ ಯಾವುದೇ ಕ್ಷಣದಲ್ಲಿ ಹೊರಡಲು ಸಿದ್ಧವಾಗಿ ನಿಂತಿದೆ. ಇನ್ನೊಂದು ಸುದ್ದಿಯ ಪ್ರಕಾರ ರಾಜ್‌ ಅವರನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್‌ ಅನ್ನು ರಾಜ್‌ ಕುಟುಂಬದವರು ಬಾಡಿಗೆ ಪಡೆದು ಸಂದೇಶಕ್ಕಾಗಿ ಕಾಯುತ್ತಿದ್ದಾರೆ.

ಬಿಗಿಭದ್ರತೆ: ಈ ನಡುವೆ ಬೆಂಗಳೂರಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವ್ಯಾಪಕ ಬಂದೋಬಸ್ತ್‌ನ ಉಸ್ತುವಾರಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳೇ ಬೀದಿಗಿಳಿದಿದ್ದಾರೆ. ಕಳೆದ 76 ದಿನಗಳಿಂದ ವೀರಪ್ಪನ್‌ ವಶದಲ್ಲಿರುವ ರಾಜ್‌ ಮತ್ತು ಸಂಗಡಿಗರ ಅಪಹರಣ ಪ್ರಕರಣಕ್ಕೆ ಅಂತಿಮ ಪರಿಹಾರ ಸಿಕ್ಕೇ ಸಿಗಬಹುದೆಂಬ ಬಹುನಿರೀಕ್ಷಿತ ಸುದ್ದಿಗೆ ಎಲ್ಲರೂ ಬಿಡುಗಣ್ಣಾಗಿ ಕಾಯುತ್ತಿದ್ದಾರೆ.

(ಇನ್‌ಫೊ ವಾರ್ತೆ)

  • ಮುಖಪುಟ / ರಾಜ್‌ ಅಪಹರಣ
  • More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+