Get Updates
Get notified of breaking news, exclusive insights, and must-see stories!

ದತ್ತು ತೆಗೆ-ದು-ಕೊ-ಂಡ ಕುತ್ತೆ-ತ್ತೂ-ರ ಕು-ತ್ತಿ-ಗೆ ಹಿಚು-ಕು-ತ್ತಿ-ರು-ವ ಎಂಆ-ರ್‌-ಪಿ-ಎ-ಲ್‌

ಇನ್ಫೋ ವಿಶೇಷ ವರದಿ

ಮಂಗಳೂರು : ಪರಿಸರ ಮಾಲಿನ್ಯದ ಭೀತಿ, ಪ್ರತಿಭಟನೆಗಳ ನಡುವೆ ಕೆಲವು ಜೀವಗಳನ್ನು ಬಲಿ ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಮಂಗಳೂರು ತೈಲಾಗಾರ, ಎಂಆರ್‌ಪಿಎಲ್‌ ತನ್ನ ಸುತ್ತ ಮುತ್ತಲಿನ ಜನರನ್ನು ಶಾಪವಾಗಿ ಕಾಡತೊಡಗಿದೆ.

ಆಯಿಲ್‌ ಕ್ಯಾಚರ್‌ಗಳನ್ನು ಅಳವಡಿಸಿದ್ದೇವೆ ಎಂದು ಎಂಆರ್‌ಪಿಎಲ್‌ ಆಡಳಿತ ಹೇಳುತ್ತಿದೆ. ಆದರೆ ತೈಲಾಗಾರದಿಂದ ಹೊರ ಬರುವ ತ್ಯಾಜ್ಯ ನೀರಿನಲ್ಲಿ ತೈಲಾಂಶವೂ ಹರಿದು ಬರುತ್ತಿದ್ದು, ಇದು ಕುತ್ತೆತ್ತೂರು ಸುತ್ತಮುತ್ತಲಿನ ಪ್ರದೇಶದ ಕೃಷಿ ಭೂಮಿಯನ್ನು ನಿರುಪಯುಕ್ತ ಗೊಳಿಸಿದೆ, ಮಾತ್ರವಲ್ಲ ಶಾಶ್ವತ ಬಂಜರು ಭೂಮಿಯನ್ನಾಗಿ ಮಾಡಿದೆ.

ನೀರು ಹರಿಯುವ ಹಳ್ಳದಲ್ಲಿಯೂ ಎಂಆರ್‌ಪಿಎಲ್‌ ತೈಲ ಬರುತ್ತಿದೆ. ನಮ್ಮ ದೂರಿನತ್ತ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯವರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರು-ತ್ತಿ-ದ್ದಾ-ರೆ.

1995ರಲ್ಲಿ ಕಾರ್ಯಾರಂಭ ಮಾಡಿದ ಎಂಆರ್‌ಪಿಎಲ್‌ ತನಗಾಗಿ ಜಾಗ ನೀಡಿದವರಿಗೆ ಕೊಟ್ಟ ಭರವಸೆಗಳಲ್ಲಿ ಹೆಚ್ಚಿನವುಗಳನ್ನು ಈಡೇರಿಸಿಲ್ಲ. ಇಲ್ಲಿ ಉದ್ಯೋಗಕ್ಕಾಗಿ ಸ್ಥಳೀಯರು ದೀರ್ಘ ಕಾಲ ಹೋರಾಟ ನಡೆಸಿದ್ದಾರೆ. ಧರಣಿ ಕುಳಿತವರನ್ನೆಲ್ಲಾ ಬಳ್ಳಾರಿ ಜೈಲಿಗೆ ರವಾನಿಸಿ ಕೈ ತೊಳೆದುಕೊಂಡ ಆಪಾದನೆಯೂ ಎಂಆರ್‌ಪಿಎಲ್‌ ಮತ್ತು ಜಿಲ್ಲಾಡಳಿತದ ಮೇಲಿದೆ.

ತ್ಯಾಜ್ಯದಿಂದ ಕೃಷಿ ಭೂಮಿಗೆ ತೊಂದರೆ : ಎಂ ಆರ್‌ಪಿಎಲ್‌ ಸಮೀಪ ಇರುವ ಕುತ್ತೆತ್ತೂರು ತೋಡು ಈಗ ಎಂ ಆರ್‌ಪಿಎಲ್‌ ತ್ಯಾಜ್ಯದಿಂದ ಕಲುಷಿತವಾಗಿದೆ. ಇದರಲ್ಲಿ ಸೆಪ್ಟೆಂಬರ್‌ ಉತ್ತರಾರ್ಧದಲ್ಲಿ ವಿಷಯುಕ್ತ ಲ್ಯೂಬ್‌ ಆಯಿಲ್‌ ಹರಿದುಬರತೊಡಗಿದೆ. ವಿಶೇಷವೆಂದರೆ ಇದು ಕಾರ್ಖಾನೆಯ ಆಯಿಲ್‌ ಅಲ್ಲ, ಸ್ಥಳೀಯರೇ ಯಾರೋ ಇಲ್ಲಿ ಆಯಿಲ್‌ ತಂದು ಸುರಿಯತೊಡಗಿದ್ದಾರೆ ಎಂದು ಕಾರ್ಖಾನೆಯ ಆಡಳಿತ ಪೊಲೀಸರಿಗೆ ದೂರು ನೀಡಿದೆ. ಸುರತ್ಕಲ್‌ ಪೊಲೀಸರು ಕೆಲವರನ್ನು ಕರೆದು ವಿಚಾರಿಸಿಯೂ ಆಗಿದೆ.

ಮೊದಲೇ ಕೃಷಿ ಮಾಡುವುದು ಸಾಧ್ಯವಾಗದೆ ನಾವು ಬದುಕುವುದು ಹೇಗೆಂಬ ಸಮಸ್ಯೆಯಲ್ಲಿದ್ದೇವೆ. ಹೀಗೆ ಆಯಿಲ್‌ ತಂದು ಹಾಕುವಷ್ಟು ಹಣಕಾಸು ನಮ್ಮ ಬಳಿ ಇದೆಯೇ ಎಂಬುದು ಎಂಆರ್‌ಪಿಎಲ್‌ ತ್ಯಾಜ್ಯದಿಂದ ಸಂತ್ರಸ್ತರಾದವರ ಪ್ರಶ್ನೆ . ಎಂಆರ್‌ಪಿಎಲ್‌ ತ್ಯಾಜ್ಯದಿಂದ ಕೃಷಿ ಹಾನಿ ಅನುಭವಿಸಿದವರು ಕುತ್ತೆತ್ತೂರು ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಹೋರಾಟ ಮುಂದುವರೆಸಿದ್ದಾರೆ.

ತ್ಯಾಜ್ಯದಲ್ಲಿ ಹರಿ-ದು ಬರು-ವ ತೈಲದಿಂದ ಈ ಹಿಂದೆಯೂ ಭಾರಿ ಬೆಳೆ ಹಾನಿ ಆಗಿದೆ. ಈ ವರ್ಷದ ಎಪ್ರಿಲ್‌ 15ರಂದು ಕೃಷಿ ಇಲಾಖೆ ಸಲ್ಲಿಸಿದ ವರದಿಯಲ್ಲಿ ಎಂಆರ್‌ಪಿಎಲ್‌ನ ತ್ಯಾಜ್ಯದಿಂದ ಕುತ್ತೆತ್ತೂರು ಪ್ರದೇಶದಲ್ಲಿ ಕೃಷಿಗೆ ತೊಂದರೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ.

ಎಂ ಆರ್‌ಪಿಎಲ್‌ ತ್ಯಾಜ್ಯದ ಬಗ್ಗೆ ಕರ್ನಾಟಕ ಅಭಿವೃದ್ಧಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯಾಗಿದೆ. ಎಂ ಆರ್‌ಪಿಎಲ್‌ ಜತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಶಾಮೀಲಾಗಿದೆ ಎಂದು ಸುರತ್ಕಲ್‌ ಶಾಸಕ ವಿಜಯಕುಮಾರ್‌ ಶೆಟ್ಟಿಯವರೇ ಆರೋಪಿಸಿದ್ದಿದೆ. ವಿಚಿತ್ರವೆಂದರೆ ತ್ಯಾಜ್ಯದಲ್ಲಿ ತೈಲದ ಪ್ರಮಾಣ ಕಣ್ಣಿಗೆ ಕಾಣಿಸುವಂತಿದ್ದರೂ ಅದರಿಂದ ಅಪಾಯ ಇಲ್ಲ ಎಂಬ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂ-ದು ಹೇಳಿ-ದ್ದಾ-ರೆ. ಕುತ್ತೆತ್ತೂರು ಗ್ರಾಮವನ್ನು ಎಂ ಆರ್‌ಪಿಎಲ್‌ ದತ್ತು ಸ್ವೀಕರಿಸಿದೆ. ಇದರಿಂದಾಗಿ ಇಲ್ಲಿ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಇತ್ತ ಎಂಆರ್‌ಪಿಎಲ್‌ ಕೂಡ ಅಭಿವೃದ್ಧಿ ಕೆಲಸಗಳ ಬಗೆಗೆ ಆಸಕ್ತವಾಗಿಲ್ಲ . ಕುತ್ತೆತ್ತೂರನ್ನು ಯಾರು ಕಾಪಾಡಬೇಕು ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+