Get Updates
Get notified of breaking news, exclusive insights, and must-see stories!

-ಬಾ-ಬಾ-ಬು-ಡ-ನ್‌-ಗಿ-ರಿ: ದತ್ತ-ಮಾ-ಲೆ ಅಭಿ-ಯಾ-ನ ಸಪ್ತಾ-ಹ ಯಶ-ಸ್ವಿ

ಚಿಕ್ಕಮಗಳೂರು : ಬಾಬಾಬುಡನ್‌ಗಿರಿಯ ದತ್ತ ಪೀಠದಲ್ಲಿ ಭಾನುವಾರ ನಡೆದ ದತ್ತ ಮಾಲೆ ಅಭಿಯಾನ ಸಪ್ತಾಹದ ಸಮಾರೋಪದ ಕೊನೆಗೆ ನಡೆದ ಲಘು ಲಾಠಿ ಪ್ರಹಾರದ ಹೊರತಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ದತ್ತಪೀಠದಲ್ಲಿ ವಿಶೇಷ ದತ್ತ ಹೋಮ, ಪಡಿ ಅರ್ಪಣೆ, ಧರ್ಮ ಜಾಗೃತಿ ಸಭೆ ಮತ್ತು ಮಾಲೆ ವಿಸರ್ಜನೆ ಸಂಕಲ್ಪಗಳು ಕ್ರಮವಾಗಿ ನಡೆದವು. ಸುಮಾರು 3000ಕ್ಕೂ ಹೆಚ್ಚು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹುಲಿ ಭೇಟಿ : ದತ್ತ ಪೀಠದಲ್ಲಿ ಹೋಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಣ್ಣಳತೆಯ ದೂರದಲ್ಲಿ ಹುಲಿಯಾಂದು ಬಂದು ನಿಂತಿತ್ತು. ದತ್ತ ಹೋಮ ಪೂರ್ತಿಯಾಗುವವರೆಗೆ ದೂರದಿಂದಲೇ ದತ್ತ ಹೋಮವನ್ನು ವೀಕ್ಷಿಸಿದ ಹುಲಿ ನಂತರ ತನ್ನ ಪಾಡಿಗೆ ತೆರಳಿತು. ಈ ಘಟನೆಯಿಂದಾಗಿ ರೋಮಾಂಚನಗೊಂಡ ಭಕ್ತರು ಜಯ ಘೋಷ ಕೂಗಿದರು.

ಮುಂಜಾಗೃತಾ ಕ್ರಮವಾಗಿ ದತ್ತ ಪೀಠದ ಸುತ್ತ ಬಿಗಿ ಬಂದೋಬಸ್ತು ಮಾಡಲಾಗಿತ್ತು. ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ಆರು ಕಿ ಮೀ. ದೂರದಿಂದ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉರ್ದು ಭಾಷೆಯ ಕಮಾನಿನ ಮೇಲೆ ಕೇಸರಿ ಧ್ವಜ ಎಸೆದುದರಿಂದ ಉಂಟಾದ ಗಲಭೆಯನ್ನು ತಡೆಯಲು ಪೊ-ಲೀ-ಸ-ರು ಲಘು ಲಾಠಿ ಪ್ರಹಾರ ಮಾಡಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+